Just In
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರುತಿ ಹಾಸನ್ ವಿರುದ್ಧ ಬಿಜೆಪಿ ಆಕ್ರೋಶ: ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯ
ನಟ, ರಾಜಕಾರಣಿ ಕಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ. ಚುನಾವಣಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ದೂರು ನೀಡಿದೆ ಬಿಜೆಪಿ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ನಿನ್ನೆ (ಮಾರ್ಚ್ 06) ಕಮಲ್ ಹಾಸನ್, ಶ್ರುತಿ ಹಾಸನ್, ಅಕ್ಷರಾ ಹಾಸನ್ ಅವರುಗಳು ಒಟ್ಟಿಗೆ ಚೆನ್ನೈನಲ್ಲಿ ಮತದಾನ ಮಾಡಿದರು.
ಮತದಾನದ ನಂತರ ಕಮಲ್ ಹಾಸನ್ ಅವರು ತಾವು ಚುನಾವಣೆಗೆ ಸ್ಪರ್ಧಿಸಿರುವ ಕೊಯಂಬತ್ತೂರು ದಕ್ಷಿಣ ಕ್ಷೇತ್ರಕ್ಕೆ ತೆರಳಿ ಮತದಾನ ನಡೆಯುತ್ತಿದ್ದ ಬೂತ್ ಗಳಿಗೆ ಭೇಟಿ ಮಾಡಿದರು. ಈ ಸಮಯದಲ್ಲಿ ಶ್ರುತಿ ಹಾಸನ್ ಸಹ ಕಮಲ್ ಹಾಸನ್ ಜೊತೆಗೆ ಬೂತ್ ಒಳಗೆ ಹೋಗಿದ್ದರು.
ತಮಿಳುನಾಡು ಚುನಾವಣೆ: ತಾರೆಯರಿಂದ ಮತ ಚಲಾವಣೆ, ವಿಜಯ್ ಫುಲ್ ಡಿಫರೆಂಟ್
ಚುನಾವಣಾ ನಿಯಮದ ಅನ್ವಯ, ಪಕ್ಷದ ನೊಂದಾಯಿತ ಏಜೆಂಟರು, ಮತದಾನ ಮಾಡುವವರು, ಚುನಾವಣಾ ಅಧಿಕಾರಿಗಳು, ಅಭ್ಯರ್ಥಿ, ಚುನಾವಣಾ ಆಯೋಗದಿಂದ ಅನುಮತಿ ಪಡೆದ ಪತ್ರಕರ್ತರು ಬಿಟ್ಟರೆ ಬೂತ್ ಒಳಗೆ ಇನ್ನಾರೂ ಪ್ರವೇಶ ಮಾಡುವಂತಿಲ್ಲ.

ಕಮಲ್ ಜೊತೆಗೆ ಬೂತ್ ಪ್ರವೇಶಿಸಿದ್ದ ಶ್ರುತಿ
ನಟಿ ಶ್ರುತಿ ಹಾಸನ್ ಅವರು ತಂದೆ ಕಮಲ್ ಹಾಸನ್ ಜೊತೆಗೆ ಹಲವು ಮತಗಟ್ಟೆಗಳಿ ಭೇಟಿ ನೀಡಿ ಮತದಾನ ನಡೆಯುತ್ತಿದ್ದ ಬೂತ್ ಒಳಗೂ ಸಹ ಪ್ರವೇಶಿಸಿದ್ದರು. ಶ್ರುತಿ ಹಾಗೂ ಕಮಲ್ ಹಾಸನ್ ಒಟ್ಟಿಗೆ ಮತದಾನ ನಡೆಯುತ್ತಿರುವ ಬೂತ್ ಒಳಗೆ ಹೋಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಶ್ರುತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ
ಇದನ್ನು ಖಂಡಿಸಿರುವ ಬಿಜೆಪಿಯು ಶ್ರುತಿ ವಿರುದ್ಧ ಆಕ್ರೋಶ ಹೊರಹಾಕಿದೆ. ಬಿಜೆಪಿ ಕೊಯಂಬತ್ತೂರು ಜಿಲ್ಲಾ ಅಧ್ಯಕ್ಷ ಹಾಗೂ ಕೊಯಂಬತ್ತೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ನಂದಕುಮಾರ್ ಅವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಆರೋಪ ಮಾಡಿದ ಕಮಲ್ ಹಾಸನ್
ನಿನ್ನೆ ಬೂತ್ ಭೇಟಿ ವೇಳೆ ಮಾತನಾಡಿದ ಕಮಲ್ ಹಾಸನ್ ಅವರು ಕ್ಷೇತ್ರದ ಕೆಲವೆಡೆ ಬಿಜೆಪಿಯು ಮತದಾರರಿಗೆ ಹಣ ಹಂಚುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ತಾವೇ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದರು.

ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಕಮಲ್
ಕಮಲ್ ಹಾಸನ್ ಅವರು 'ಮಕ್ಕಳ್ ನಿಧಿ ಮಯಂ' ಪಕ್ಷ ಸ್ಥಾಪಿಸಿದ ನಂತರ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ 'ಮಕ್ಕಳ್ ನಿಧಿ ಮಯಂ' ಪಕ್ಷ ಸ್ಪರ್ಧೆ ಮಾಡಿತ್ತು ಆದರೆ ಒಂದು ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿರಲಿಲ್ಲ. ಕಮಲ್ ಹಾಸನ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ.