For Quick Alerts
  ALLOW NOTIFICATIONS  
  For Daily Alerts

  ಕಿಶೋರ್ 'ಆಕ್ಟೋಪಸ್' ಬಗ್ಗೆ ವಿಮರ್ಶಕರು ಹೇಳಿದ್ದೇನು?

  By Harshitha
  |

  ವೈದ್ಯಕೀಯ ಕ್ಷೇತ್ರದ ಕರಾಳತೆ ಮತ್ತು ಮೆಡಿಕಲ್ ಮಾಫಿಯಾ ಸುತ್ತ ಹೆಣೆದಿರುವ ಸಾಮಾಜಿಕ ಕಳಕಳಿ ಇರುವ ಸಿನಿಮಾ 'ಆಕ್ಟೋಪಸ್' ಬಿಡುಗಡೆ ಆಗಿದೆ.

  ವಿಜ್ಞಾನಿಯಾಗಿ ಪ್ರತಿಭಾವಂತ ನಟ ಕಿಶೋರ್, ಯಜ್ಞಾ ಶೆಟ್ಟಿ ಮತ್ತು ತಿಲಕ್ ನಟಿಸಿರುವ 'ಆಕ್ಟೋಪಸ್' ಚಿತ್ರಕ್ಕೆ ಅಣ್ಣಯ್ಯ.ಪಿ ಆಕ್ಷನ್ ಕಟ್ ಹೇಳಿದ್ದಾರೆ.

  ಚೊಚ್ಚಲ ನಿರ್ದೇಶನದಲ್ಲೇ ವಿಭಿನ್ನ ಸಿನಿಮಾ ಮಾಡಿರುವ ಅಣ್ಣಯ್ಯ.ಪಿ ರವರ ಪ್ರಯತ್ನ ಹೇಗಿದೆ.? ವಿಮರ್ಶಕರು ಚಿತ್ರದ ಬಗ್ಗೆ ಏನ್ ಹೇಳ್ತಾರೆ ಅಂತ ನಾವ್ ಹೇಳ್ತೀವಿ...ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ದಿಕ್ಕು ತಪ್ಪಿದ ಹೋರಾಟ - ಪ್ರಜಾವಾಣಿ

  ದಿಕ್ಕು ತಪ್ಪಿದ ಹೋರಾಟ - ಪ್ರಜಾವಾಣಿ

  ಪ್ರೇಕ್ಷಕರನ್ನು ‘ಆಕ್ಟೋಪಸ್'ನಂತೆ ಹಿಡಿದಿಟ್ಟುಕೊಳ್ಳುವ ಶಕ್ತಿ ಅಣ್ಣಯ್ಯರ ಚಿತ್ರಕಥೆಗೆ ಇಲ್ಲ. ಅಷ್ಟಪದಿಯ ಹಿಡಿತದಂತೆ ಭಾಸವಾಗಬೇಕಿದ್ದ ಕಥೆಯನ್ನು ಅವರು ಸಡಿಲ ಬಿಟ್ಟಿದ್ದರಿಂದ, ಕಥೆಯ ಬಾಹುಗಳು ಸಡಿಲವಾಗಿವೆ, ದಿಕ್ಕುತಪ್ಪಿ ಬೇರೆ ಬೇರೆ ಕಡೆಗೆ ಚಾಚಿಕೊಂಡಿವೆ. ವೈದ್ಯಕೀಯ ಕ್ಷೇತ್ರದ ಕರಾಳತೆ ಗೌಣವಾಗಿ, ವಿಷಯಾಂತರದೊಂದಿಗೆ ‘ಆಕ್ಟೋಪಸ್' ಕೊನೆಗೊಳ್ಳುತ್ತದೆ. - ಡಿ.ಎಂ.ಕುರ್ಕೆ ಪ್ರಶಾಂತ್

  ಮೆಡಿಕಲ್ ಲ್ಯಾಬ್ ನಲ್ಲಿ ಆಕ್ಟೋಪಸ್ - ವಿಜಯ ಕರ್ನಾಟಕ

  ಮೆಡಿಕಲ್ ಲ್ಯಾಬ್ ನಲ್ಲಿ ಆಕ್ಟೋಪಸ್ - ವಿಜಯ ಕರ್ನಾಟಕ

  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಮರುಭೂಮಿಯಲ್ಲಿ ಓಯಾಸಿಸ್ ಹುಡುಕಿದ ಹಾಗೆ. ಆದರೆ ಪಿ ಅಣ್ಣಯ್ಯ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರಕಥೆ ಇಟ್ಟುಕೊಂಡು ನಿರ್ದೇಶಿಸಿದ ಚೊಚ್ಚಲ ಸಿನಿಮಾ ಆಕ್ಟೋಪಸ್ ತಕ್ಕಮಟ್ಟಿಗೆ ಯಶಸ್ಸು ಕಂಡ ಪ್ರಯತ್ನ ಎನ್ನಬಹುದು. ನಾಯಕ ಯಶವಂತ (ಕಿಶೋರ್) ಒಬ್ಬ ವಿಜ್ಞಾನಿ. ಹೃದಯ ಸಂಬಂಧಿ ಕಾಯಿಲೆಗೆ ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೆ ಕೇವಲ ಔಷಧದ ಮೂಲಕವೇ ಗುಣಪಡಿಸುವ ಔಷಧ ಕಂಡುಹಿಡಿಯುತ್ತಾನೆ. ಅದನ್ನು ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲಾ ಮೆಡಿಕಲ್ ಗಳಲ್ಲೂ ಸಿಗಬೇಕು ಎನ್ನುವುದು ನಾಯಕನ ಇಚ್ಛೆ. ಆದರೆ ಇದಕ್ಕೆ ಮೆಡಿಕಲ್ ಮಾಫಿಯಾ ಅಡ್ಡ ಬರುತ್ತೆ, ಅದನ್ನು ಯಾವರೀತಿ ಎದುರಿಸಿ ಜನಸಾಮಾನ್ಯರಿಗೆ ಔಷಧ ಸಿಗುವಂತೆ ಮಾಡುತ್ತಾನೆ ಎನ್ನುವುದೇ ಚಿತ್ರಕಥೆಯ ಸಾರಾಂಶ. - ಮಹಾಬಲೇಶ್ವರ ಕಲ್ಕಣಿ

  ಅಣ್ಣಯ್ಯನ ಮಾನವಶಾಸ್ತ್ರ ಮತ್ತು ಫಾರ್ಮಕಾಲಜಿ - ಕನ್ನಡಪ್ರಭ

  ಅಣ್ಣಯ್ಯನ ಮಾನವಶಾಸ್ತ್ರ ಮತ್ತು ಫಾರ್ಮಕಾಲಜಿ - ಕನ್ನಡಪ್ರಭ

  ಸಮ್ಮೋಹಿನಿ ಕಲೆ ಕರಗತ ಮಾಡಿಕೊಂಡಿರುವ ವೈದ್ಯ, ವೈದ್ಯಕೀಯ ವಿಜ್ಞಾನಿ ಯಶವಂತ್ (ಕಿಶೋರ್), ರಕ್ತನಾಳಗಳಲ್ಲಿನ ಬ್ಲಾಕ್ ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ತೆಗೆಯುವ ಔಷಧವೊಂದನ್ನು ಸಿದ್ಧಪಡಿಸುತ್ತಿರುತ್ತಾನೆ. ಖಾಸಗಿ ಫಾರ್ಮಾ ಸಂಸ್ಥೆಯ ಪಿತೂರಿಯಿಂದ ಹೆಂಡತಿಯನ್ನು (ಯಜ್ಞಾ ಶೆಟ್ಟಿ) ಕಳೆದುಕೊಳ್ಳುವ ಯಶವಂತ್ ಸೇಡು ತೀರಿಸಿಕೊಳ್ಳಲು ನಾಯಿಯೊಂದನ್ನು ಹಿಪ್ನಟೈಸ್ ಮಾಡಿ ಫಾರ್ಮಾ ಸಂಸ್ಥೆಯ ಮಾಲೀಕನನ್ನು ಕೊಲೆ ಮಾಡಿಸುತ್ತಾನೆ. ನಂತರದ ಸಮಯದಲ್ಲಿ ಅಮೆರಿಕಾದಿಂದ ಪಿತೃತರ್ಪಣೆ ಮಾಡಲು ಬಂದ ಯುವತಿಯನ್ನು(ಅಶ್ವಿನಿ) ರೇಪಿಸ್ಟ್ ಗಳಿಂದ ರಕ್ಷಿಸುತ್ತಾನೆ. ಅವಳ ಆಸ್ತಿಯನ್ನು ಕಬಳಿಸಲು ಹೊಂಚು ಹಾಕುವ ಮೂವರು ಪಾತಕಿಗಳಿಂದ ರಕ್ಷಣೆ ನೀಡುತ್ತಾನೆ. ಆ ಯುವತಿ, ಯಶವಂತ್ ಸಂಶೋಧನೆಗೆ ಧನಸಹಾಯ ಮಾಡುವ ಭರವಸೆ ನೀಡುತ್ತಾಳೆ. ಆದರೆ ಪಾತಕಿಗಳು ಇದಕ್ಕೆ ಅವಕಾಶ ಮಾಡಿಕೊಡುವರೇ? ಔಷಧ ಉದ್ಯಮದಲ್ಲಿರುವ ಅವ್ಯವಹಾರಗಳ ಕುರಿತ ರೋಚಕ-ಥ್ರಿಲ್ಲರ್ ಸಿನೆಮಾ ಇದು ಎಂಬ ನಿರೀಕ್ಷೆಯಲ್ಲಿ ಸಿನೆಮಾ ವೀಕ್ಷಿಸಿದರೆ ನಿರಾಸೆ ಕಟ್ಟಿಟ್ಟಬುತ್ತಿ. ಒಂದು ಸೇಡಿನ ಸಿನೆಮಾ ಆಗಿಯೂ ಕೂಡ ಪರಿಣಾಮಕಾರಿಯಾಗಿಲ್ಲ ಎಂಬುದು ನಿರಾಸೆಯನ್ನು ಇಮ್ಮಡಿಗೊಳಿಸುತ್ತದೆ! - GN

  Octopus Movie Review - Times of India

  Octopus Movie Review - Times of India

  Annaiah P's story, on paper, has all it takes to make for that winning thriller. Sadly, there's much lost in the translation from paper to film and he also ends up giving in a little too much to the demands of commercial cinema. With the Sandalwood audience accepting both the commercial and the alternate with equal measure, one wonders when makers will stop with unnecessary comedy tracks with double entendres and raunchy item numbers. - Sunayana Suresh

  There is no Plus in Octopus - The New Indian Express

  There is no Plus in Octopus - The New Indian Express

  Why choose us for this fuss?,' that is the subtle cuss for Octopus from the viewers. For Kishore, otherwise a talented actor, this is a disappointing outing; he should have known that a one-liner is not enough to sign a film. While the concept is rare, unfortunately, the makers employed a classic story-changer to ruin it, leaving no stone unturned to make it as mundane as possible. The slow moving mystery thriller is about love and the revenge unleashed when a loved one's life is snuffed out. Yashwanth (Kishore) in Octopus is a doctor by profession who discovers an affordable medicine for a heart problem. The rest of the film revolves around Yashwanth's battle to market his discovery, his sacrifice and the subsequent revenge. The medical miracle he discovered loses track in the first half itself, taken over by the vengeance of a man who apart from using fists, guns and drones, even uses hypnotism to get even. - A Sharadhaa

  English summary
  Kishore starrer Kannada Movie 'Octopus' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X