twitter
    For Quick Alerts
    ALLOW NOTIFICATIONS  
    For Daily Alerts

    ಸತತ ಸೋಲಿನ ಬಳಿಕ ಹೊಸ ಉದ್ಯಮ ಆರಂಭಿಸಿದ ನಟ ನಾಗ ಚೈತನ್ಯ

    |

    ಸಮಂತಾ ಜೊತೆಗೆ ವಿಚ್ಛೇಧನದ ಬಳಿಕ ನಾಗ ಚೈತನ್ಯ ವೃತ್ತಿಯ ಗ್ರಾಫು ಮಂಕಾಗಿದೆ. ನಟಿಸಿದ ಸಿನಿಮಾಗಳು ಸಾಲಾಗಿ ಸೋಲನುಭವಿಸಿವೆ. ಇದೀಗ ಹೊಸ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

    ಸಿನಿಮಾಗಳು ಸಾಲು-ಸಾಲಾಗಿ ಸೋಲುತ್ತಿರುವ ಈ ಹೊತ್ತಿನಲ್ಲಿಯೇ ನಾಗ ಚೈತನ್ಯ ಹೊಸ ಬ್ಯುಸಿನೆಸ್ ಒಂದಕ್ಕೆ ಕೈ ಹಾಕಿದ್ದಾರೆ. ನಾಗ ಚೈತನ್ಯ ಹೋಟೆಲ್ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ. ಹಲವು ನಟರು ಹೋಟೆಲ್ ಬ್ಯುಸಿನೆಸ್‌ ಅನ್ನು ಹೊಂದಿದ್ದಾರಾದರೂ ನಾಗ ಚೈತನ್ಯ ತುಸು ಭಿನ್ನವಾಗಿ ಈ ಉದ್ಯಮ ನಡೆಸುತ್ತಿದ್ದಾರೆ.

    ಕೋವಿಡ್ ಬಳಿಕ ಹೆಚ್ಚು ಜನಪ್ರಿಯತೆಗಳಿಸುತ್ತಿರುವ ಕ್ಲೌಡ್ ಕಿಚನ್‌ ಅನ್ನು ನಾಗ ಚೈತನ್ಯ ತೆರೆದಿದ್ದು, ಬಹಳ ಅಪರೂಪವಾಗಿರುವ 'ಪ್ಯಾನ್ ಏಷಿಯನ್' ಆಹಾರಗಳನ್ನು ಸಿದ್ದಪಡಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಕ್ಲೌಡ್ ಕಿಚನ್ ಆರಂಭಿಸಿ ಈಗಾಗಲೇ ಐದು ತಿಂಗಳಾಗಿವೆ. ಆದರೆ ಈಗ ಅದರ ಜಾಹೀರಾತು ಮತ್ತು ಎಕ್ಸ್‌ಪ್ಯಾನ್ಶನ್ ಮಾಡುತ್ತಿದ್ದಾರೆ.

    ಕ್ಲೌಡ್ ಕಿಚನ್ ಆರಂಭಿಸಿರುವ ನಾಗ ಚೈತನ್ಯ

    ಕ್ಲೌಡ್ ಕಿಚನ್ ಆರಂಭಿಸಿರುವ ನಾಗ ಚೈತನ್ಯ

    'ಶೋಯು' ಹೆಸರಿನ ಕ್ಲೌಡ್ ಕಿಚನ್ ಅನ್ನು ನಾಗ ಚೈತನ್ಯ ಪ್ರಾರಂಭ ಮಾಡಿದ್ದು, ಈ ಕ್ಲೌಡ್ ಕಿಚನ್ ಮೂಲಕ ಏಷಿಯಾದ ವಿವಿಧ ರಾಷ್ಟ್ರಗಳ ಜನಪ್ರಿಯ ಆಹಾರಗಳನ್ನು ಸಿದ್ದಪಡಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ. ಇದು ಕೇವಲ ಡೆಲಿವರಿ ಮಾತ್ರವೇ ನೀಡುವ ಉದ್ಯಮವಾಗಿದ್ದು, ಏಷ್ಯಾದ ಹಲವು ಪ್ರಮುಖ ಆಹಾರಗಳನ್ನು ಶೋಯು ಕ್ಲೌಡ್ ಕಿಚನ್‌ನಲ್ಲಿ ಸಿದ್ಧಪಡಿಸಿ ಅತ್ಯುತ್ತಮ ಪ್ಯಾಕೆಜಿಂಗ್ ಮೂಲಕ ನಾಗ ಚೈತನ್ಯ ಸರ್ವ್ ಮಾಡುತ್ತಿದ್ದಾರೆ.

    ಹಲವು ವಿಧದ ಆಹಾರಗಳು ಲಭ್ಯ

    ಹಲವು ವಿಧದ ಆಹಾರಗಳು ಲಭ್ಯ

    ನಾಗ ಚೈತನ್ಯ ಒಡೆತನದ ಶೋಯುನಲ್ಲಿ ಚಿಲ್ಲಡ್ ಸಾಶ್ಮಿ ಸಲಾಡ್, ಟೊಬಾಸ್ಕೊ ಪೆಪ್ಪರ್ ಚಿಕನ್, ಲೆಮನ್ ವಸಾಬಿ ಪ್ರಾನ್ಸ್, ಟೆಂಪೂರಾ ಪ್ರಾನ್ ವಸಾಬಿ, ಟೊಬಾಸ್ಕೊ ಟೋಫು, ಟೊಬ್ಯಾಸ್ಕೊ ಫಿಶ್, ವಿವಿಧ ಬಗೆಯ ನ್ಯೂಡಲ್ಸ್, ಸೂಪ್, ಕರ್ರಿ, ಲಾ ಜೀ ಜೀ ಚಿಕನ್, ಸ್ಪಿನಚ್ ಟೆಂಪೂರಾ, ಜಾಲಪೀನಿಯೋ ಪ್ರಾನ್, ಮಿಸೊಯಾಕಿ ಫಿಶ್ ಹೀಗೆ ಚೈನಾ, ಜಪಾನ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲಾಗುತ್ತದೆ. ಬೆಲೆ ಸಹ ತೀರ ಹೆಚ್ಚಲ್ಲವಾದರೂ 400-500 ಕ್ಕೆ ಕಡಿಮೆ ಇಲ್ಲದಂತಿವೆ.

    ಉದ್ಯಮ ಬೆಳೆಸುವ ಯೋಜನೆಯಲ್ಲಿ ನಾಗ ಚೈತನ್ಯ

    ಉದ್ಯಮ ಬೆಳೆಸುವ ಯೋಜನೆಯಲ್ಲಿ ನಾಗ ಚೈತನ್ಯ

    ಶೋಯು ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗ ಚೈತನ್ಯ, ಸಣ್ಣ ವಯಸ್ಸಿನಿಂದಲೂ ಆಹಾರದ ಬಗ್ಗೆ ಆಸಕ್ತಿ ಇತ್ತು. ಕೆಲಸದ ಮೇಲೆ ವಿವಿಧ ಕಡೆಗಳಲ್ಲಿ ಓಡಾಡಿ ಅಲ್ಲಿನ ಆಹಾರ ಸವಿದಾಗ ಇದನ್ನು ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ನಮ್ಮವರಿಗೆ ನೀಡಬೇಕು ಎನಿಸಿ ಇದನ್ನು ಆರಂಭ ಮಾಡಿದೆ. ಇಲ್ಲಿ ನಾವು ರುಚಿಯ ಜೊತೆಗೆ ಪ್ಯಾಕೆಜಿಂಗ್‌ಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಇತರ ಪ್ಯಾಕೇಜಿಂಗ್‌ಗಳಲ್ಲಿ ಆಹಾರ ಬಂದರೆ ಅದನ್ನು ಇನ್ನೊಂದು ಬೌಲ್‌ನಲ್ಲೊ ತಟ್ಟೆಯಲ್ಲೋ ಹಾಕಿಕೊಂಡು ತಿನ್ನಬೇಕು ಆದರೆ ನಮ್ಮ ಪ್ಯಾಕೆಜಿಂಗ್ ಹಾಗಿಲ್ಲ, ಬಹಳ ಗುಣಮಟ್ಟದ ಪ್ಯಾಕೇಜಿಂಗ್ ಆಗಿದ್ದು, ಇದರಲ್ಲಿಯೇ ನಾವು ನೀಡಿದ ಆಹಾರ ತಿಂದು ಪ್ಯಾಕೇಜ್ ಬಿಸಾಡಬಹುದು ಎಂದಿದ್ದಾರೆ.

    ಎರಡು ಸಿನಿಮಾಗಳು ಕೈಯಲ್ಲಿವೆ

    ಎರಡು ಸಿನಿಮಾಗಳು ಕೈಯಲ್ಲಿವೆ

    ಶೋಯು ಕ್ಲೌಡ್ ಕಿಚನ್ ಅನ್ನು ಇನ್ನೂ ಹಲವು ನಗರಗಳಿಗೆ, ವಿಮಾನ ನಿಲ್ದಾಣ ಹಾಗೂ ಶಾಪಿಂಗ್ ಮಾಲ್‌ಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದು ನಾಗ ಚೈತನ್ಯ ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ಅವರು ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆಯೂ ಮಾತನಾಡಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿರುವ ವೆಬ್ ಸರಣಿ ಒಂದರಲ್ಲಿ ನಟಿಸಿರುವುದಾಗಿ ನಾಗ ಚೈತನ್ಯ ಹೇಳಿದ್ದಾರೆ. ಅದೊಂದು ಹಾರರ್ ಸರಣಿ ಆಗಿರಲಿದೆ. ಜೊತೆಗೆ ವೆಂಕಟ್ ಪ್ರಭು ನಿರ್ದೇಶನದ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು ಆ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆಯಂತೆ. ಆ ಸಿನಿಮಾದ ಚಿತ್ರೀಕರಣ ಆಗಸ್ಟ್‌ ಅಂತ್ಯದಿಂದ ಪ್ರಾರಂಭವಾಗಲಿದೆ.

    English summary
    Telugu actor Naga Chaitanya started a cloud Kitchen named Shoyu. He serving pan Asian food through Shoyu.
    Tuesday, August 2, 2022, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X