For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಧೋನಿ

  |

  ತಮಿಳುನಾಡಿಗರ ಪಾಲಿಗೆ 'ಥಲಾ' ಎನಿಸಿಕೊಂಡಿರುವ ಕ್ರಿಕೆಟಿಗ ಧೋನಿ ತಮಿಳುನಾಡಿನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಹಾಗೆಂದು ಅವರು ತಮಿಳುನಾಡು ರಾಜ್ಯ ಕ್ರಿಕೆಟ್ ತಂಡದ ಸದಸ್ಯ ಅಥವಾ ಕೋಚ್ ಆಗಿಲ್ಲ, ಬದಲಿಗೆ ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಹೌದು, ಕ್ರಿಕೆಟಿಗ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಕೆಲವು ಉದ್ದಿಮೆಗಳಲ್ಲಿ ಬಂಡವಾಳ ತೊಡಿಗಿಸಿದ್ದಾರೆ. ಕೃಷಿ ಸಹ ಮಾಡುತ್ತಿದ್ದಾರೆ. ಇದರ ಜೊತೆಗೆ ಈಗ ಸಿನಿಮಾ ಕ್ರೇತ್ರಕ್ಕೂ ಕಾಲಿಡಲು ಮುಂದಾಗಿದ್ದಾರೆ.

  ಧೋನಿ ಎಂಟರ್ಟೈನ್‌ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಕಟ್ಟಿರುವ ಮಹೇಂದ್ರ ಸಿಂಗ್ ಧೋನಿ, ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ಬಾರಿಗೆ ತಮಿಳು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಹಿಂದೆಯೇ ಧೋನಿ, ತಮಿಳು ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆಗ ಗಾಸಿಪ್ ಅಷ್ಟೆ ಆಗಿದ್ದ ಸುದ್ದಿ ಈಗ ನಿಜವಾಗುತ್ತಿದೆ.

  2019 ರಲ್ಲಿ ಸಂಸ್ಥೆ ನಿರ್ಮಿಸಿರುವ ಧೋನಿ

  2019 ರಲ್ಲಿ ಸಂಸ್ಥೆ ನಿರ್ಮಿಸಿರುವ ಧೋನಿ

  2019 ರಲ್ಲಿಯೇ ಧೋನಿ ಎಂಟರ್ಟೈನ್‌ಮೆಂಟ್ ಹೆಸರಿನ ಸಂಸ್ಥೆ ಕಟ್ಟಿದ್ದಾರೆ, ಧೋನಿಯ ಪತ್ನಿ ಸಾಕ್ಷಿ ಸಿಂಗ್ ಈ ಸಂಸ್ಥೆಯ ಕ್ರಿಯೇಟಿವ್ ಮ್ಯಾನೇಜರ್‌ ಆಗಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ವಿಕಾಸ್ ಅಹೆಜಾ ವ್ಯವಸ್ಥಾಪಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ.

  ಧೋನಿ ಎಂಟರ್ಟೈನ್‌ಮೆಂಟ್ ಸಂಸ್ಥೆ

  ಧೋನಿ ಎಂಟರ್ಟೈನ್‌ಮೆಂಟ್ ಸಂಸ್ಥೆ

  ಧೋನಿ ಅವರ ನಿರ್ಮಾಣ ಸಂಸ್ಥೆ ತಮಿಳಿನ ಸಿನಿಮಾ ಮಾಡುತ್ತಿರುವುದಾಗಿ ವಿಕಾಸ್ ಅಹೆಜಾ ಸ್ಪಷ್ಟಪಡಿಸಿದ್ದು, ''ಕೊರೊನಾ ನಂತರ ಮನೊರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಸಿನಿಮಾವು ಭಾಷೆಗಳನ್ನು ದಾಟಿ ಏಕೀಕರಣಗೊಂಡಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಗಳ ಸಿನಿಮಾಕ್ಕೆ ದೊಡ್ಡ ಬೇಡಿಕೆ ಬಂದಿದೆ. ಹಾಗಾಗಿ ಧೋನಿ ಎಂಟರ್ಟೈನ್‌ಮೆಂಟ್ ಸಂಸ್ಥೆಯು ಬೇರೆ ಬೇರೆ ಭಾಷೆಗಳಲ್ಲಿ ಅವಕಾಶ ಹುಡುಕುತ್ತಿದೆ'' ಎಂದಿದ್ದಾರೆ.

  ಲೇಖಕ ರಮೇಶ್ ತಮಿಳ್‌ಮಣಿ ನಿರ್ದೇಶನ

  ಲೇಖಕ ರಮೇಶ್ ತಮಿಳ್‌ಮಣಿ ನಿರ್ದೇಶನ

  'ಧೋನಿ-ದಿ ಒರಿಜಿನ್' ಗ್ರಾಫಿಕ್ ಕಾದಂಬರಿಯ ಲೇಖಕ ರಮೇಶ್ ತಮಿಳ್‌ಮಣಿ ಅವರು ಧೋನಿ ಎಂಟರ್ಟೈನ್‌ಮೆಂಟ್ ನಿರ್ಮಾಣ ಮಾಡಲಿರುವ ತಮಿಳು ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಧೋನಿಗೆ ತಮಿಳುನಾಡಿನ ಚಿತ್ರರಂಗದ ಹಲವರ ಪರಿಚಯ ಇದೆ. ಧೋನಿ ನಿರ್ಮಾಣದ ಮೊದಲ ಸಿನಿಮಾದಲ್ಲಿ ವಿಜಯ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಖಾತ್ರಿಯಾಗಿಲ್ಲ.

  ನಿರ್ಮಾಣದಲ್ಲಿ ತೊಡಗಿಕೊಂಡ ಧೋನಿ

  ನಿರ್ಮಾಣದಲ್ಲಿ ತೊಡಗಿಕೊಂಡ ಧೋನಿ

  ಧೋನಿಗೆ ಸಿನಿಮಾ ಹೊಸದೇನೂ ಅಲ್ಲ. ಅವರ ಜೀವನದ ಬಗ್ಗೆ ಈಗಾಗಲೇ ಸಿನಿಮಾ ಆಗಿದೆ. ಧೋನಿ ಸಹ ಹಲವು ಜಾಹೀರಾತಿನಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಾಮ ಸಿನಿಮಾ ತಾರೆಯರೊಡನೆ ಆತ್ಮೀಯ ಬಂಧ ಹೊಂದಿದ್ದಾರೆ. ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ ಧೋನಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವುದು ವಿಶೇಷ.

  English summary
  Former cricketer Mahendra Singh Dhoni producing Tamil movie by his production house, Dhoni Entertainment.
  Tuesday, October 25, 2022, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X