For Quick Alerts
ALLOW NOTIFICATIONS  
For Daily Alerts

  ಲಂಚ್ ಬಾಕ್ಸ್: ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಗ್ಯಾರಂಟಿ

  By ಜೇಮ್ಸ್ ಮಾರ್ಟಿನ್
  |

  ಬದುಕಿನ ಭಾವನೆ, ಯಾತನೆ, ಸರಸ ಸಲ್ಲಾಪನೆ, ವೇದನೆ, ನಿವೇದನೆ ಎಲ್ಲವನ್ನೂ ಒಂದೇ ಪ್ಯಾಕ್ ನಲ್ಲಿ ಹೊಂದಿರುವ ಅದ್ಭುತ ಸಿನಿಮಾ ಲಂಚ್ ಬಾಕ್ಸ್. ಊಟದ ಸಮಯದಲ್ಲಿ ಬಾಕಿ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಊಟದ ಸವಿ ಹೇಗೆ ಸವಿಯಬೇಕೋ ಅದೇ ರೀತಿ ಈ ಚಿತ್ರ ನೋಡುವಾಗ ಅದರಲ್ಲೇ ಮುಳುಗಿ ಹೋಗುವಂತೆ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.

  ಚಿತ್ರದಲ್ಲಿ ತಾಜಾತನದ ಭೂರಿ ಭೋಜನ ಪ್ರೇಕ್ಷಕರಿಗೆ ಸಿಗುತ್ತದೆ. ಮನರಂಜನೇ ಪ್ರಧಾನವಾಗಿರುವ ಹಿಂದಿ ಚಿತ್ರರಂಗದಲ್ಲಿ ಚಲನಚಿತ್ರ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಳ್ಳುವಂಥ ಚಿತ್ರಗಳು ಇತ್ತೀಚೆಗೆ ತುಂಬಾ ವಿರಳವಾಗಿದೆ ಎಂದು ಕೊರಗುತ್ತಿದ ಹತಾಶ ಪ್ರೇಕ್ಷಕನ ಹಸಿವನ್ನು ನೀಗಿಸುವಲ್ಲಿ ಲಂಚ್ ಬಾಕ್ಸ್ ಯಶಸ್ವಿಯಾಗಿದೆ.

  ಲಂಚ್ ಬಾಕ್ಸ್ ಚಿತ್ರದ ತಾರೆಗಳಾದ ಇರ್ಫಾನ್ ಖಾನ್, ನಿಮ್ರಾತ್ ಕೌರ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯ ಖಾಲಿಯಾಗಿದ್ದ ನಿಮ್ಮ ಮನಸ್ಸು ಹೃದಯ ಹಾಗೂ ಹೊಟ್ಟೆ ತುಂಬಿಸುವಂತೆ ಮಾಡಿದ್ದಾರೆ ನಿರ್ದೇಶಕ ರಿತೇಶ್ ಬಾತ್ರಾ.

  Rating:
  4.5/5

  ನಾಟಕರಂಗ ಹಿನ್ನೆಲೆಯುಳ್ಳ ನಟ ವರ್ಗದ ಮೌನದಲ್ಲೂ ಮಾತನ್ನು ಗ್ರಹಿಸಬಲ್ಲದು. ಇಳಾ ಪಾತ್ರದಲ್ಲಿ ನಿಮ್ರತ್ ಹಾಗೂ ಸಾಜನ್ ಫರ್ನಾಂಡೀಸ್ ಆಗಿ ಇರ್ಫಾನ್ ನಡುವೆ ಲಂಚ್ ಬಾಕ್ಸ್ ಮೂಲಕ ಪತ್ರಗಳ ವ್ಯವಹಾರ ಏರ್ಪಡುತ್ತದೆ. ಮುಂಬೈನ ಡಬ್ಬಾವಾಲಗಳ ಮೂಲಕ ತನ್ನ ಪತಿಗೆ ಕಳಿಸಿದ ಪತ್ರ ಅಕಸ್ಮಾತ್ ಆಗಿ ಸಾಜನ್ ತಲುಪುತ್ತದೆ. ಮುಂದೇನು ಚಿತ್ರಮಂದಿರದಲ್ಲಿ ನೋಡಿ...ಸದ್ಯಕ್ಕೆ ಚಿತ್ರದ ಕಥೆಯ ಮುಂದಿನ ಎಳೆ, ಚಿತ್ರ ಏತಕ್ಕೆ ನೋಡಲೇಬೇಕು? ಎಂಬುದರ ಬಗ್ಗೆ ಓದಿ..

  ಚಿತ್ರದ ಕಥೆ

  ಮುಂಬೈನ ಗೃಹಿಣಿ ಹಾಗೂ ಒಬ್ಬ ವಿದುರನ ನಡುವಿನ ಸರಳ ಪ್ರೇಮಕಥೆ. ದಿನ ನಿತ್ಯ ಲಂಚ್ ಬಾಕ್ಸ್ ಮೂಲಕ ಪತ್ರ ವಿನಿಮಯ ಮಾಡಿಕೊಂಡು ಇವರಿಬ್ಬರು ಪ್ರೇಮ ಲೋಕದಲ್ಲಿ ವಿಹರಿಸುತ್ತಾರೆ. ಪರಸ್ಪರ ಗುರುತು ಪರಿಚಯ ಇಲ್ಲದ ಇಬ್ಬರಿಗೆ ಡಬ್ಬಾವಾಲಗಳ ಮೂಲಕ ಲಂಚ್ ಬಾಕ್ಸ್ ಸಂಪರ್ಕ ಒದಗಿಸುತ್ತದೆ.

  ಇರ್ಫಾನ್ ಖಾನ್

  ಮಾತಿಗಿಂತ ಮೌನದಲ್ಲೇ ಎಲ್ಲರನ್ನು ಸೆಳೆಯುವ ಇರ್ಫಾನ್ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದಾರೆ. ಇರ್ಫಾನ್ ಅಭಿನಯ ನೋಡಲು ಚಿತ್ರಮಂದಿರಕ್ಕೆ ತಪ್ಪದೇ ಭೇಟಿ ನೀಡಿ

  ನಿಮ್ರತ್ ಕೌರ್

  ಪತಿಯಿಂದ ಪರಿತ್ಯಕ್ತ ಪತ್ನಿಯಾಗಿ, ಒಳ್ಳೆ ಅಮ್ಮನಾಗಿ ಚುಟುಕಾಗಿ ಭಾವನೆಗಳನ್ನು ಹೊಸ ಗೆಳೆಯನೊಂದಿಗೆ ಹಂಚಿಕೊಳ್ಳುವ ಯುವಮನಸ್ಸಿನ ಗೃಹಿಣಿಯಾಗಿ ನಿಮ್ರತ್ ಕೌರ್ ಅಚ್ಚರಿಯ ಅಭಿನಯ ನೀಡಿದ್ದಾರೆ. ಪಾತ್ರವೇ ತಾನಾಗಿ ನೈಜ ಅಭಿನಯದ ಮೂಲಕ ನಿಮ್ರತ್ ಗಮನ ಸೆಳೆಯುತ್ತಾರೆ. ನಾಟಕ ರಂಗದ ಅನುಭವ ಇವರನ್ನು ಬಾಲಿವುಡ್ ನಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು.

  ನವಾಜುದ್ದೀನ್ ಸಿದ್ದಿಕಿ

  ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ಸಾಮರ್ಥ್ಯವುಳ್ಳ ನವಾಜುದ್ದೀನ್ ಹಾಸ್ಯ ಭರಿತ ಪಾತ್ರ ಯಂಗ್ ಆಫೀಸರ್ ಆಗಿ ಉತ್ತಮ ನಟನೆ ನೀಡಿದ್ದಾರೆ.

  ಮಸಂದ್ ಕೆ ಪಸಂದ್

  I'm going with five out of five for 'The Lunchbox'. The greatest love stories are the ones that make you root for the protagonists to come together, despite their destinies. ಎಂದಿರುವ ಸಿಎನ್ ಎನ್ ಐಬಿಎನ್ ನ ರಾಜೀವ್ ಮಸಂದ್ 5/5 ಅಂಕ ನೀಡಿದ್ದಾರೆ.

  ಎಲ್ಲರಿಗೂ ಸಲ್ಲುತ್ತದೆ

  ವೇಗವಾಗಿ ಬದಲಾಗುವ ಜಗತ್ತಿನಲ್ಲಿ ನಮ್ಮ ವ್ಯವಸ್ಥೆ ನಡುವೆ ಸಣ್ಣ ಪುಟ್ಟ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಚಿತ್ರ ಎಲ್ಲರಿಗೂ ಸಲ್ಲುತ್ತದೆ. ಪ್ರೀತಿ ಪ್ರೇಮ, ಭಾವನೆ ಬಂಧನಕ್ಕೊಳಪಡುವವರಾದರೆ ಅತ್ಯಂತ ಆಪ್ತವೆನಿಸುತ್ತದೆ ಎಂದು ನಟಿ ನಿಮ್ರತ್ ಹೇಳಿದ್ದಾರೆ.

  ಸಾಕ್ಷ್ಯಚಿತ್ರವಾಗಬೇಕಿತ್ತು

  ನಿರ್ದೇಶಕ ರಿತೇಶ್ ಬಾತ್ರಾ ಚಿತ್ರದ ಬಗ್ಗೆ ಮಾತನಾಡಿ ಈ ಕಥೆಯನ್ನು ಮೊದಲಿಗೆ ಸಾಕ್ಷ್ಯಚಿತ್ರ ಅಥವಾ ಕಿರುಚಿತ್ರ ಮಾಡಲು ಯೋಜಿಸಿದ್ದೆ. ಮುಂಬೈ ಡಬ್ಬಾವಾಲಗಳ ವ್ಯವಸ್ಥೆ ಬಗ್ಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು.

  ಚಿತ್ರದಲ್ಲಿ ಅಕಸ್ಮಾತ್ ಆಗಿ ಪತ್ರ ಬೇರೆಯವರ ಕೈಗೆ ಸಿಗುತ್ತದೆ ಆದರೆ, ನಿಜವಾದ ವ್ಯವಸ್ಥೆಯಲ್ಲಿ ಡಬ್ಬಾವಾಲಾಗಳ ಡಬ್ಬಗಳು ಮಿಸ್ ಆಗುವುದಿಲ್ಲ ಎಂದು ರಿತೇಶ್ ಹೇಳಿದ್ದಾರೆ.

  ಡಬ್ಬಾವಾಲಗಳು

  ಕೆಲವು ನಿಜವಾದ ಡಬ್ಬಾವಾಲಗಳನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವ್ಯವಸ್ಥೆ ನಾವು ಸಲಾಮ್ ಹಾಕಲೇಬೇಕು ಎಂದು ನಿರ್ದೇಶಕ ರಿತೇಶ್ ಹೇಳುತ್ತಾರೆ.

  ಕರಣ್ ಜೋಹರ್

  ಚಿತ್ರದ ಜತೆ ಸಹಯೋಗ ಹೊಂದಿರುವ ಕರಣ್ ಜೋಹರ್ ಗೆ ಲಂಚ್ ಬಾಕ್ಸ್ ಪ್ರೇಮಕಥೆ ತುಂಬಾ ಇಷ್ಟವಾಗಿದೆಯಂತೆ. ಪ್ರೇಮದಲ್ಲಿ ಏರಿಳಿತವನ್ನು ಉತ್ತಮವಾಗಿ ತೋರಿಸಲಾಗಿದೆ. ವಿಶ್ವದ ಎಲ್ಲೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

  ಸಿದ್ದಾರ್ಥ್ ರಾಯ್ ಕಪೂರ್

  ಯುಟಿವಿ ಸಿಇಒ ಚಿತ್ರ ನೋಡಿ ಇದು ವಿಶ್ವಮಟ್ಟದ ಚಿತ್ರ ಭಾಷೆ, ಸಂಸ್ಕೃತಿ ಎಲ್ಲೆ ಮೀರಿ ಮನಮುಟ್ಟುತ್ತದೆ ಎಂದಿದ್ದಾರೆ.

  2013ರ ಕೇನ್ಸ್ ಫಿಲಂ ಉತ್ಸವದಲ್ಲಿ 2013ರ ಟೊರೆಂಟೋ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಜಾವೇದ್ ಅಖ್ತರ್ ಟ್ವೀಟ್

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಸಾಹಿತಿ ಜಾವೇದ್ ಅಖ್ತರ್ ಟ್ವೀಟ್

  ಅಮೂಲ್ ಕಾರ್ಟೂನ್

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಅಮೂಲ್ ಕಾರ್ಟೂನ್

  ರಾಮಚಂದ್ರ ಗುಹ

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಇತಿಹಾಸಕಾರ ರಾಮಚಂದ್ರ ಗುಹ ಟ್ವೀಟ್

  ಬಿ.ಜಿ ಮಹೇಶ್ ಟ್ವೀಟ್ಸ್

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಒನ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಬಿ.ಜಿ ಮಹೇಶ್ ಟ್ವೀಟ್

  ಟೈಮ್ಸ್ ಆಫ್ ಇಂಡಿಯಾ

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವಿಮರ್ಶೆ

  ಫಸ್ಟ್ ಪೋಸ್ಟ್ ವಿಮರ್ಶೆ

  ಲಂಚ್ ಬಾಕ್ಸ್ ಚಿತ್ರದ ಬಗ್ಗೆ ಫಸ್ಟ್ ಪೋಸ್ಟ್ ವಿಮರ್ಶೆ

  English summary
  The Lunchbox Movie Review : The film has balanced the emotions perfectly and will be loved by the audiences. Debutant director Batra has done a fabulous job by paying attention to tiny details and he has crafted them beautifully. Like the lead actor Irrfan had recently said, The Lunchbox is a complete dish.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more