For Quick Alerts
  ALLOW NOTIFICATIONS  
  For Daily Alerts

  ವಾಲಿಮೈ ಚಿತ್ರದ ಫೋಟೋ ಲೀಕ್: ಅಜಿತ್ ಜೊತೆ ಕನ್ನಡ ನಟ!

  |

  ಅಜಿತ್ ಕುಮಾರ್ ನಟಿಸುತ್ತಿರುವ ವಾಲಿಮೈ ಚಿತ್ರ ಅಪ್‌ಡೇಟ್ ಕೊಡಿ ಎಂದು ಅಭಿಮಾನಿಗಳು ಬಹುದಿನದಿಂದ ಬೇಡಿಕೆಯಿಟ್ಟಿದ್ದಾರೆ. ಸಿನಿಮಾ ಆರಂಭವಾದ ಕ್ಷಣದಿಂದ ಇದುವರೆಗೂ ಸಿನಿಮಾಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  ಇದೀಗ, ಹೊಸ ವರ್ಷದ ಸಂಭ್ರಮದಲ್ಲಿರುವ ಅಜಿತ್ ಕುಮಾರ್ ಅಭಿಮಾನಿಗಳಿಗೆ ಫೋಟೋವೊಂದು ಲಭ್ಯವಾಗಿದೆ. ವಾಲಿಮೈ ಚಿತ್ರದ ಮೇಕಿಂಗ್ ಫೋಟೋವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಚಿತ್ರೀಕರಣ ವೇಳೆ ಗಾಯಗೊಂಡ ನಟ ಅಜಿತ್; ಹೈದರಾಬಾದ್ ನಲ್ಲಿ ಚಿಕಿತ್ಸೆಚಿತ್ರೀಕರಣ ವೇಳೆ ಗಾಯಗೊಂಡ ನಟ ಅಜಿತ್; ಹೈದರಾಬಾದ್ ನಲ್ಲಿ ಚಿಕಿತ್ಸೆ

  ಈ ಫೋಟೋ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದು, ಟೀಸರ್ ಬಿಡುಗಡೆ ಮಾಡಿ, ಪೋಸ್ಟರ್ ರಿಲೀಸ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಅಜಿತ್ ಬೈಕ್ ಡ್ರೈವ್ ಮಾಡುತ್ತಿರುವ ಫೋಟೋ ಲೀಕ್ ಆಗಿತ್ತು.

  ಸದ್ಯ ವೈರಲ್ ಚಿತ್ರದಲ್ಲಿ ಅಜಿತ್ ಕುಮಾರ್, ಕನ್ನಡ ನಟ ಅಚ್ಯುತ್ ಕುಮಾರ್ ಹಾಗೂ ಇತರೆ ಕಲಾವಿದರು ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಇದು ಫ್ಯಾಮಿಲಿ ಫೋಟೋ ಎನ್ನುವಂತಿದೆ.

  'ವಾಲಿಮೈ' ಚಿತ್ರದ ಸಾಹಸ ದೃಶ್ಯ ಚಿತ್ರೀಕರಿಸುವ ವೇಳೆ ಅಜಿತ್ ಕುಮಾರ್‌ಗೆ ಗಾಯಗಳಾಗಿದ್ದು, ವಿಶ್ರಾಂತಿ ಪಡೆಯದೆ ಶೂಟಿಂಗ್ ಮಾಡಿದ್ದರು. ನಿರ್ಮಾಪಕರಿಗೆ ನಷ್ಟ ಆಗಬಾರದು ಎಂಬ ಕಾರಣಕ್ಕೆ ಅಂದುಕೊಂಡಿದ್ದ ದಿನಕ್ಕೆ ಸಿನಿಮಾ ಮುಗಿಯಬೇಕು ಎಂಬ ದೃಢನಿರ್ಧಾರ ಮಾಡಿ ಚಿತ್ರೀಕರಣ ಮಾಡ್ತಿದ್ದಾರೆ ಎಂದು ಅಜಿತ್ ಟೀಮ್ ಮಾಹಿತಿ ನೀಡಿತ್ತು.

  ನಟಿ ಹೀರಾ ಜೊತೆ ತಲಾ ಅಜಿತ್ ಲವ್: ಬ್ರೇಕ್ ಅಪ್ ಆಗಿದ್ದು ಏಕೆ?ನಟಿ ಹೀರಾ ಜೊತೆ ತಲಾ ಅಜಿತ್ ಲವ್: ಬ್ರೇಕ್ ಅಪ್ ಆಗಿದ್ದು ಏಕೆ?

  ಎಚ್ ವಿನೋದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಹುಮಾ ಖುರೇಶಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗು ನಟ ಕಾರ್ತಿಕೇಯ (RX 100 ಸಿನಿಮಾ ನಟ) ಹಾಸ್ಯನಟ ಯೋಗಿಬಾಬು ಸಹ ಪಾತ್ರವರ್ಗದಲ್ಲಿದ್ದಾರೆ.

  English summary
  Tamil actor Ajith kumar's starrer Valimai movie shooting pic leak. viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion