For Quick Alerts
  ALLOW NOTIFICATIONS  
  For Daily Alerts

  'ತಲೈವಿ' ಸೆನ್ಸಾರ್ ಪಾಸ್: ಈ ಸಲ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ!

  |

  ಭಾರತೀಯ ಸಿನಿಮಾರಂಗದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಸಿನಿಮಾ 'ತಲೈವಿ'. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಇದಾಗಿದ್ದು, 'ಅಮ್ಮ'ನ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದಾರೆ. ಸಂಪೂರ್ಣ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಸೆಪ್ಟೆಂಬರ್ 10ರಂದು ವರ್ಲ್ಡ್ ವೈಡ್ ತೆರೆಗೆ ಬರ್ತಿದೆ.

  ಇತ್ತೀಚಿಗಷ್ಟೆ ಸಿಬಿಎಫ್‌ಸಿ (Central Board of Film Certification) ಕಡೆಯಿಂದ ಸೆನ್ಸಾರ್ ಮುಗಿಸಿರುವ ತಲೈವಿ ಚಿತ್ರಕ್ಕೆ 'ಯು' ಪ್ರಮಾಣ ಪತ್ರ ಸಿಕ್ಕಿದೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತಲೈವಿ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆಗಳು ಗರಿಗೆದರಿದೆ.

  'ತಲೈವಿ' ಎಂಟ್ರಿಗೆ ಕೊನೆಗೂ ದಿನಾಂಕ ಫಿಕ್ಸ್; ಹೊಸ ಬಿಡುಗಡೆ ದಿನಾಂಕ ಘೋಷಣೆ'ತಲೈವಿ' ಎಂಟ್ರಿಗೆ ಕೊನೆಗೂ ದಿನಾಂಕ ಫಿಕ್ಸ್; ಹೊಸ ಬಿಡುಗಡೆ ದಿನಾಂಕ ಘೋಷಣೆ

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ತಲೈವಿ ಸಿನಿಮಾ ಚಿತ್ರಮಂದಿರಕ್ಕೆ ಬಂದಿರಬೇಕಿತ್ತು. ಎರಡ್ಮೂರು ಸಲ ರಿಲೀಸ್ ದಿನಾಂಕ ಘೋಷಿಸಿ ಥಿಯೇಟರ್‌ಗೆ ಬರಲು ತಯಾರಾಗಿತ್ತು. ಆದರೆ, ಕೋವಿಡ್ ಭೀತಿ ಹಾಗೂ ಸೋಂಕಿನ ಸಂಖ್ಯೆ ಏರಿಕೆಯಾದ್ದರಿಂದ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿತ್ತು. ಈ ಸಲ ತಲೈವಿ ಚಿತ್ರದ ಎಂಟ್ರಿಗೆ ಯಾವುದೇ ಅಡತಡೆ ಇದ್ದಂತೆ ಕಾಣ್ತಿಲ್ಲ. ಹಾಗಾಗಿ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಮಾತೇ ಇಲ್ಲ ಎನ್ನಲಾಗಿದೆ. ಮುಂದೆ ಓದಿ...

  50% ಮಾತ್ರ ಅವಕಾಶ ಇದೆ

  50% ಮಾತ್ರ ಅವಕಾಶ ಇದೆ

  ದೇಶಾದ್ಯಂತ ಸಂಪೂರ್ಣವಾಗಿ ಚಿತ್ರಮಂದಿರಗಳು ತೆರೆದಿಲ್ಲ. ಕರ್ನಾಟಕ, ಆಂಧ್ರ-ತಮಿಳುನಾಡು, ಮುಂಬೈ ನಗರದಲ್ಲಿ ಥಿಯೇಟರ್ ಓಪನ್ ಅಗಿದ್ದರೂ ಶೇಕಡಾ 50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಇನ್ನು ಕೋವಿಡ್ ಮೂರನೇ ಅಲೆಯ ಭೀತಿಯಿರುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ತಲೈವಿ ಸಿನಿಮಾ ಧೈರ್ಯದಿಂದ ರಿಲೀಸ್ ಮಾಡಲು ಮುಂದಾಗಿರುವುದು ನಿಜಕ್ಕೂ ಸರ್ಪ್ರೈಸ್.

  ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಕಂಗನಾ ರಣಾವತ್ ಡೇಟಿಂಗ್?ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಕಂಗನಾ ರಣಾವತ್ ಡೇಟಿಂಗ್?

  'ಬೆಲ್ ಬಾಟಮ್' ಕಲೆಕ್ಷನ್ ಕಮ್ಮಿ

  'ಬೆಲ್ ಬಾಟಮ್' ಕಲೆಕ್ಷನ್ ಕಮ್ಮಿ

  ಇಂತಹ ಸಂಕಷ್ಟ ಸಮಯದಲ್ಲಿ ತಲೈವಿ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬಹುದು. ಆದರೆ ನಿರೀಕ್ಷಿತ ಗಳಿಕೆ ಕಾಣುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕಂದ್ರೆ ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಸಿನಿಮಾ ಆಗಸ್ಟ್ 19 ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕಲೆಕ್ಷನ್‌ನಲ್ಲಿ ಬೆಲ್ ಬಾಟಮ್ ಮೋಡಿ ಮಾಡಲಿಲ್ಲ. ಹತ್ತು ದಿನಕ್ಕೆ 25 ಕೋಟಿ ಗಳಿಸಿದ್ದು ಸಾಧನೆ ಆಯ್ತು. ಈ ವಿಚಾರವನ್ನು ಮುಂದಿಟ್ಟು ನೋಡಿದರೆ ತಲೈವಿ ಚಿತ್ರಕ್ಕೂ ಕಲೆಕ್ಷನ್ ಕೊರತೆಯಾಗಬಹುದು.

  ಎ ಎಲ್ ವಿಜಯ್ ನಿರ್ದೇಶನ

  ಎ ಎಲ್ ವಿಜಯ್ ನಿರ್ದೇಶನ

  ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಥ್ರಿಲ್ ಹೆಚ್ಚಿಸಿದೆ. ತಲೈವಿ ಪೋಸ್ಟರ್, ಸಾಂಗ್ ಎಲ್ಲವೂ ನೋಡುಗರನ್ನು ಸೆಳೆಯುತ್ತಿದೆ.

  ಕಂಗನಾ ರಣಾವತ್ ಸಿನಿಮಾಗಳು

  ಕಂಗನಾ ರಣಾವತ್ ಸಿನಿಮಾಗಳು

  ತಲೈವಿ ಸಿನಿಮಾ ಹೊರತುಪಡಿಸಿ ಕಂಗನಾ ರಣಾವತ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಮಣಿಕರ್ಣಿಕಾ' ಸಿನಿಮಾ ಹಿಟ್ ಆದ್ಮೇಲೆ ಭಾಗ 2 ಎರಡು ಮಾಡುವುದಾಗಿ ಘೋಷಿಸಿದ್ದಾರೆ. 'ತೇಜಸ್' ಎನ್ನುವ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. 'ದಿ ಲೆಜೆಂಡ್ ಆಫ್ ದಿಡ್ಡಾ' ಪ್ರಾಜೆಕ್ಟ್ ಸಹ ಕಂಗನಾ ಕೈಯಲ್ಲಿದೆ. ಹೀಗೆ, ಒಂದು ಕಡೆ ಸಿನಿಮಾಗಳು, ಇನ್ನೊಂದೆಡೆ ವೈಯಕ್ತಿಕ ವಿಚಾರದ ವಿವಾದಗಳು 'ಕ್ವೀನ್' ಖ್ಯಾತಿಯ ಸುತ್ತ ಸುತ್ತಿಕೊಂಡಿದೆ.

  English summary
  Kangana ranaut and Arvind swamy starrer Thalaivi movie censored with 'U' Certificate by CBFC. Releasing 10th September in cinemas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X