»   » ಹಾರರ್-ಥ್ರಿಲ್ಲರ್ 'ಲಾಸ್ಟ್ ಬಸ್' ಗೆ ವಿಮರ್ಶಕರು ಜೈಕಾರ ಹಾಕಿದ್ರಾ?

ಹಾರರ್-ಥ್ರಿಲ್ಲರ್ 'ಲಾಸ್ಟ್ ಬಸ್' ಗೆ ವಿಮರ್ಶಕರು ಜೈಕಾರ ಹಾಕಿದ್ರಾ?

Posted By:
Subscribe to Filmibeat Kannada

'ರಂಗಿತರಂಗ' ಎಂಬ ಸಸ್ಪೆನ್ಸ್ ಥ್ರಿಲ್ಲರ್-ಮಿಸ್ಟಿರಿ ಸಿನಿಮಾವನ್ನು ಸ್ಯಾಂಡಲ್ ವುಡ್ ನ ಸಿನಿರಸಿಕರು ರೆಡ್ ಕಾರ್ಪೆಟ್ ಹಾಕಿ ಬರಮಾಡಿಕೊಂಡರು. ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ಎಸ್.ಡಿ.ಅರವಿಂದ ಆಕ್ಷನ್-ಕಟ್ ಹೇಳಿರುವ 'ಲಾಸ್ಟ್ ಬಸ್' ಸಿನಿಮಾ.

'ಜುಗಾರಿ' ಸಿನಿಮಾ ಖ್ಯಾತಿಯ ಅವಿನಾಶ್, ಸಮರ್ಥ್ ನರಸಿಂಹರಾಜು, ಪ್ರಕಾಶ್ ಬೆಳವಾಡಿ, ಮಾನಸ ಜೋಶಿ, ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಸೈಕಲಾಜಿಕಲ್ ಮಿಸ್ಟಿರಿ ಚಿತ್ರ 'ಲಾಸ್ಟ್ ಬಸ್' ಪ್ರೇಕ್ಷಕರಿಂದ ಅತ್ಯುತ್ತಮ ಅಬಿಪ್ರಾಯವನ್ನು ಗಿಟ್ಟಿಸಿಕೊಂಡಿದೆ.[ನರಸಿಂಹರಾಜು ಮೊಮ್ಮಕ್ಕಳಿಂದ ಥ್ರಿಲ್ಲರ್ ಸಿನ್ಮಾ ಟ್ರೈಲರ್]

ಹೊಸತನ ಇರುವ ಚಿತ್ರದಲ್ಲಿ ಪ್ರೇಕ್ಷಕರಿಗೆ ಕೂತೂಹಲದ ಮೇಲೆ ಕುತೂಹಲ ಕೆರಳಿಸುವ 'ಲಾಸ್ಟ್ ಬಸ್' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದ ಬಗ್ಗೆ ವಿಮರ್ಶಕರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಕೆಳಗಿನ ಸ್ಲೈಡುಗಳಲ್ಲಿ...

'ಹಲವು ಚಾಚುಗಳ ಪಯಣ' - ಪ್ರಜಾವಾಣಿ

ಹಾರರ್, ಥ್ರಿಲ್ಲರ್‌ ಜತೆಗೆ ‘ಸೈಕಲಾಜಿಕಲ್' ಎಂಬ ಪದವನ್ನು ಬೆರೆಸಿ ಮಾಡಿದ ‘ಲಾಸ್ಟ್ ಬಸ್' ಹೊಸ ಬಗೆಯ ಚಿತ್ರಗಳ ಸಾಲಿನಲ್ಲಿ ನಿಲ್ಲುವಂಥದು. ರಿಯಾಲಿಟಿ ಶೋ ನಿರ್ದೇಶಕನೊಬ್ಬನ ತಂತ್ರಗಳು, ಜನಪ್ರಿಯತೆ ಪಡೆವ ದಾರಿಯಲ್ಲಿ ನಡೆಸುವ ಪ್ರಯೋಗಗಳು ಇಲ್ಲಿವೆ. ಹೀಗಾಗಿ, ಭಯ ಒಂದು ಭಾವನೆ ಎಂಬುದನ್ನು ಪ್ರತಿಪಾದಿಸುವ ಚಿತ್ರ ಇದಾಗಿದ್ದರೂ, ಅದಕ್ಕೂ ಹೊರತಾದ ಒಂದಷ್ಟು ಆಯಾಮಗಳು ದಕ್ಕಿವೆ. - ಆನಂದ ತೀರ್ಥ ಪ್ಯಾಟಿ.

'ಲಾಸ್ಟ್ ಬಸ್' ಮಿಸ್ ಮಾಡ್ಕೋಬೇಡಿ' - ವಿಜಯ ಕರ್ನಾಟಕ

ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಸಿನಿಮಾವಿದು. ಸಬ್ಜೆಕ್ಟಿವ್ ಸಿನಿಮಾಗೆ ಸ್ವಲ್ಪ ಅಬ್ಸ್‌ಸ್ಟ್ರಕ್ಟ್ ಟಚ್ ಕೊಟ್ಟಿದ್ದಾರೆ. ಮನುಷ್ಯನಲ್ಲಿರುವ 'ಭಯ' ಎಂಥಾದ್ದು? ಅದು ಹೊರಗೆ ಬಂದಾಗ ಹೇಗಾಡುತ್ತಾನೆ? ಜತೆಗೆ ಇನ್ನೊಬ್ಬರ ಭಯ ಹೇಗೆ ವ್ಯಾಪಾರಿ ಸರಕಾಗಿದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಸಾಮಾನ್ಯ ಚಿತ್ರದಂತೆ ಈ ಸಿನಿಮಾವನ್ನು ನೇರವಾಗಿ ನೋಡಿ ಅರ್ಥೈಸಿಕೊಳ್ಳುವುದು ತಪ್ಪಾಗುತ್ತದೆ. ಯಾಕೆಂದರೆ ಚಿತ್ರದ ಆಂತರ‌್ಯ ಬೇರೆಯದನ್ನೇ ಹೇಳುತ್ತದೆ. ಇಲ್ಲಿ ಸೈಕಾಲಜಿ ಮತ್ತು ಫಿಲಾಸಫಿಗಳಿಂದ ಹುಟ್ಟುವ ಭಯವೂ ಇದೆ. - ಪದ್ಮಾ ಶಿವಮೊಗ್ಗ

'A ride that's not to be missed' - Bangaloremirror

Last Bus is a horror-suspense film that leaves the audience to draw their own conclusions. You can assume that there are ghosts behind the horror or that these are psychology-induced thrills. Nonetheless, you enjoy those two hours wondering what is happening. Decently made, visually brilliant, and engaging throughout, Last Bus is a perfect film for the cold weather. By Shyam Prasad S.

ಮಿಸ್ ಮಾಡ್ಕೋಬೇಡಿ, ಇದೇ ಲಾಸ್ಟ್ ಬಸ್! - ಉದಯವಾಣಿ

'ಲಾಸ್ಟ್ ಬಸ್' ಒಂದು ಹಾರರ್ ಚಿತ್ರ ಎಂದು ಹೇಳುವುದಕ್ಕೆ ಹೋಗುವುದಿಲ್ಲ ನಿರ್ದೇಶಕ ಮತ್ತು ಕಥೆಗಾರ ಅರವಿಂದ್. ಅವರು ಈ ಚಿತ್ರವನ್ನು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ಎಂದು ಕರೆಯುವುದಕ್ಕೆ ಇಷ್ಟಪಡುತ್ತಾರೆ. ಕೊನೆಗೆ ಇದು ನಂಬಿಕೆಗಳ ಕುರಿತಾದ ಚಿತ್ರ ಎನ್ನುತ್ತಾರೆ. ನಂಬಿದ್ದೆಲ್ಲಾ ಸತ್ಯವಲ್ಲ, ನಂಬದಿದ್ದೆಲ್ಲಾ ಸುಳ್ಳಲ್ಲಾ ಎಂದು ಅದಕ್ಕೊಂದು ವೈಚಾರಿಕ ಆಯಾಮ ಕೊಡುವುದಕ್ಕೆ ಪ್ರಯತ್ನಿಸುತ್ತಾರೆ. ಅದೆಲ್ಲಾ ಬುದ್ಧಿಜೀವಿಗಳಿಗೆ ಇಷ್ಟವಾಗಬಹುದು. ಆದರೆ, ಸಾಮಾನ್ಯ ಪ್ರೇಕ್ಷಕರಿಗೆ 'ಲಾಸ್ಟ್ ಬಸ್' ಇಷ್ಟವಾಗುವುದು ಒಂದು ಹಾರರ್ ಚಿತ್ರವಾಗಿ. ಮಿಕ್ಕಂತೆ ನಂಬಿಕೆ, ನಿಜ, ಸುಳ್ಳು ಎನ್ನುವುದೆಲ್ಲಾ ಪರದೆ ಮೇಲೆ ಓದುವುದಕ್ಕೆ ಮಾತ್ರ ಸೀಮಿತವಾಗುತ್ತದೆ. - ಚೇತನ್ ನಾಡಿಗೇರ್.

'ಲಾಸ್ಟ್ ಬಸ್' ಮಿಸ್ ಮಾಡ್ಕೋಬೇಡಿ'- ಕನ್ನಡ ಪ್ರಭ

ಅಲ್ಲಿ ಕಂಡಿದ್ದೆಲ್ಲವನ್ನೂ ನಂಬಬೇಕಿಲ್ಲ. ಯಾಕಂದ್ರೆ, ನಂಬಿದ್ದೆಲ್ಲ ಸುಳ್ಳಾ? ಕನಸಾ? ಮೂಢನಂಬಿಕೆಯಾ? ತೀರ್ಮಾನ ನಿಮ್ಮದು. ಕಥಾನಾಯಕ ಆರಂಭದಲ್ಲಿಯೇ ವ್ಯಕ್ತಪಡಿಸುವ ಗೊಂದಲವೇ ಪ್ರೇಕ್ಷಕರದ್ದು ಕೂಡ. ಅರವಿಂದ್ ನರಸಿಂಹರಾಜು ನಿರ್ದೇಶನದ 'ಲಾಸ್ಟ್ ಬಸ್' ಚಿತ್ರ ಇಂಥದ್ದೊಂದು ಕ್ಲೈಮ್ಯಾಕ್ಸ್ ಗೆ ಬರುವ ಹೊತ್ತಿಗೆ ಅಲ್ಲಿ ತರ್ಕಕ್ಕೆ ನಿಲುಕದ ಹಲವು ಸಂಗತಿಗಳು ವಿಭಿನ್ನ ಪಾತ್ರಗಳ ಮೂಲಕ ಬಿಚ್ಚಿಕೊಂಡಿರುತ್ತದೆ. ಆ ಮೂಲಕ ನೋಡುಗನಲ್ಲಿ ಹಲವು ರೀತಿಯ ಜಿಜ್ಞಾಸೆ ಹುಟ್ಟು ಹಾಕುವುದು ಈ ಚಿತ್ರದ ವಿಶೇಷ. - ದೇಶಾದ್ರಿ ಹೊಸ್ಮನೆ.

English summary
Kannada Movie 'Last Bus' Critics Review. Actor Avinash Narasimharaju, Actress Meghashree, Actor Prakash Belawadi, Actress Manasa Joshi Starrer 'Last Bus' has received mixed response from the critics. here is the collection of reviews by Top News Papers of Karnataka. The movie is directed by SD Aravinda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada