For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ-ಶ್ರುತಿ ಹಾಸನ್ ಸಿನಿಮಾ ಚಿತ್ರೀಕರಣ ಸೆಟ್‌ಗೆ ಪೊಲೀಸ್ ಭದ್ರತೆ!

  |

  ನಟ ವಿಜಯ್ ಸೇತುಪತಿ ಹಾಗೂ ಶ್ರುತಿ ಹಾಸನ್ ನಟಿಸುತ್ತಿರುವ 'ಲಾಭಂ' ಸಿನಿಮಾದ ಚಿತ್ರೀಕರ ಕೃಷ್ಣಗಿರಿಯಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ಸೆಟ್‌ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆಯಂತೆ.

  ಕೆಲವು ದಿನಗಳ ಹಿಂದಷ್ಟೆ ನಟಿ ಶ್ರುತಿ ಹಾಸನ್ ಚಿತ್ರೀಕರಣ ಸೆಟ್‌ ಬಿಟ್ಟು ಹೋಗಿಬಿಟ್ಟಿದ್ದರು. ಸೆಟ್‌ಗೆ ಬಹಳ ಮಂದಿ ಅಭಿಮಾನಿಗಳು ಬರುತ್ತಿದ್ದು, ಅವರನ್ನು ನಟ ವಿಜಯ್ ಸೇತುಪತಿ ಮಾತನಾಡಿಸುವುದು, ಕೈಕುಲುಕುವುದು ಮಾಡುತ್ತಿರುತ್ತಾರೆ, ಇದು ಕೋವಿಡ್ ನಿಯಮದ ಉಲ್ಲಂಘನೆ ಎಂದು ಹೇಳಿ ಅವರು ಹೀಗೆ ಮಾಡಿದ್ದರು.

  ಈ ಬಗ್ಗೆ ಟ್ವೀಟ್ ಸಹ ಮಾಡಿದ್ದ ಶ್ರುತಿ ಹಾಸನ್, 'ನನ್ನ ಆರೋಗ್ಯ ಕಾಪಾಡಿಕೊಳ್ಳುವ ಹಕ್ಕು ನನಗಿದೆ. ಇನ್ನೂ ಕೊರೊನಾ ಮುಗಿದಿಲ್ಲ, ಬೇಜವಬ್ದಾರಿಯುತ ವರ್ತನೆಯನ್ನು ಸಹಿಸಲಾಗಲು' ಎಂದು ಶ್ರುತಿ ಹೇಳಿದ್ದರು.

  ಇದೀಗ ಚಿತ್ರೀಕರಣ ಸೆಟ್‌ಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಚಿತ್ರೀಕರಣ ನೋಡಲು ಬರುವ ಜನರನ್ನು ನಿಯಂತ್ರಿಸಲು ನಿರ್ಮಾಪಕರು ಪೊಲೀಸರ ನೆರವು ಪಡೆಯುತ್ತಿದ್ದಾರೆ.

  ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದಲೂ ಚಿತ್ರತಂಡ ಬೀಡು ಬಿಟ್ಟಿದ್ದು, ಇಲ್ಲಿಯೇ ಭರದಿಂದ ಚಿತ್ರೀಕರಣ ಸಾಗಿದೆ. ಕೆಲವು ದೃಶ್ಯಗಳ ಜೊತೆಗೆ ಹಾಡಿನ ಚಿತ್ರೀಕರಣ ಸಹ ಇಲ್ಲಿಯೇ ನಡೆಯುತ್ತಿದೆ.

  ಏರ್ ಪೋರ್ಟ್ ಗೆ ಆಗಮಿಸಿದ Nora Fatehi | Filmibeat Kannada

  ಲಾಭಂ ಸಿನಿಮಾವನ್ನು ಎಸ್‌ಪಿ ಜ್ಞಾನನಾಥನ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ, ಶ್ರುತಿ ಹಾಸನ್ ಹೊರತಾಗಿ, ಜಗಪತಿ ಬಾಬು, ಸಾಯಿ ಧನ್ಸಿಕಾ, ಕಲೈಯರಸನ್ ಇನ್ನೂ ಹಲವರಿದ್ದಾರೆ. ಸಿನಿಮಾವನ್ನು ಪಿ ಆರುಮುಗಂ ಕುಮಾರ್ ನಿರ್ಮಿಸುತ್ತಿದ್ದಾರೆ.

  English summary
  Laabam Tamil movie shooting set got police protection to prevent visitors and fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X