For Quick Alerts
  ALLOW NOTIFICATIONS  
  For Daily Alerts

  'ಜೈಲರ್' ರಜನಿಗೆ ಶಿವ ಬಲ: '2.0' ದಾಖಲೆ ಧೂಳಿಪಟ ಆಗುತ್ತಾ?

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕೂಡ ತಂಡವನ್ನು ಸೇರಿಕೊಂಡಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಕರ್ನಾಟಕದಲ್ಲಿ 'ಜೈಲರ್' ದೊಡ್ಟಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ.

  ಆಕ್ಷನ್ ಎಂಟರ್‌ಟೈನರ್ 'ಜೈಲರ್' ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ಸೂಪರ್ ಹಿಟ್ ಆಗಿದೆ. ಸ್ಟೈಲಿಶ್ ಲುಕ್‌ನಲ್ಲಿ ತಲೈವಾ ಅಬ್ಬರಿಸೋಕೆ ಬರ್ತಿದ್ದಾರೆ. ಚಿತ್ರದ ಮುಖ್ಯದಲ್ಲಿ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಜಮಾನ ಆಗಿರುವುದರಿಂದ ಕನ್ನಡಕ್ಕೂ 'ಜೈಲರ್' ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಲಿದೆ. ರಜನಿ- ಶಿವಣ್ಣ ಕಾಂಬಿನೇಷನ್ ಅಂದಮೇಲೆ ಕೇಳಬೇಕೆ? ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ.

  ಕಾಲಿವುಡ್‌ಗೆ ಕಾಲಿಟ್ಟ ಶಿವ ರಾಜ್‌ಕುಮಾರ್; ಚಿತ್ರೀಕರಣದ ಫೋಟೊ ರಿವೀಲ್ಕಾಲಿವುಡ್‌ಗೆ ಕಾಲಿಟ್ಟ ಶಿವ ರಾಜ್‌ಕುಮಾರ್; ಚಿತ್ರೀಕರಣದ ಫೋಟೊ ರಿವೀಲ್

  ತಮಿಳು ಸಿನಿಮಾಗಳು ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ರಜನಿಕಾಂತ್ ಸಿನಿಮಾಗಳಿಗೂ ದೊಡ್ಡ ಓಪನಿಂಗ್, ರೆಸ್ಪಾನ್ಸ್ ಸಿಗುತ್ತದೆ. ಹಾಗಾಗಿ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆ ಚರ್ಚೆ ಶುರುವಾಗಿದೆ.

  '2.0' ದಾಖಲೆ ಮುರಿತ್ತಾನಾ 'ಜೈಲರ್'?

  '2.0' ದಾಖಲೆ ಮುರಿತ್ತಾನಾ 'ಜೈಲರ್'?

  ಈವರೆಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ '2.0' ಹೆಸರಿನಲ್ಲಿದೆ. ಶಂಕರ್ ನಿರ್ದೇಶನದ ರಜನಿಕಾಂತ್ ಹಾಗೂ ಅಕ್ಷಯ್‌ ಕುಮಾರ್ ನಟನೆಯ ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ ಒಟ್ಟು 800 ಕೋಟಿ ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲೇ 45 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. 'ಜೈಲರ್' ಚಿತ್ರದಲ್ಲಿ ಶಿವಣ್ಣ ಕೂಡ ನಟಿಸಿರುವುದರಿಂದ ದೊಡ್ಡಮಟ್ಟದಲ್ಲಿ ಕನ್ನಡ ಸಿನಿರಸಿಕರು ಸಿನಿಮಾ ನೋಡುವ ಸಾಧ್ಯತೆಯಿದೆ. ಹಾಗಾಗಿ ಸಹಜವಾಗಿಯೇ '2.0' ದಾಖಲೆ ಅಳಿಸಿ ಹೊಸ ದಾಖಲೆ ಬರೆಯುವ ಚರ್ಚೆ ನಡೀತಿದೆ.

  ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರಗಳು

  ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರಗಳು

  ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾಗಳು ಯಾವುವು ಎನ್ನುವುದರ ಪಟ್ಟಿ ಇಲ್ಲಿದೆ.

  1. 2.0 - 46.20 ಕೋಟಿ
  2. ಕಬಾಲಿ- 29.15 ಕೋಟಿ
  3. ವಿಕ್ರಂ- 26 ಕೋಟಿ
  4. ಬಿಗಿಲ್- 19.25 ಕೋಟಿ
  5. ದರ್ಬಾರ್- 19.10 ಕೋಟಿ

  ಅದ್ಧೂರಿ ಸಿನಿಮಾ 'ಜೈಲರ್'

  ಅದ್ಧೂರಿ ಸಿನಿಮಾ 'ಜೈಲರ್'

  ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ರಜನಿಕಾಂತ್, ಶಿವಣ್ಣ ಜೊತೆಗೆ ರಮ್ಯಾ ಕೃಷ್ಣ, ಮೂನ್ ನಿಲಾ, ವಸಂತ್ ರವಿ, ಯೋಗಿ ಬಾಬು, ವಿನಾಯಕನ್ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಐಶ್ವರ್ಯ ರೈ ಸೇರಿದಂತೆ ಮತ್ತಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.

  ಏಪ್ರಿಲ್ 14ಕ್ಕೆ 'ಜೈಲರ್' ಆರ್ಭಟ

  ಏಪ್ರಿಲ್ 14ಕ್ಕೆ 'ಜೈಲರ್' ಆರ್ಭಟ

  ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಜೈಲರ್' ಸಿನಿಮಾ ನಿರ್ಮಾಣವಾಗುತ್ತಿದೆ. ಚೆನ್ನೈನಲ್ಲಿ ದೊಡ್ಡದೊಡ್ಡ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಕಳೆದ 3 ದಿನಗಳಿಂದ ಶಿವರಾಜ್‌ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಘೋಷಿಸಿದೆ. ಮುಂದಿನ ವರ್ಷ ಏಪ್ರಿಲ್ 14ಕ್ಕೆ ಸಿನಿಮಾ ತೆರೆಗೆ ಬರಲಿದೆ.

  English summary
  Expecting Rajinikanth And Shivarajkumar Starrer Jailer to break 2 Point 0 record in Karnataka. Top 5 Kollywood films At Karnataka Boxoffice List.
  Sunday, November 20, 2022, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X