For Quick Alerts
  ALLOW NOTIFICATIONS  
  For Daily Alerts

  ಇಡೀ ಜಗತ್ತಿನ ಮುಂದೆ ಖಷ್ಬೂ ಅದೇನು ಹೇಳ್ಬಿಡ್ತಾರೋ!

  |

  ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ನಟಿ ಖುಷ್ಬೂ, ವಿಶ್ವಸಂಸ್ಥೆಯ ಕರೆಯ ಮೇರೆಗೆ ವಿಶ್ವಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 2013 ರಲ್ಲಿ ಕೀನ್ಯಾದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಮಾತನಾಡುವಂತೆ ನಟಿ ಖುಷ್ಬೂಗೆ ವಿಶ್ವಸಂಸ್ಥೆ ಕರೆನೀಡಿದೆ. ಇದು ಖುಷ್ಬೂಗೆ ಸಖತ್ ಖುಷಿ ನೀಡಿದೆ.

  ಕಾರಣ, ಇಂಥದೊಂದು ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಿರುವ ತಮಿಳಿನ ಪ್ರಪ್ರಥಮ ನಟಿ ಖುಷ್ಬೂ. ಸಂತೋಷವಾಗದಿರುತ್ತದೆಯೇ? ಆದರೆ ಖುಷ್ಬೂ ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವ ಜಾಯಮಾನದವರು. ಅಲ್ಲಿ ಇದ್ದದ್ದನ್ನು ಇದ್ದಂತೆ ಹೇಳಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳದಿದ್ದರೆ ಸಾಕು ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರಂತೆ.

  ಈ ಮೊದಲು 'ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ' ಎಂಬ ಅವರ ಹೇಳಿಕೆಗೆ ಜನರ ತೀವ್ರ ವಿರೋಧ ಹಾಗೂ ಕೋರ್ಟ್, ಕಾನೂನು ಸಮರದಲ್ಲಿ ಸಿಕ್ಕಿ ಒದ್ದಾಡಿದ್ದರು ಖುಷ್ಬೂ. ಆದರೆ ಕೋರ್ಟ್ ನಲ್ಲಿ ಅವರೇ ವಿಜಯಶಾಲಿಯಾಗಿ ಅವರ ವಿರುದ್ಧ ಹೋಗಿದ್ದ ಜನರಿಗೆ ಮುಖ ಮಂಗಳಾರತಿ ಮಾಡಿಸಿದ್ದಾರೆ ಈಕೆ. ಇದೀಗ ವಿಶ್ವಸಂಸ್ಥೆ ಕರೆದಿದೆ, ಅಲ್ಲಿ ಅದೇನು ಹೇಳುತ್ತಾರೋ ಕಾದು ನೋಡೋಣ. (ಒನ್ ಇಂಡಿಯಾ ಕನ್ನಡ)

  English summary
  United Nations Invited South Indain famous actress Khushboo to Keenya United Nations Festival. She is participating as a guest celebrity

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X