For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ 'ಕಲ್ಪನ' ಯಶಸ್ವಿ ಅರ್ಧ ಶತಕ ನಾಟೌಟ್

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಲ್ಪನ' ಚಿತ್ರ ಯಶಸ್ವಿ ಅರ್ಧ ಶತಕ ಪೂರೈಸಿದೆ. ಈ ಮೂಲಕ 125 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ರಾಮ್ ನಾರಾಯಣ್ ಖಾತೆಗೆ ಮತ್ತೊಂದು ಯಶಸ್ವಿ ಚಿತ್ರ ಜಮಾವಣೆಯಾಗಿದೆ.

  'ಕಲ್ಪನ' ಚಿತ್ರತಂಡ ಈ ಸಡಗರ, ಸಂಭ್ರಮದಲ್ಲಿ ತೇಲಾಡುತ್ತಿದೆ. ತೆಲುಗು, ತಮಿಳಿನ ಯಶಸ್ವಿ ಚಿತ್ರ 'ಕಾಂಚನ' ರೀಮೇಕ್ ಆದ 'ಕಲ್ಪನ' ಚಿತ್ರ 25 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಬೆಂಗಳೂರಿನ ಸ್ವಪ್ನ ಚಿತ್ರಮಂದಿರದಲ್ಲಿ ಈಗಲೂ 'ಕಲ್ಪನ' ಚಿತ್ರ ಯಶಸ್ಚಿ ಪ್ರದರ್ಶನ ಕಾಣುತ್ತಿದ್ದು ಉಪ್ಪಿ ಅಭಿನಯ ಎಲ್ಲರನ್ನೂ ಸೆಳೆಯುತ್ತಿದೆ.

  ಉಪೇಂದ್ರ ಅಭಿನಯದ 'ಗಾಡ್ ಫಾದರ್' ಚಿತ್ರ ಅದ್ಯಾಕೋ ಏನೋ ಅರ್ಧ ಶತಕ ಬಾರಿಸುವಲ್ಲಿ ತಿಣುಕಾಡಬೇಕಾಯಿತು. ಆದರೆ 'ಕಠಾರಿವೀರ ಸುರಸುಂದರಾಂಗಿ' ಚಿತ್ರ 75 ದಿನ ಪ್ರದರ್ಶನ ಕಂಡಿದೆ. 'ಕಲ್ಪನ' ಚಿತ್ರದ ನಿರ್ಮಾಪಕ ಫುಲ್ ಸೇಫ್ ಆಗಿರುವುದಷ್ಟೇ ಅಲ್ಲ ಲಾಭದ ಫಸಲನ್ನೂ ಕಂಡಿದ್ದಾರೆ.

  ಚಿತ್ರದ ಸ್ಯಾಟಲೈಟ್ ಹಕ್ಕುಗಳಿಂದಲೇ ರು.1.75 ಕೋಟಿ ವಸೂಲಿಯಾಗಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ರು.6 ಕೋಟಿ ಎನ್ನುತ್ತವೆ ಮೂಲಗಳು. ಚಿತ್ರಕ್ಕೆ ಹೂಡಿರುವ ಬಂಡವಾಳ ರು.4 ಕೋಟಿಗೆ ಹೋಲಿಸಿದರೆ 'ಕಲ್ಪನ' ಚಿತ್ರ ನಿರ್ಮಾಪಕರಿಗೆ ಪಾಲಿಗೆ ಲಾಟರಿ ಹೊಡೆದಂತಾಗಿದೆ.

  ಮೈಸೂರು, ಉತ್ತರ ಕರ್ನಾಟಕ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೂಪರ್ ಹಿಟ್ ಆಗಿದ್ದು ರಾಜ್ಯದ ಉಳಿದೆಡೆ ಹಿಟ್ ಚಿತ್ರವಾಗಿ ಡಿಕ್ಲೇರ್ ಆಗಿದೆ. ಈ ಚಿತ್ರದ ಪಾತ್ರವರ್ಗದಲ್ಲಿ ಲಕ್ಷ್ಮಿ ರೈ, ಸಾಯಿಕುಮಾರ್, ಶ್ರುತಿ ಹಾಗೂ ಉಮಾಶ್ರೀ ಅಭಿನಯಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಈ ಚಿತ್ರದ ಮೂಲಕ ಸಾಯಿಕುಮಾರ್ ಮತ್ತೊಮ್ಮೆ ಕನ್ನಡಕ್ಕೆ ಅಡಿಯಿಟ್ಟದ್ದು ವಿಶೇಷ. (ಏಜೆನ್ಸೀಸ್)

  English summary
  Real Star Upendra, Saikumar and Lakshmi Rai starrer Kannada Comedy horror film Kalpana completes 50 days in 25 theatres. The film is a remake of the 2011 Tamil-Telugu blockbuster Kanchana. Veteran Film maker Rama Narayanan has directed and produced this movie under his banner Sri Thenaandal Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X