200 ಕೋಟಿ ಗಳಿಸಿದ ರಜನಿಕಾಂತ್ ನಟನೆಯ ಚಿತ್ರಗಳ ಪಟ್ಟಿ ಇಲ್ಲಿದೆ

ತಮಿಳಿನ ಸೂಪರ್ ಸ್ಟಾರ್ ಹಾಗೂ ತಲೈವಾ ಎಂದು ಖ್ಯಾತಿಯನ್ನು ಪಡೆದು ತಮ್ಮ ಇಳಿ ವಯಸ್ಸಲ್ಲೂ ನಂಬರ್ ಒನ್ ನಟನಾಗಿ ಮೆರೆಯುತ್ತಿರುವ ನಟ ರಜನಿಕಾಂತ್ ಅವರು ನಿನ್ನೆ ( ಡಿಸೆಂಬರ್ 12 ) ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಜೈಲರ್ ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್ ನಟಿಸುವ ಚಿತ್ರಗಳೆಂದರೆ ನಿರ್ಮಾಪಕ ಸೇಫ್ ಎಂಬುದು ಕಟ್ಟಿಟ್ಟ ಬುತ್ತಿ.
ಮಿಶ್ರ ಪ್ರತಿಕ್ರಿಯೆ ಹಾಗೂ ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ಚಿತ್ರಗಳ ಮೂಲಕವೇ ನೂರಾರು ಕೋಟಿ ಗಳಿಸಿ ತೋರಿಸಿರುವ ರಜನಿಕಾಂತ್ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿದ್ದಾರೆ. ಹೀಗೆ ರಜನಿಕಾಂತ್ ಸಿನಿ ಕೆರಿಯರ್‌ನಲ್ಲಿ ಬರೋಬ್ಬರಿ ಒಂಬತ್ತು ನೂರು ಕೋಟಿ ಕಲೆಕ್ಷನ್ ಮಾಡಿರುವ ಚಿತ್ರಗಳನ್ನು ನೀಡಿದ್ದು, ಈ ಪೈಕಿ ಐದು ಚಿತ್ರಗಳು ಇನ್ನೂರು ಕೋಟಿ ಕ್ಲಬ್ ಸೇರಿವೆ. ಹಾಗಿದ್ದರೆ ಇನ್ನೂರು ಕೋಟಿ ಕ್ಲಬ್ ಸೇರಿರುವ ರಜನಿಕಾಂತ್ ನಟನೆಯ ಆ ಚಿತ್ರಗಳು ಯಾವುದು ಎಂಬ ಪಟ್ಟಿ ಈ ಕೆಳಕಂಡಂತಿದೆ..
* 2022ರಲ್ಲಿ ಬಿಡುಗಡೆಗೊಂಡಿದ್ದ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರ ವಿಶ್ವದಾದ್ಯಂತ 224 ಕೋಟಿ ಕಲೆಕ್ಷನ್ ಮಾಡಿತ್ತು.
* 2019ರಲ್ಲಿ ಬಿಡುಗಡೆಗೊಂಡಿದ್ದ ಪೆಟ್ಟಾ ಚಿತ್ರ ವಿಶ್ವದಾದ್ಯಂತ 233 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
* 2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ( ರೊಬೊ ) ವಿಶ್ವದಾದ್ಯಂತ 311 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
* 2016ರಲ್ಲಿ ತೆರೆ ಕಂಡಿದ್ದ ಕಬಾಲಿ ಚಿತ್ರ ವಿಶ್ವದಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
* 2018ರಲ್ಲಿ ಬಿಡುಗಡೆಗೊಂಡಿದ್ದ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ ರೊಬೊ 2.0 ವಿಶ್ವದಾದ್ಯಂತ 750 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.


Click it and Unblock the Notifications











