Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vedha Twitter Review : ಬೆಳ್ಳಂಬೆಳಿಗ್ಗೆ 'ವೇದ' ನೋಡಿ ಪ್ರೇಕ್ಷಕ ಏನಂದ?
ಶಿವರಾಜ್ ಕುಮಾರ್ ನಟನೆಯ 125 ನೇ ಸಿನಿಮಾ 'ವೇದ' ಇಂದು (ಡಿಸೆಂಬರ್ 23) ರಂದು ತೆರೆಗೆ ಬಂದಿದೆ. ಶಿವಣ್ಣ ಅವರ ಹೋಮ್‌ಪ್ರೊಡಕ್ಷನ್‌ನ ಮೊದಲ ಸಿನಿಮಾ ಸಹ ಇದಾಗಿರುವುದರಿಂದ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ 'ವೇದ' ಸಿನಿಮಾ ಬಿಡುಗಡೆ ಆಗಿದ್ದು, ಹಲವು ಕಡೆ ಅರ್ಲಿ ಮಾರ್ನಿಂಗ್ ಶೋಗಳ ಪ್ರದರ್ಶನ ಮಾಡಲಾಗಿದೆ. ಶಿವಣ್ಣನ ಅಭಿಮಾನಿಗಳು ಬೆಳ್ಳಂಬೆಳಿಗ್ಗೆ 'ವೇದ'ನ ದರ್ಶನವನ್ನು ಚಿತ್ರಮಂದಿರಗಳಲ್ಲಿ ಮಾಡಿದ್ದಾರೆ.
'ವೇದ' ಸಿನಿಮಾವನ್ನು ನೋಡುತ್ತಲೇ ಹಲವು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸಹ ಹಂಚಿಕೊಂಡಿದ್ದಾರೆ. ಹಲವರು ಸಿನಿಮಾವನ್ನು ಹೊಗಳಿದ್ದಾರೆ. ಕೆಲವರು ಹಿನ್ನೆಲೆ ಸಂಗೀತಕ್ಕೆ ಮಾರು ಹೋಗಿದ್ದರೆ, ಕೆಲವರು ಶಿವಣ್ಣನ ಆಕ್ಷನ್‌ಗೆ ವಾವ್ ಎಂದಿದ್ದಾರೆ. ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕೆಲವು ಅಭಿಪ್ರಾಯಗಳು ಇಲ್ಲಿವೆ.

'ಸಿನಿಮಾದ ಮೊದಲಾರ್ಧವಂತೂ ಅತ್ಯದ್ಭುತ'
''ವೇದ' ಸಿನಿಮಾದ ಮೊದಲಾರ್ಧವಂತೂ ಅತ್ಯದ್ಭುತ. ಭರ್ಜರಿ ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ತುಂಬಿದ ಮೊದಲಾರ್ಧ 'ವೇದ' ಸಿನಿಮಾದ್ದು. ಶಿವಣ್ಣ ಹಾಗೂ ಅದಿತಿ ಸಾಗರ್ ಅಭಿನಯ ವಾರೆವಾಹ್ ಎನ್ನುವಂತಿದೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ಕೆಲಸ ಹಾಗೂ ಆಕ್ಷನ್ ಅತ್ಯುತ್ತಮ. ಸಿನಿಮಾದಲ್ಲಿ ಕೆಲವು ದೃಶ್ಯಗಳಂತೂ ರೋಮಾಂಚನಕಾರಿ'' ಎಂದಿದ್ದಾರೆ ಯಶವಂತ್ ರಾವ್.

ಅಪ್ಪುಗೆ ವಿಶೇಷ ಗೌರವ
'ವೇದ' ಸಿನಿಮಾದ ಆರಂಭದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಲಾಗಿದೆ. ಅಪ್ಪು ಅವರ ಹಲವು ದೃಶ್ಯಗಳ ತುಣುಕುಗಳನ್ನು ತೋರಿಸಿರುವ ಜೊತೆಗೆ, 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಶಿವಣ್ಣ ಹಾಗೂ ಅಪ್ಪು ಪರಸ್ಪರರ ಬಗ್ಗೆ ಮಾತನಾಡಿರುವ ತುಣುಕನ್ನು ಪ್ರಸಾರ ಮಾಡಲಾಗಿದೆ. ಈ ದೃಶ್ಯವನ್ನು ಹಲವರು ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಾಕಿಕೊಂಡಿದ್ದಾರೆ. ಅಪ್ಪುಗೆ ಬಹಳ ಒಳ್ಳೆಯ ಗೌರವನ್ನು ಚಿತ್ರತಂಡ ನೀಡಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಮೊದಲಾರ್ಧ ಸೂಪರ್
ಫರ್ಸ್ ಹಾಫ್ ಅದ್ಭುತವಾಗಿದೆ. ಇಂಟರ್ವೆಲ್ ಟ್ವಿಸ್ಟ್ ಸಹ ಚಿಂದಿಯಾಗಿದೆ. ಶಿವಣ್ಣನ ಎಂಟ್ರಿ ಸೀನ್, ಜುಂಜಪ್ಪ ಹಾಡು, ಆಕ್ಷನ್ ದೃಶ್ಯಗಳು, ಕಾಮಿಡಿ ದೃಶ್ಯಗಳು 'ವೇದ' ಸಿನಿಮಾದ ಮೊದಲಾರ್ಧದ ಹೈಲೈಟ್‌ಗಳು ಎಂದು ಮತ್ತೊಂದು ಸಿನಿಮಾ ಪ್ರೇಮಿ ಪೋಸ್ಟ್ ಮಾಡಿದ್ದಾರೆ.

ಹಬ್ಬ ಮಾಡಿರುವ ಅಭಿಮಾನಿಗಳು
ಹಲವಾರು ಕಡೆಗಳಲ್ಲಿ ಬೆಳ್ಳಂಬೆಳಿಗ್ಗೆ 4 ಗಂಟೆ, 5 ಗಂಟೆ ಶೋಗಳನ್ನು ಹಾಕಲಾಗಿದೆ. ಹಲವು ಕಡೆಗಳಲ್ಲಿ ಚಿತ್ರಮಂದಿರಗಳ ಮುಂದೆ ಶಿವಣ್ಣನ ಅಭಿಮಾನಿಗಳು ಕುಣಿಯುತ್ತಾ, ಅಬ್ಬರ ಮಾಡುತ್ತಾ ಶಿವಣ್ಣನ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಹಲವು ಚಿತ್ರಮಂದಿರಗಳ ಮುಂದೆ ಡೊಳ್ಳು ಕುಣಿತ, ಪೂಜಾ ಕುಣಿತಗಳನ್ನು ಆಯೋಜಿಸಲಾಗಿದೆ. ಥಿಯೇಟರ್ ಒಳಗೂ ಸಹ ಶಿವಣ್ಣನ ಎಂಟ್ರಿ ಸೀನ್‌ಗೆ, ಆಕ್ಷನ್ ಸೀನ್‌ಗೆ ಅಭಿಮಾನಿಗಳು ಹೂವುಗಳನ್ನು ಎರಚಿ ಹಬ್ಬವನ್ನೇ ಮಾಡಿದ್ದಾರೆ.

'ಮಹಿಳೆಯರಿಗೆ ಅದ್ಭುತ ಸಂದೇಶ'
''ಮಹಿಳೆಯರಿಗೆ ಅದ್ಭುತ ಸಂದೇಶವನ್ನು 'ವೇದ' ಸಿನಿಮಾ ಮೂಲಕ ನೀಡಿದ್ದಾರೆ. ನೋಡಲೇ ಬೇಕಾದ ಸಿನಿಮಾ 'ವೇದ'. ಶಿವರಾಜ್ ಕುಮಾರ್, ಅದಿತಿ ಸಾಗರ್ ಹಾಗೂ ಗಾನವಿ ನಟನೆ ಅತ್ಯದ್ಭುತವಾಗಿದೆ. ಆಕ್ಷನ್ ದೃಶ್ಯಗಳನ್ನು ಅತ್ಯದ್ಭುತವಾಗಿ ಚಿತ್ರೀಕರಿಸಲಾಗಿದೆ. ಹಿನ್ನೆಲೆ ಸಂಗೀತ ಹಾಗೂ ಕ್ಯಾಮೆರಾ ಕೆಲಸವೂ ಸೂಪರ್ ಆಗಿದೆ'' ಎಂದು ಶಿವಸೈನ್ಯ ಟ್ವೀಟ್ ಮಾಡಿದೆ.