Just In
Don't Miss!
- News
ಬೆಂಗಳೂರು ರಸ್ತೆ ಗುಂಡಿ ಬಗ್ಗೆ ವಾಟ್ಸಾಪ್ ಮಾಡಿ,ಹೈಕೋರ್ಟ್ ತಲುಪುತ್ತೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Lifestyle
ಬುಧವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಾಯಿ ನಿಧನ
ಆಸ್ಕರ್ ವಿಜೇತ, ವಿಶ್ವ ವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ತಾಯಿ ಇಂದು (ಡಿಸೆಂಬರ್ 28) ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಸಂಗೀತ ನಿರ್ದೇಶಕದ ಎ.ಆರ್.ರೆಹಮಾನ್, ತಾಯಿ ಕರೀಮಾ ಬೇಗಂ ಬಗ್ಗೆ ವಿಪರೀತ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು. ಕರೀಮಾ ಬೇಗಂ ಅವರಿಗೆ ವಯೋಸಹಜ ಕೆಲವು ಆರೋಗ್ಯ ಸಮಸ್ಯೆಗಳಿದ್ದವು.
ಕರೀಮಾ ಬೇಗಂ ಅವರು ದಿವಂಗತ ಸಂಗೀತ ನಿರ್ದೇಶಕ ಆರ್‌ಕೆ ಶೇಖರ್ ಪತ್ನಿ. ಪತಿ ಶೇಖರ್ 1976 ರಲ್ಲಿ ನಿಧನ ಹೊಂದಿದರು. ಆ ನಂತರ ಕರೀಮಾ ಬೇಗಂ ಒಬ್ಬರೇ ಎ.ಆರ್.ರೆಹಮಾನ್ ಸೇರಿದಂತೆ ನಾಲ್ಕು ಜನ ಮಕ್ಕಳನ್ನು ಒಬ್ಬರೇ ಸಾಕಿ ದೊಡ್ಡವರನ್ನಾಗಿ ಮಾಡಿದರು.
ಕರೀಮಾ ಬೇಗಂ ಮೂಲ ಹೆಸರು ಕಸ್ತೂರಿ, ನಂತರ ರೆಹಮಾನ್ ಸೇರಿದಂತೆ ಇಡೀಯ ಕುಟುಂಬದವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಗೊಂಡರು.
ತಾಯಿಯೊಂದಿಗೆ ಬಹಳ ಬಾಂದವ್ಯ ಹೊಂದಿದ್ದರು ಎ.ಆರ್.ರೆಹಮಾನ್. ಒಮ್ಮೆ ಸಂದರ್ಶನದಲ್ಲಿ, 'ನಾನು ಸಂಗೀತ ನಿರ್ದೇಶಕನಾಗಲು ಅಮ್ಮನೇ ಕಾರಣ. ನಾನು ಸಂಗೀತವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದು ಆಕೆಯೇ, ಆಕೆಗೆ ಒಂದು ವಿಶಿಷ್ಟವಾದ ಜ್ಞಾನವಿದೆ' ಎಂದಿದ್ದರು. ರೆಹಮಾನ್ 'ಮಾ ತುಜೆ ಸಲಾಮ್' ಹಾಡು ಮಾಡಿದ್ದಕ್ಕೂ ಅವರ ತಾಯಿಯೇ ಕಾರಣವಂತೆ.