For Quick Alerts
  ALLOW NOTIFICATIONS  
  For Daily Alerts

  ಎಂಜಿಆರ್ ಪಾತ್ರದಲ್ಲಿ ಜೀವ ತುಂಬಿದ ಖ್ಯಾತ ನಟ ಅರವಿಂದ್ ಸ್ವಾಮಿ

  |

  ಭಾರತೀಯ ಚಿತ್ರರಂಗ ಕಂಡ ಸೂಪರ್ ಸ್ಟಾರ್ ಎಂಜಿಆರ್ ಅವರ ಹುಟ್ಟುಹಬ್ಬದ ಪ್ರಯುಕ್ತ, ತಲೈವಿ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

  ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | FILMIBEAT KANNADA

  ಕಂಗನಾ ರಣಾವತ್ ನಟಿಸುತ್ತಿರುವ 'ತಲೈವಿ' ಚಿತ್ರದಲ್ಲಿ ಎಂಜಿಆರ್ ಪಾತ್ರ ಪ್ರಮುಖವಾಗಿದ್ದು, ಈ ಪಾತ್ರದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ಬಣ್ಣ ಹಚ್ಚಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಹೇಗೆ ನಟಿಸಬಹುದು ಎಂಬ ಕುತೂಹಲ ಕಾಡುತ್ತಿತ್ತು. ಆದ್ರೀಗ, ಎಂಜಿಆರ್ ಫಸ್ಟ್ ಲುಕ್ ಟೀಸರ್ ನೋಡಿದ್ಮೇಲೆ ನಿಜಕ್ಕೂ ಚಿತ್ರರಸಿಕರಿಗೆ ಖುಷಿಯಾಗಿದ್ದಾರೆ.

  ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುವಂತೆ ಸ್ಟಾರ್ ನಟನಿಗೆ ಆಫರ್!

  ಅರವಿಂದ್ ಸ್ವಾಮಿ ಅವರು ಎಂಜಿಆರ್ ಪಾತ್ರದಲ್ಲಿ ಜೀವಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 60-70ರ ದಶಕದಲ್ಲಿ ಎಂಜಿಆರ್ ಹೇಗೆ ಕಾಣಿಸುತ್ತಿದ್ದರೋ ಅದೇ ರೀತಿ ಹೇರ್ ಸ್ಟೈಲ್, ಕಾಸ್ಟ್ಯೂಮ್ ಬಳಸಿರುವ ಚಿತ್ರತಂಡ ಸೂಪರ್ ಸ್ಟಾರ್ ನಟನನ್ನು ಮತ್ತೆ ನೆನಪಿಸುತ್ತಿದೆ.

  ಅಂದ್ಹಾಗೆ, ಎಂಜಿಆರ್ ಮತ್ತು ಜಯಲಲಿತಾ ಅವರ ಕಾಂಬಿನೇಷನ್ ನಲ್ಲಿ 28ಕ್ಕೂ ಹೆಚ್ಚು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 1965 ರಿಂದ 1973ರ ಅವಧಿಯಲ್ಲಿ ಈ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ಸಿನಿಮಾರಂಗ ಮತ್ತು ರಾಜಕೀಯ ರಂಗದಲ್ಲೂ ಜಯಲಲಿತಾ ಅವರ ಜೊತೆಯಲ್ಲಿದ್ದ ಎಂಜಿಆರ್ ಪಾತ್ರ ಈ ಬಯೋಪಿಕ್ ನಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.

  'ತಲೈವಿ' ಕಾಲೆಳೆದವರಿಗೆ ಚಾಟಿ ಏಟು ಬೀಸಿದ ಕಂಗನಾ ಸಹೋದರಿ

  ಇನ್ನುಳಿದಂತೆ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಬಯೋಪಿಕ್ ಚಿತ್ರ ತಯಾರಾಗುತ್ತಿದೆ. ಎಎಲ್ ವಿಜಯ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ್ ಇಂದುರಿ ನಿರ್ಮಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಜೂನ್ 26 ರಂದು ತಲೈವಿ ಚಿತ್ರಮಂದಿರಕ್ಕೆ ಬರುತ್ತಿದೆ.

  English summary
  Tamil Actor Aravind Swamy palying tamil super star MGR role in Jayalalithaa Biopic. now, first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X