»   » ಶುದ್ಧ್ ವಿಮರ್ಶೆ: ಈ ಚುಂಬಕ ಚಿತ್ರ 'ಹಾಟ್' ಆಗಿಲ್ಲ

ಶುದ್ಧ್ ವಿಮರ್ಶೆ: ಈ ಚುಂಬಕ ಚಿತ್ರ 'ಹಾಟ್' ಆಗಿಲ್ಲ

By: ಜೇಮ್ಸ್ ಮಾರ್ಟಿನ್ (with ians input)
Subscribe to Filmibeat Kannada

ಮತ್ತದೇ ಲವ್ ಸ್ಟೋರಿನಾ ಎಂದು ಮೂಗು ಮುರಿಯುವವರ ಮುಂದೆ ಶುದ್ಧವಾದ ದೇಸಿ ರೋಮಾನ್ಸ್ ಎಂಬ ಚಿತ್ರ ತೆರೆಗೆ ಬರುತ್ತಿದೆ. ಯಶ್ ರಾಜ್ ಪ್ರೊಡೆಕ್ಷನ್ ನ ಹೊಸ ಕೊಡುಗೆಯಾದ 'ಶುದ್ಧ್ ದೇಸಿ ರೋಮಾನ್ಸ್' ತಾಜಾ ಪ್ರಣಯ ಚಿತ್ರವಂತೆ. ಒಂದೇ ಚಿತ್ರದಲ್ಲಿ ಭರಪೂರ ಚುಂಬನ ದೃಶ್ಯಗಳನ್ನು ನೋಡುವ ಸೌಭಾಗ್ಯ ಪ್ರೇಕ್ಷಕರಿಗೆ ಒದಗಿದೆ ಎಂಬುದನ್ನು ಬಿಟ್ಟರೆ ಚಿತ್ರದಲ್ಲಿ ಅಂಥದ್ದೇನಿಲ್ಲ.

ಇದು ಇಂದಿನ ಪೀಳಿಗೆ ಚಿತ್ರ ಹಾಗಾಗಿ ಇಂದಿನ ಯುವಕ ಯುವತಿಯರ ಫಾಸ್ಟ್ ಲೈಫ್, ಲಿವ್ ಇನ್ ಸಂಬಂಧಗಳ ಪಕ್ಷಿನೋಟ, ಇಣುಕು ನೋಟ ಕಾಣಬೇಕಿದ್ದರೆ ಅವಶ್ಯವಾಗಿ ಚಿತ್ರಮಂದಿರಕ್ಕೆ ಕಾಲಿಡಿ. ಮಿಕ್ಕಂತೆ ಹಾಡು, ನಟನೆ ಮೂಲಕ ಚಿತ್ರ ಹಾಗೂ ಹೀಗೂ ಫ್ಲಾಪ್ ಆಗುವುದರಿಂದ ಬಚಾವ್ ಆಗಿದೆ.

Rating:
3.0/5

ಕನ್ನಡ ಚಿತ್ರರಂಗದಲ್ಲಿ ನಿರ್ಬಂಧಕ್ಕೆ ಒಳಗಾಗಿರುವ ಲಿವ್ ಇನ್ ಸಂಬಂಧ ಆಧಾರಿತ ಚಿತ್ರಗಳು ಬಾಲಿವುಡ್ ನಲ್ಲಿ ಎಗ್ಗಿಲ್ಲದೆ ಬಂದಿರುವುದರಿಂದ ಈ ಚಿತ್ರ ವಿಶೇಷ ಎನಿಸುವುದಿಲ್ಲ. ಗಾಯತ್ರಿ ಪಾತ್ರದಲ್ಲಿ ಪರಿಣಿತಿ, ರಘುರಾಮ್ ಶ್ರೀರಾಮ್ ಆಗಿ ಸುಶಾಂತ್ ಹಾಗೂ ತಾರಾ ಆಗಿ ವಾಣಿ ಕಪೂರ್ ತಕ್ಕಮಟ್ಟಿನ ಅಭಿನಯ ನೀಡಿದ್ದಾರೆ. ಎಂದಿನಂತೆ 'ಬೋಲ್ಡ್' ಪರಿಣಿತಿ ಪರದೆಯನ್ನು ಆಕ್ರಮಿಸಿಕೊಂಡು ಮುಂದೆ ನುಗ್ಗುತ್ತಾರೆ.

ಚಿತ್ರದಲ್ಲಿ ಎಲ್ಲವೂ ಓಕೆ ಎನಿಸಿದರೂ ಚಿತ್ರಕ್ಕೆ ಅಗತ್ಯವಾಗಿ ಬೇಕಾದ ಚಿತ್ರ ಕಥೆ ನಿರೂಪಣೆಯಲ್ಲಿ ಚಿತ್ರ ಸೋತಿದೆ. ಏಕತಾನತೆ ಕಾಡುವುದಕ್ಕೆ ಶುರುವಾಗುತ್ತದೆ. ಪ್ರಮುಖ ಪಾತ್ರಧಾರಿಗಳ ನಟನೆ, ಹಾವ ಭಾವ ಪ್ರೇಕ್ಷಕರನ್ನು ಹಿಡಿದಿಡಬಲ್ಲದು ಅಷ್ಟೇ.. ಶುದ್ಧ್ ದೇಶಿ ರೋಮಾನ್ಸ್ ಬಗ್ಗೆ ಇನ್ನಷ್ಟು ಮುಂದೆ ಓದಿ...

ನಟನೆ

ಸುಶಾಂತ್ ಸಿಂಗ್ ರಜಪೂತ್ ಹಾಗೂ ಪರಿಣಿತಿ ಛೋಪ್ರಾ ಮೊದಲ ಬಾರಿ ಒಟ್ಟಿಗೆ ನಟಿಸಿದ್ದು ಇಬ್ಬರ ಕಿಸ್ಸಿಂಗ್ ಸೀನ್ ಗಳು, ರೋಮಾನ್ಸ್, ತುಂಟಾಟವೇ ಚಿತ್ರಕ್ಕೆ ಜೀವಾಳ. ವಾಣಿಗೆ ಇದು ಮೊದಲ ಚಿತ್ರವಾದ್ದರಿಂದ ಸ್ವಲ್ಪ ಡಲ್ ಹೊಡೆಯುತ್ತಿದ್ದಾರೆ.

ಪರಿಣಿತಿ ಛೋಪ್ರಾ ಕೆಲವೊಮ್ಮೆ ಓವರ್ ಎನಿಸಿದರೂ ಆಕೆ ನಟಿಸುವುದೇ ಹಾಗೆ ಎಂದು ಸಹಿಸಿಕೊಳ್ಳಬಹುದು. ವಾಣಿ ನಟನೆಯಲ್ಲಿ ತುಂಬಾ ಕಲಿಯುವುದಿದೆ. ಸುಶಾಂತ್ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.

ಚಿತ್ರ ನೋಡಬಹುದೇ?

ಬಾಂಡ್ ಬಾಜಾ ಬಾರಾತ್ ನಿರ್ದೇಶಿಸಿದ ಮನೀಶ್ ಶರ್ಮ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಅದರೆ, ಚಿತ್ರದ ದ್ವಿತೀಯಾರ್ಧ ಸಂಪೂರ್ಣ ಡಲ್ ಹೊಡೆಯುವುದರಿಂದ ಚಿತ್ರಕ್ಕೆ ಹೊಡೆತ ಬಿದ್ದಿದೆ. ನಿರೀಕ್ಷಿತ ತಿರುವುಗಳು, ಅನಗತ್ಯ ಎಳೆತ ಪ್ರೇಕ್ಷಕರನ್ನು ಚಿತ್ರಮಂದಿರದಿಂದ ಆಚೆಗೆ ಎಳೆಯುತ್ತದೆ.

ಮೈಂಡ್ ಬ್ಲೋಯಿಂಗ್, ಫೆಂಟಾಸ್ಟಿಕ್ ಅಲ್ಲದಿದ್ದರೂ ಡಬ್ಬಾ, ಫ್ಲಾಪ್ ಚಿತ್ರವಂತೂ ಅಲ್ಲ, ಆರಾಮಾಗಿ ಟೈಂ ಪಾಸ್ ಮಾಡಿಕೊಂಡು ಲವ್, ಸಂಬಂಧ, ಸಂಗಾತಿಗಳ ಜೂಜಾಟ, ಹಾರಾಟ, ಪ್ರಣಯದಾಟ ನೋಡಬಹುದು.

ನಿರ್ದೇಶನ

ರೋಮಾನ್ಸ್ ಅಸಹ್ಯ ಆಗದಂತೆ ಕಾಪಾಡಿದ್ದು ಬಿಟ್ಟರೆ ಚಿತ್ರದ ಕಥೆಯಲ್ಲಿ ವಿಶೇಷ ಏನಿಲ್ಲ. ಮೊದಲೇ ಹೇಳಿದಂತೆ ಲಿವ್ ಇನ್ ಸಂಬಂಧದ ಬಗ್ಗೆ ಚಿತ್ರಗಳು ಹೊಸದೇನಲ್ಲ. ನಿರ್ದೇಶಕ ಮನೀಶ್ ಪ್ರಯತ್ನಕ್ಕೆ ಎಡಿಟಿಂಗ್ ಸಾಥ್ ನೀಡಿಲ್ಲ. ಸಚಿನ್ ಜಿಗಾರ್ ಸಂಗೀತ ಓಕೆ

ಕಿಸ್ಸಿಂಗ್ ಹೈಲೇಟ್

ಚಿತ್ರದ ನಾಯಕ ಮೂರು ಡಜನ್ ಬಾರಿ ಕಿಸ್ ಮಾಡುತ್ತಾನಂತೆ ಎಂಬ ಸುದ್ದಿಯೇ ಪಡ್ಡೆಗಳನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿದೆ. ಆದರೆ, ಇದು ಹಾಟ್ ಚಿತ್ರವಾಗಿ ಹೊರ ಹೊಮ್ಮಿಲ್ಲ. ಆದರೆ, ಕಿಸ್ಸಿಂಗ್ ದೃಶ್ಯಗಳು ನೈಜವಾಗಿ ಬಂದಿದೆ ಅಷ್ಟೇ. ಚಿತ್ರದ ಕಥೆಗೆ ಪೂರಕವಾಗಿರುವುದರಿಂದ ಕಿಸ್ಸಿಂಗ್ ಗೆ ಜೈ.

ಗಾಳಿಸುದ್ದಿಗಳು

ನಿರ್ದೇಶಕ ಮನೀಶ್ ಜತೆ ಪರಿಣಿತಿ ಓಡಾಡುತ್ತಿದ್ದಾರೆ. ಇಬ್ಬರ ನಡುವೆ ಲಿವ್ ಇನ್ ಸಂಬಂಧ ಇದೆಯಂತೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಮನೀಶ್ ನನ್ನ ಗೆಳೆಯ ಹಾಗೂ ಮಾರ್ಗದರ್ಶಿ ಅಷ್ಟೇ ಎಂದು ಪರಿಣಿತಿ ಹೇಳಿದ್ದರು. ಲೇಡಿಸ್ vs ರಿಕಿ ಬಹ್ಲ್ ಚಿತ್ರದಲ್ಲಿ ಪರಿಣಿತಿಗೆ ಚಾನ್ಸ್ ಕೊಡಿಸಿದ್ದು ಇದೇ ಮನೀಶ್ ಎಂಬುದನ್ನು ಮರೆಯುವಂತಿಲ್ಲ

ಚಿತ್ರೋತ್ಸವ

ಶುದ್ಧ್ ದೇಸಿ ರೋಮಾನ್ಸ್ ಚಿತ್ರ ಈಗಾಗಲೇ ಟೊರೊಂಟೋ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದು ಸೆ.11 ರಂದು ಪ್ರದರ್ಶನಗೊಳ್ಳಲಿದೆ. Random Desi Romance ಹೆಸರಿನಲ್ಲಿ ವಿಶ್ವದೆಲ್ಲೆಡೆ ಚಿತ್ರ ತೆರೆ ಕಾಣಲಿದ್ದು ಪ್ರೇಕ್ಷಕರ ಪ್ರತಿಕ್ರಿಯೆ ಮೇಲೆ ಚಿತ್ರದ ಭವಿಷ್ಯ ಅಡಗಿದೆ.

ಚಿತ್ರ ಗೆಲ್ಲಬಹುದೇ?

DDLJ ಅಥವಾ ಶುದ್ಧ ಪ್ರೇಮ ಕಹಾನಿಗಳನ್ನು ಮಾತ್ರ ನೋಡಿ ಬೋರ್ ಆಗಿರುವ ಪ್ರೇಕ್ಷಕರಿಗೆ ಈ ಚಿತ್ರದ ಕಥಾ ವಸ್ತು ಹೊಸದಲ್ಲದಿದ್ದರೂ ಚಿತ್ರದ ಪಾತ್ರಧಾರಿಗಳು ಹೊಸತನವನ್ನು ನೀಡುತ್ತಾರೆ. ಹೀಗಾಗಿ ಚಿತ್ರ ಯುವ ಪೀಳಿಗೆಯನ್ನು ಸೆಳೆಯಬಲ್ಲದು, ಭಾರತದಲ್ಲಿ ಯುವ ಪೀಳಿಗೆಯೇ ಅಧಿಕವಾಗಿರುವುದರಿಂದ ಚಿತ್ರಕ್ಕೆ ಇದೇ ಪ್ಲಸ್ ಪಾಯಿಂಟ್ ಆಗಬಲ್ಲುದು

ಒಟ್ಟಾರೆ ಕಥೆ ಬಗ್ಗೆ

ಚಿತ್ರದಲ್ಲಿ ಅಲ್ಲಲ್ಲಿ ಜೂಲಿಯಾ ರಾಬರ್ಟ್ಸ್ ಅಭಿನಯದ ರನ್ ಅವೇ ಬ್ರೈಡ್ ಛಾಯೆ ಕಾಣಿಸುತ್ತದೆ. ಆದರೆ, ಬಾಲಿವುಡ್ ಗೆ ಇದು ಹೊಸತನವಾಗಿದೆ. ಚಿತ್ರದ ಆಧಾರವಾದ ಹೀರೋ-ಹೀರೋಯಿನ್ ರೋಮಾನ್ಸ್ ಕ್ಲಿಕ್ ಆಗಿರುವುದು ಚಿತ್ರದ ಪ್ಲಸ್ ಪಾಯಿಂಟ್, ಸಹ್ನಿ ಕಥೆ, ಮನೀಶ್ ನಿರ್ದೇಶನ ಓಕೆ ಆದರೂ ನಿರೂಪಣೆ ಬಿಗಿ ಇಲ್ಲದಿರುವುದು ಚಿತ್ರಕ್ಕೆ ಮೈನಸ್ ಆಗಬಹುದು.

English summary
Bored of the same old love clichéd love stories? Well, you are in luck this time. Yash Raj Productions brings to us Shuddh Desi Romance which is a fresh romantic movie. This movie starring Sushant Singh Rajput, Parineeti Chopra and Vaani Kapoor in the lead roles

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada