For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: 'ಸಂಜು' ಚಿತ್ರವನ್ನ ಇಡೀ ವರ್ಷ ಹೊಗಳಿದರೂ ಸಾಲಲ್ಲ.!

  By Harshitha
  |

  ಬಹು ನಿರೀಕ್ಷೆ ಹುಟ್ಟುಹಾಕಿದ್ದ 'ಸಂಜು' ಸಿನಿಮಾ ಇಂದು ಭಾರತದಾದ್ಯಂತ ಬಿಡುಗಡೆ ಆಗಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಸಂಜು' ಚಿತ್ರಕ್ಕೆ ಪ್ರೇಕ್ಷಕರು ಉಘೇ ಉಘೇ ಎನ್ನುತ್ತಿದ್ದಾರೆ.

  'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ವೈಯುಕ್ತಿಕ ಜೀವನದ ಕೆಲ ಘಟ್ಟಗಳನ್ನ ನಿರ್ಲಕ್ಷ್ಯ ಮಾಡಲಾಗಿದೆ. ಸಂಜಯ್ ದತ್ ರವರ ಮೂರ್ಮೂರು ಮದುವೆಗಳ ಹಿಂದಿನ ರಹಸ್ಯವಾಗಲಿ, ಅಫೇರ್ ಗಳ ಕುರಿತಾಗಲಿ ಸಿನಿಮಾದಲ್ಲಿ ಉಲ್ಲೇಖ ಇಲ್ಲ. ಈ ಬಗ್ಗೆ ಪ್ರೇಕ್ಷಕರಿಗೆ ಕೊಂಚ ನಿರಾಸೆ ಆಗಿದೆ.

  ಅಷ್ಟು ಬಿಟ್ಟರೆ, 'ಸಂಜು' ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದಾರೆ. ಬೇಕಾದ್ರೆ, ಪ್ರೇಕ್ಷಕರೇ ಮಾಡಿರುವ ಕೆಲ ಟ್ವೀಟ್ ಗಳನ್ನ ನೀವೇ ನೋಡಿ...

  ಸಂಜಯ್ ದತ್ ಪಾತ್ರಕ್ಕೆ ನ್ಯಾಯ ಒದಗಿಸಿದ ರಣ್ಬೀರ್

  ''ರಣ್ಬೀರ್ ಕಪೂರ್ ಆಕ್ಟಿಂಗ್ ಚೆನ್ನಾಗಿ ಮೂಡಿಬಂದಿದೆ. ಸಂಜಯ್ ದತ್ ಪಾತ್ರಕ್ಕೆ ರಣ್ಬೀರ್ ಕಪೂರ್ ನ್ಯಾಯ ಒದಗಿಸಿದ್ದಾರೆ'' ಎಂದು ಅಭಿಶೇಕ್ ಎಂಬುವರು ಟ್ವೀಟ್ ಮಾಡಿದ್ದಾರೆ.

  ವರ್ಣಿಸಲು ಅಸಾಧ್ಯ

  ''ಸಂಜು' ಸಿನಿಮಾ ಮಿಸ್ ಮಾಡುವ ಹಾಗೇ ಇಲ್ಲ. ರಣ್ಬೀರ್ ಕಪೂರ್ ಹಾಗೂ ರಾಜಕುಮಾರ್ ಹಿರಾನಿಗೆ ನಿಂತು ಗೌರವ ಕೊಡಬೇಕು. ಈ ಸಿನಿಮಾ ಹೇಗಿದೆ ಅಂತ ಪದಗಳಲ್ಲಿ ವರ್ಣಿಸಲು ಅಸಾಧ್ಯ'' ಅಂತ ಹೇಳುವವರೇ ಹೆಚ್ಚು.

  'ಎಕ್ಸ್ಟ್ರಾಡಿನರಿ' ಸಿನಿಮಾ

  ''ಸಂಜು' ಸಿನಿಮಾ ಎಕ್ಸ್ಟ್ರಾಡಿನರಿ ಆಗಿದೆ. ರಣ್ಬೀರ್ ಕಪೂರ್ ಆಕ್ಟಿಂಗ್ ಅದ್ಭುತವಾಗಿದೆ'' ಎಂದು Sirfmovie.com ಟ್ವೀಟ್ ಮಾಡಿದೆ.

  ಇನ್ಯಾರಿಂದಲೂ ಸಾಧ್ಯ ಆಗ್ತಿರ್ಲಿಲ್ಲ.!

  ''ಕಥೆ ಹೇಳುವ ಕಲೆ ರಾಜಕುಮಾರ್ ಹಿರಾನಿಗೆ ಚೆನ್ನಾಗಿ ಗೊತ್ತಿದೆ. ರಣ್ಬೀರ್ ಕಪೂರ್ ಬಿಟ್ಟರೆ, ಸಂಜಯ್ ದತ್ ಪಾತ್ರಕ್ಕೆ ಇನ್ಯಾರೂ ನ್ಯಾಯ ಒದಗಿಸುತ್ತಿರಲಿಲ್ಲ'' ಅಂತಾರೆ ಅತುಲ್ ಮೋಹನ್

  'ಮಾಸ್ಟರ್ ಪೀಸ್'

  ''ಸಂಜು' ರಾಜಕುಮಾರ್ ಹಿರಾನಿಯ ಮಾಸ್ಟರ್ ಪೀಸ್. ಮತ್ತೆ ಮತ್ತೆ ನೋಡುವ ಹಾಗಿದೆ ಈ ಸಿನಿಮಾ'' ಎಂದು ಅಂಕಿತಾ ಎಂಬುವರು ಟ್ವೀಟಿಸಿದ್ದಾರೆ.

  ಬೆಸ್ಟ್ ಸಿನಿಮಾ

  ''ಸಂಜು' ಈ ವರ್ಷ ನಾನು ನೋಡಿರುವ ಅತ್ಯುತ್ತಮ ಚಿತ್ರ. ರಣ್ಬೀರ್ ಈಸ್ ಬ್ಯಾಕ್'' ಅಂತ ಆಶೀಶ್ ಶರ್ಮಾ ಟ್ವೀಟ್ ಮಾಡಿದ್ದಾರೆ.

  ಡೌಟ್ ಬೇಡ

  ''ಪ್ರತಿಯೊಂದು ಫ್ರೇಮ್ ನಲ್ಲೂ ಭಾವನೆ ಇದೆ. ಪ್ರತಿಯೊಬ್ಬರೂ ಕೂಡ ಉತ್ತಮ ಅಭಿನಯ ನೀಡಿದ್ದಾರೆ. 'ಸಂಜು' ಆಲ್ ಟೈಮ್ ಬ್ಲಾಕ್ ಬಸ್ಟರ್ ಆಗುವುದರಲ್ಲಿ ಅನುಮಾನ ಇಲ್ಲ'' - ಅಭಿಶೇಕ್

  ಇಡೀ ವರ್ಷ ಬೇಕು

  ''ಸಂಜು' ಚಿತ್ರವನ್ನ ಹೊಗಳಲು ಇಡೀ ವರ್ಷ ಬೇಕು. ರಣ್ಬೀರ್ ಕಪೂರ್ ಆಕ್ಟಿಂಗ್ ಗೆ ಹ್ಯಾಟ್ಸ್ ಆಫ್'' ಎಂದು ರಿಶಬ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ಮ್ಯಾಜಿಕ್ ಇಲ್ಲ.!

  ''ಟ್ರೈಲರ್ ನೋಡಿದ್ಮೇಲೆ ಇಡೀ ಸಿನಿಮಾ ನೋಡುವ ಅವಶ್ಯಕತೆ ಇಲ್ಲ. ಈ ಬಾರಿಯ ರಾಜಕುಮಾರ್ ಹಿರಾನಿಯ ಮ್ಯಾಜಿಕ್ ಮಿಸ್ ಆಗಿದೆ'' ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

  ಮಿಮಿಕ್ರಿ ಶೋ

  ''ಇದು ಸಿನಿಮಾನೋ.. ಅಥವಾ ಮಿಮಿಕ್ರಿ ಶೋನೋ.. ನಿರಾಸೆ ಆಗಿದೆ'' ಅಂತ ಟ್ವೀಟ್ ಮಾಡಿರುವವರೂ ಇದ್ದಾರೆ.

  English summary
  Bollywood Actor Ranbir Kapoor starrer 'Sanju' is getting positive response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X