For Quick Alerts
  ALLOW NOTIFICATIONS  
  For Daily Alerts

  ರಾಜಕೀಯಕ್ಕೆ ಕಾಲಿಟ್ಟ ಶಕೀಲ: ಯಾವ ಪಕ್ಷದ ಕೈಹಿಡಿದರು ಹಿರಿಯ ನಟಿ

  |

  90 ರ ದಶಕದಲ್ಲಿ ವಯಸ್ಕರ ಸಿನಿಮಾ ತಾರೆ ಆಗಿ ದೊಡ್ಡ ಹೆಸರುಗಳಿಸಿದ್ದ ನಟಿ ಶಕೀಲ ಬೇಗಂ ಈಗ ವಯಸ್ಕರ ಸಿನಿಮಾ ಬಿಟ್ಟು ನಟನೆಗಷ್ಟೆ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ಶಕೀಲ ಇದೀಗ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಶಕೀಲ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

  ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ಬಿರುಸಾಗಿ ನಡೆಯುತ್ತಿದ್ದು, ಚೆನ್ನೈನಲ್ಲಿ ನೆಲೆಸಿರುವ ನಟಿ ಶಕೀಲ ಬೇಗಂ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

  ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಂತೆ ಪ್ರಮುಖ ಜವಾಬ್ದಾರಿಯೊಂದನ್ನು ತಮಿಳುನಾಡು ಕಾಂಗ್ರೆಸ್ ನೀಡಿದೆ. ತಮಿಳುನಾಡು ರಾಜ್ಯ ಕಾಂಗ್ರೆಸ್‌ನ ಮಾನವ ಹಕ್ಕು ಘಟಕದ ಕಾರ್ಯದರ್ಶಿಯಾಗಿ ಶಕೀಲ ಅವರನ್ನು ನೇಮಿಸಲಾಗಿದೆ.

  ಶಕೀಲಗೆ ರಾಜಕೀಯ ತೀರ ಹೊಸದೇನೂ ಅಲ್ಲ. ಕೇರಳದ ಚುನಾವಣೆಗಳಲ್ಲಿ ಪ್ರಚಾರಕ್ಕಾಗಿ ಕೆಲವು ಪಕ್ಷಗಳು ಶಕೀಲ ಅವರನ್ನು ಬಳಸಿಕೊಂಡಿತ್ತು. ಆದರೆ ಆಗೆಲ್ಲಾ ನಟನೆಯಲ್ಲಿ ಬ್ಯುಸಿಯಾಗಿದ್ದ ಶಕೀಲ ಈಗ ರಾಜಕೀಯಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ.

  ಸುಮಾರು 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಕೀಲ ಬೇಗಂ. ಕೆಲವು ಟಿವಿ ಶೋ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ವಯಸ್ಕರ ಸಿನಿಮಾ ಮಾತ್ರವೇ ಅಲ್ಲದೆ ಮನೊರಂಜನಾತ್ಮಕ, ಕೌಟುಂಬಿಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಶಕೀಲ.

  ತಮಿಳುನಾಡು ವಿಧಾನಸಭೆ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ನಾಮಪತ್ರ ಸಹ ಸಲ್ಲಿಕೆಯಾಗಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

  ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಇದೀಗ ಕಾಂಗ್ರೆಸ್ ಪಕ್ಷ ಸೇರಿರುವ ಶಕೀಲ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಜ್ಯದಾದ್ಯಂತ ಪ್ರಚಾರ ನಡೆಸಲಿದ್ದಾರೆ.

  Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada

  ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ಶಕೀಲ ಜೀವನ ಆಧರಿಸಿ ಅವರದ್ದೇ ಹೆಸರಲ್ಲಿ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ರಿಚಾ ಛಡ್ಡಾ ಅವರು ಶಕೀಲ ಪಾತ್ರದಲ್ಲಿ ನಟಿಸಿದ್ದರು.

  English summary
  Actress Shakeela Begaum joins congress party ahead of Tamil Nadu assembly elections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X