»   » 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾ ರಾಜ್ಯಾದ್ಯಂತ ತೆರೆಕಂಡು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾ ನೋಡಿದ ಪ್ರೇಕ್ಷಕರು, ಇದು 'ಮತ್ತೊಂದು ಬಂಗಾರದ ಮನುಷ್ಯ' ಎಂದೇ ಬಣ್ಣಿಸುತ್ತಿದ್ದಾರೆ. ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ರವರನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.[ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ]


ಇನ್ನೂ 'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾ ನೋಡಿದ ವಿಮರ್ಶಕರ ಅಭಿಪ್ರಾಯವೇನು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ....


ಬೆವರಿನ ಹಂಗಿಲ್ಲದ 'ಬಂಗಾರದ ಮನುಷ್ಯ' - ಪ್ರಜಾವಾಣಿ

ರೈತರ ಸಮಸ್ಯೆಗಳನ್ನು ಚರ್ಚಿಸುವ ಚಿತ್ರತಂಡದ ಉದ್ದೇಶ-ಪ್ರಾಮಾಣಿಕತೆಯನ್ನು ಅನುಮಾನಿಸಬೇಕಿಲ್ಲ. ಆದರೆ, ಚಿತ್ರತಂಡಕ್ಕೆ ಕೃಷಿ ಸಂಸ್ಕೃತಿಯ ನಾಡಿಮಿಡಿತ ಹಾಗೂ ಗ್ರಾಮೀಣ ಸಂಸ್ಕೃತಿ ಅರ್ಥವಾಗಿಲ್ಲ ಎನ್ನುವುದಕ್ಕೆ ಇಡೀ ಸಿನಿಮಾ ಒಂದು ಉದಾಹರಣೆಯಂತಿದೆ. ಗಂಭೀರ ಸಮಸ್ಯೆಯನ್ನು ಚಿತ್ರತಂಡ ನಿರ್ವಹಿಸಿರುವ ರೀತಿ ಪ್ರೌಢವಾಗಿಲ್ಲ. ನೆಲದ ವಾಸ್ತವಗಳ ಅರಿವೇ ಇಲ್ಲದ ಭಾವುಕ ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ವೀರಾವೇಶ ಚಿತ್ರದಲ್ಲಿದೆ - ರಘುನಾಥ.ಚ.ಹ


ರೈತರ ಬದುಕು ಬಂಗಾರವಾದಾಗ... - ಉದಯವಾಣಿ

ರೈತರ ಬಗ್ಗೆ ಹೆಚ್ಚು ಚಿತ್ರಗಳನ್ನು ಮಾಡುವುದರ ಜೊತೆಗೆ, ವ್ಯವಸಾಯದ ಕುರಿತು ಪ್ರೀತಿ ಮತ್ತು ಜಾಗೃತಿಯನ್ನು ಮೂಡಿಸಿದವರು ಡಾ.ರಾಜ್ ಕುಮಾರ್. ಆದ್ರೆ, ಅದನ್ನು 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಮೂಲಕ ಇನ್ನೊಂದು ಹಂತಕ್ಕೆ ಶಿವರಾಜ್ ಕುಮಾರ್ ಕೊಂಡೊಯ್ದಿದ್ದಾರೆ. ರೈತರು ಅನುಭವಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ದಿನ ಬೆಳಗಾದರೆ ಸುದ್ದಿ ಬರುತ್ತಲೇ ಇರುತ್ತವೆ. ಅಷ್ಟೇ ಅಕ್ಕ, ಅನೇಕ ಚಿತ್ರಗಳಲ್ಲಿ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆದ್ರೆ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ತರಹ ಯಾವ ಚಿತ್ರವೂ ಅಷ್ಟೊಂದು ವಿವರವಾಗಿ ಮತ್ತು ಅಷ್ಟೇ ಕಮರ್ಶಿಯಲ್ ಆಗಿ ತೋರಿಸಿಲ್ಲ ಎಂದರೆ ತಪ್ಪಿಲ್ಲ - ಚೇತನ್ ನಾಡಿಗೇರ್


ಕೃಷಿಯ ಮೇಲೆ ಪ್ರೀತಿ ಹುಟ್ಟಿಸುವ ಬಂಗಾರ: ವಿಜಯ ಕರ್ನಾಟಕ

ರಾಜ್ಯದಲ್ಲಿ ನೂರಾರು ರೈತರು ಸರಿಯಾದ ಬೆಳೆ-ಬೆಲೆ ಕೈಗೆ ಸಿಗದೆ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅನ್ನದಾತನ ಇಂತಹ ಸಾವುಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಹೊರಟ ನಿರ್ದೇಶಕ ಯೋಗಿ. ಜಿ. ರಾಜ್‌ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ರೈತ ಸಾವಿಗೆ ಬರೀ ಸರಕಾರವನ್ನು ದೂರಿದರೆ ಪ್ರಯೋಜನವಿಲ್ಲ, ಈ ಚಿತ್ರ ರೈತರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು, ಅದೂ ಆಗಿಲ್ಲ. ಚಿತ್ರ ಪ್ರಯೋಗಶೀಲತೆಯಲ್ಲಿ ಬಳಲಿದೆಯಾದರೂ ಪಾತ್ರದ ಆಯ್ಕೆ ಮೆಚ್ಚುವ ಹಾಗಿದೆ. ನಿರ್ದೇಶಕ ಯೋಗಿ, ಚಿತ್ರದಲ್ಲಿ ಸಂದೇಶಕ್ಕೆ ಒತ್ತು ನೀಡಿ, ಮನೋರಂಜನೆ ಮರೆತುಬಿಟ್ಟಿದ್ದಾರೆ. ಆದರೆ ಆಯ್ಕೆ ಮಾಡಿಕೊಂಡ ಕಥಾವಸ್ತು ಪ್ರಸ್ತುತ ದಿನದಲ್ಲಿ ಜರೂರಾಗಿ ಬೇಕಾಗಿದ್ದ ಉತ್ತಮ ಕಥನ - ಮಹಾಬಲೇಶ್ವರ ಕಲ್ಕಣಿ


Bangara s/o Bangarada Manushya Movie Review - Times of India

The film begins on a glossy note in Italy, with flashy, rich visuals and a urban tale. But there is a surprising twist towards the end of the first half, which will especially please Dr Rajkumar fans. The film takes a completely different turn after this, with the protagonist Shivaraj taking on the onus of fighting for farmers' rights. This struggle hasn't beem excessively commercialized. Instead one gets to see a very interesting take on tackling the problem in its worst possible condition and solutions that could definitely be implemented in today's real situation. The filmmaker had asked some relevant questions that get everyone thinking about the state of farmers in the country today - Sunayana Suresh


Bangara... in the footsteps of Bangarada manushya - The New Indian Express

There seems to be good reason for bringing back the matinee idol Dr Rajkumar to the silver screen yet again. The legend, who is identified as a common man, has always managed to win people's affection. While the recently released Raajakumara reminisces about the simple principles followed by the legend, there is more to Bangara S/o of Bangarada Manushya than what meets the eye - A.Sharadhaa


BANGARA S/O BANGARADA MANUSHYA MOVIE REVIEW: SERIOUS ISSUE, SHALLOW FILM - Bangalore Mirror

The title of the film made no bones about the fact that it was an attempt to cash in on the old classic Bangaragda Manushya. This film imagines itself as championing the cause of farmers. It gives impossible solutions to the seemingly eternal problems and creates a utopia for them. But films are for the hero to do the impossible and cater to his fans, which S/o Bangarada Manushya does with ease - Shyam Prasad S


English summary
Kannada Actor Shiva Rajkumar starrer 'Bangara s/o Bangarada Manushya' has received mixed response from the critics. Here is the collection of 'Bangara s/o Bangarada Manushya' reviews by Top news papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada