»   » 'ಭಜರಂಗಿ ಭಾಯ್ ಜಾನ್' ಬಗ್ಗೆ ಯಾರು ಏನಂದ್ರು?

'ಭಜರಂಗಿ ಭಾಯ್ ಜಾನ್' ಬಗ್ಗೆ ಯಾರು ಏನಂದ್ರು?

Posted By:
Subscribe to Filmibeat Kannada

'ಬಾಕ್ಸ್ ಆಫೀಸ್ ಸುಲ್ತಾನ್' ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯ್ ಜಾನ್' ಚಿತ್ರ ಇಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಸಲ್ಲು ಭಾಯ್ ಆಕ್ಟಿಂಗ್ ನೋಡಿ ಪ್ರೇಕ್ಷಕರಂತೂ ಫಿದಾ ಆಗಿದ್ದಾರೆ. ಎಲ್ಲೆಡೆ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಮೇರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ 5000 ಸ್ಕ್ರೀನ್ ಗಳಲ್ಲಿ 'ಭಜರಂಗಿ ಭಾಯ್ ಜಾನ್' ಇಂದು ಪ್ರೇಕ್ಷಕರನ್ನ ರಂಜಿಸುತ್ತಿದೆ. ಆದ್ರೆ, ಬಾಲಿವುಡ್ ನ ಕೆಲ ಸೆಲೆಬ್ರಿಟಿಗಳು ನಿನ್ನೆಯೇ 'ಭಜರಂಗಿ ಭಾಯ್ ಜಾನ್' ಚಿತ್ರವನ್ನ ನೋಡಿಬಿಟ್ಟಿದ್ದಾರೆ. ['ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

ಮುಂಬೈನಲ್ಲಿ ಆಯೋಜಿಸಿದ್ದ ಸ್ಪೆಷಲ್ ಸೆಲೆಬ್ರಿಟಿ ಶೋನಲ್ಲಿ ಸೋನಾಕ್ಷಿ ಸಿನ್ಹ, ಜ್ಯಾಕ್ಲಿನ್ ಫರ್ನಾಂಡಿಸ್, ಅರ್ಪಿತಾ ಖಾನ್, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು 'ಭಜರಂಗಿ ಭಾಯ್ ಜಾನ್' ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಹಾಗಾದ್ರೆ, ಚಿತ್ರದ ಬಗ್ಗೆ ಅವರ ಅಭಿಪ್ರಾಯವೇನು? ಅದನ್ನ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಸೋನಾಕ್ಷಿ ಸಿನ್ಹ

''ಭಜರಂಗಿ ಭಾಯ್ ಜಾನ್' ಚಿತ್ರವನ್ನ ನೋಡ್ದೆ. ಇದು ಸಲ್ಮಾನ್ ಖಾನ್ ಅವರ ಬೆಸ್ಟ್ ಮೂವಿ ಅಂತ ಹೇಳುವುದೇ ಸೇಫ್. ಎಂದಿನಂತೆ ನಿರ್ದೇಶಕ ಕಬೀರ್ ಖಾನ್ ಉತ್ತಮ ಚಿತ್ರವನ್ನೇ ನೀಡಿದ್ದಾರೆ.'' - ಸೋನಾಕ್ಷಿ ಸಿನ್ಹ

ಜ್ಯಾಕ್ಲೀನ್ ಫರ್ನಾಂಡಿಸ್

''ಭಜರಂಗಿ ಭಾಯ್ ಜಾನ್ ಚಿತ್ರ ಸಲ್ಮಾನ್ ಖಾನ್ ಅವರ ಬೆಸ್ಟೆಸ್ಟ್ ಅನ್ನೋದು ಈಗ ಅಧಿಕೃತ. ಆದ್ರೆ, ಇಡೀ ಸಿನಿಮಾದಲ್ಲಿ ಎಲ್ಲರ ಮೆಚ್ಚುಗೆ ಗಳಿಸುವುದು ಪುಟಾಣಿ ಹುಡುಗಿ ಹರ್ಷಾಲಿ. ನಾನು ಆಕೆಯ ಅಭಿಮಾನಿ ಆಗ್ಬಿಟ್ಟೆ'' - ಜ್ಯಾಕ್ಲೀನ್ ಫರ್ನಾಂಡಿಸ್

ಅರ್ಪಿತಾ ಖಾನ್

''ನಾನು 'ಭಜರಂಗಿ ಭಾಯ್ ಜಾನ್' ಚಿತ್ರವನ್ನ ಎಷ್ಟು ಇಷ್ಟಪಟ್ಟೆ ಅಂತ ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. 'ಭಜರಂಗಿ ಭಾಯ್ ಜಾನ್' ಸಲ್ಮಾನ್ ಖಾನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಕಬೀರ್ ಖಾನ್ ನಿರ್ದೇಶನ ಚೆನ್ನಾಗಿದೆ. ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದಾರೆ.'' - ಅರ್ಪಿತಾ ಖಾನ್

ಡೈಸಿ ಶಾ

''ಭಜರಂಗಿ ಭಾಯ್' ಎಂತಹ ಮನಮುಟ್ಟುವ ಚಿತ್ರ ಅನ್ನೋದನ್ನ ಪದಗಳಲ್ಲಿ ಹೇಳುವುದಕ್ಕೆ ಅಸಾಧ್ಯ. ಸಲ್ಮಾನ್ ಖಾನ್ ಮತ್ತು ಕಬೀರ್ ಖಾನ್ ಗೆ ನನ್ನ ಕಡೆಯಿಂದ ಒಂದು ಸಲಾಂ'' - ಡೈಸಿ ಶಾ

ಕರಣ್ ಜೋಹರ್

''ಭಜರಂಗಿ ಭಾಯ್ ಜಾನ್' ಸಿನಿಮಾ ನೋಡಿದ ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗುವುದು ಖಚಿತ. ಎಮೋಷನಲ್ ಜರ್ನಿ ಇರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯ ಚೆನ್ನಾಗಿದೆ'' - ಕರಣ್ ಜೋಹರ್

ಅದ್ನಾನ್ ಸಾಮಿ

''ಕಬೀರ್ ಖಾನ್ ಮತ್ತು ಸಲ್ಮಾನ್ ಖಾನ್ ಒಂದು ಎಪಿಕ್ ಚಿತ್ರ ನೀಡಿದ್ದಾರೆ. ಎಲ್ಲರಿಗೂ ಸಿನಿಮಾ ಇಷ್ಟವಾಗುವುದರಲ್ಲಿ ಡೌಟೇ ಇಲ್ಲ'' - ಅದ್ನಾನ್ ಸಾಮಿ

ಕಮಲ್.ಆರ್.ಖಾನ್

''ಭಜರಂಗಿ ಭಾಯ್ ಜಾನ್' ಔಟ್ ಸ್ಟ್ಯಾಂಡಿಂಗ್ ಮತ್ತು ಬ್ರಿಲ್ಲಿಯಂಟ್ ಸಿನಿಮಾ. ಸಲ್ಮಾನ್ ಖಾನ್ ಗೆ 100% ನ್ಯಾಷನಲ್ ಅವಾರ್ಡ್ ಬರುವುದು ಖಚಿತ. ಈ ಚಿತ್ರವನ್ನ ನೋಡದವರು, ಬೆಸ್ಟ್ ಸಿನಿಮಾವನ್ನ ಖಂಡಿತ ಮಿಸ್ ಮಾಡಿಕೊಂಡಂತೆ'' - ಕಮಲ್.ಆರ್.ಖಾನ್

English summary
Bollywood Actor Salman Khan starrer 'Bajrangi Bhaijaan' has released world wide today (July 17th). Meanwhile, A special Celebrity Show was arranged for Bollywood Celebrities last night. Celebs who watched the movie are singing praises. Check out who said what on 'Bajrangi Bhaijaan'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada