For Quick Alerts
  ALLOW NOTIFICATIONS  
  For Daily Alerts

  ಸಂಪೂರ್ಣ ಗುಣಮುಖವಾಗಿ ಮನೆಗೆ ಮರಳಿದ ಸಾಯಿ ಧರಂ ತೇಜ್!

  |

  ಟಾಲಿವುಡ್ ಮೆಗಾ ಕುಟುಂಬಕ್ಕೆ ಈ ಬಾರಿಯ ದೀಪಾವಳಿ ತುಂಬಾನೆ ವಿಶೇಷ. ಇದುವೇ ನಿಜವಾದ ಹಬ್ಬ ಎಂದು ಇಡೀ ಕುಟುಂಬ ಸಂಭ್ರಮ ಪಡುತ್ತಿದೆ. ಮೆಗಾ ಕುಟುಂಬದ ಹೀರೋಗಳೆಲ್ಲಾ ಒಂದೇ ಪ್ರೇಮ್‌ನಲ್ಲಿ ನಿಂತು ಪೋಸ್‌ ಕೊಟ್ಟಿದ್ದಾರೆ. ಇವರ ಈ ಖುಷಿಗೆ ಕಾರಣವಾಗಿರೋದು ಸಾಯಿ ಧರಂ ತೇಜ್‌. ಸಾಯಿ ಅವರಿಂದ ಇವತ್ತು ಇಡೀ ಕುಟುಂಬ ಸಂಭ್ರಮದಲ್ಲಿದೆ. ಯಾಕೆಂದರೆ ಸಾಯಿ ಧರಂ ತೇಜ್‌ ಮನೆಗೆ ಮರಳಿದ್ದಾರೆ. ಬೈಕ್ ಆಕ್ಸಿಡೆಂಟ್‌ಗೆ ಒಳಗಾಗಿದ್ದ ಸಾಯಿ ಧರಂ ತೇಜ್‌ ಸದ್ಯ ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

  ಇದು ನಮ್ಮ ಪಾಲಿನ ನಿಜವಾದ ಹಬ್ಬ ಎಂದು ಇಡೀ ಕುಟುಂಬ ಸಂಭ್ರಮಿಸುತ್ತಿದೆ. ಇನ್ನೂ ಒಂದೇ ಫ್ರೇಮಿನಲ್ಲಿ ನಟ ಚಿರಂಜೀವಿ, ಪವನ್‌ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರಂ ತೇಜ್, ವರುಣ್ ತೇಜ್, ವೈಷ್ಣವ್ ತೇಜ್‌, ಅಕಿರ, ನಾಗಬಾಬು ಕಾಣಿಸಿಕೊಂಡಿದ್ದಾರೆ. ಎಲ್ಲರೂ ಇರುವ ಫೊಟೋವನ್ನ ನಟ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಯಿ ಧರಂ ತೇಜ್‌ ಮನೆಗೆ ಬಂದ ಬಳಿಕ ಇಡೀ ಕುಟುಂಬದೊಂದಿಗಿನ ಮೊದಲ ಫೋಟೊವನ್ನು ಮೆಗಾಸ್ಟಾರ್ ಚಿರಂಜೀವಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ನಿಮ್ಮೆಲ್ಲರ ಹಾರೈಕೆಯಿಂದ ಸಾಯಿ ಧರಂ ತೇಜ್ ಸಂಪೂರ್ಣವಾಗಿ ಗುಣಮುಖವಾಗಿದ್ದಾನೆ. ಇದುವೇ ನಮ್ಮ ಕುಟುಂಬದ ನಿಜವಾದ ಹಬ್ಬ' ಎಂದು ಟ್ವಿಟ್ಟರ್‌ನಲ್ಲಿ ಚಿರಂಜೀವಿ ಬರೆದುಕೊಂಡಿದ್ದಾರೆ.

  ಈ ಬಗ್ಗೆ ನಟ ರಾಮ್‌ ಚರಣ್ ಕೂಡ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. "ನಿಮ್ಮೆಲ್ಲರ ಆಶೀರ್ವಾದದ ಪ್ರತಿಫಲ ಸಾಯಿ ಧರಂ ತೇಜ್‌ ಸಂಪೂರ್ಣವಾಗಿ ಗುಣಮುಖವಾಗಿದ್ದಾನೆ. ನಮ್ಮ ಕುಟುಂಬ ಸದಸ್ಯರ ಪಾಲಿಗೆ ಇದುವೇ ನಿಜವಾದ ಹಬ್ಬ'. ಎಂದು ಫೊಟೋ ಹಂಚಿಕೊಳ್ಳುವ ಮೂಲಕ ಟ್ವಿಟ್‌ ಮಾಡಿದ್ದಾರೆ.

  ಗುಣಮುಖವಾದ ಬಳಿಕ ಸಾಯಿ ಧರಂ ತೇಜ ಕೂಡ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. "ನನ್ನ ಪುನರ್ಜನ್ಮಕ್ಕೆ ಕಾರಣವಾದ ನಿಮ್ಮ ಪ್ರೀತಿಗಾಗಿ ನಿಮ್ಮ ಪ್ರಾರ್ಥನೆಗಾಗಿ ನಾನು ನಿಮಗೆ ಋಣಿಯಾಗಿದ್ದೇನೆ. ನಿಮ್ಮ ಪ್ರೀತಿಯನ್ನು ಪಡೆಯುವುದು ನನ್ನ ಪೂರ್ವ ಜನ್ಮನ ಪುಣ್ಯ' ಎಂದು ಭಾವುಕ ನುಡಿಗಳನ್ನ ಸಾಯಿ ಧರಂ ತೇಜ್‌ ಬರೆದುಕೊಂಡಿದ್ದಾರೆ.

  ಸಾಯಿ ಧರಂ ತೇಜ್ ಚಿರಂಜೀವಿ ಸಹೋದರಿ ವಿಜಯದುರ್ಗಾ ಅವರ ಪುತ್ರ. ರಸ್ತೆ ಅಪಘಾತದಿಂದ ತೆಗುಗು ನಟ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗಿತ್ತು. ವೇಗವಾಗಿ ಬೈಕ್ ಚಲಿಸುತ್ತಿದ್ದ ಕಾರಣ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿತ್ತು. ಸಾಯಿ ಧರಂ ತೇಜ್ ಅವರು ಹೆಲ್ಮೆಟ್ ಧರಿಸಿದ್ದರು. ಹಾಗಾಗಿ ಹೆಚ್ಚಿನ ಅಪಾಯ ಆಗಿಲ್ಲ. ಜುಬಿಲಿ ಹಿಲ್ಸ್‌ ಅಪೋಲೊ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಸಾಯಿ ಧರಂ ತೇಜ್ ಅವರನ್ನು ಇರಿಸಲಾಗಿತ್ತು. ಆಗ ಇಡೀ ಕುಟುಂಬ ಕಂಗಾಲಾಗಿತ್ತು. ಎಲ್ಲರೂ ಆಸ್ಪತ್ರೆಗೆ ಭೇಟಿ ನೀಡಿ ಸಾಯಿ ಧರಂ ತೇಜ್‌ ಆರೋಗ್ಯವನ್ನು ವಿಚಾರಿಸಿದ್ದರು. ಅಪಘಾತದ ಬಳಿಕ ಸಾಯಿ ಆರೋಗ್ಯ ಸ್ಥಿತಿ ಗಂಭೀರ ಆಗಿದ್ದ ಕಾರಣ ಇಡೀ ಕುಟುಂಬದ ಜೊತೆಗೆ, ಅಭಿಮಾನಿಗಳವೂ ಸಾಯಿಗಾಗಿ ಪ್ರಾರ್ಥನೆ ಮಾಡಿತ್ತು. ಸದ್ಯ ಸಾಯಿ ಧರಂ ತೇಜ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

  ತಿಂಗಳ ಬಳಿಕ ಸಾಯಿ ಧರಂ ತೇಜ್‌ ಹುಷಾರಾಗಿ ಮನೆಗೆ ಬಂದಿದ್ದಾರೆ. ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನ ಆಚರಿಸಿದ್ದಾರೆ. ತೆಲುಗು ಚಿತ್ರರಂಗದ ದೊಡ್ಡ ಮನೆ ಹುಡುಗ ಮನೆಗೆ ಬಂದಿರೋ ಕಾರಣ ಇಡೀ ಕುಟುಂಬ ಸಂತಸದಲ್ಲಿ ಇದೆ. ಇದೇ ಖುಷಿಯನ್ನ ಕುಟುಂಬ ಎಲ್ಲರೊಂದಿಗೂ ಹಂಚಿಕೊಂಡಿದೆ. ಇನ್ನೂ ನಟ ಸಾಯಿ ಧರಂ ತೇಜ್‌ 2014ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸಾಯಿ ಅಭಿನಯದ ರಿಪಬ್ಲಿಕ್‌ ಸಿನಿಮಾ ಸಿನಿಮಾ ತೆರೆಗೆ ಬಂದಿದೆ. ಇನ್ನೂ ಮುಂದೆ ಸಾಯಿ ಯಾವ ಸಿನಿಮಾದಲ್ಲಿ ಕಾಣಿಸಿ ಕೊಳ್ಳುತ್ತಾರೆ ಅನ್ನೋ ಕುತೂಹಲವೂ ಇದೆ.

  English summary
  Actor Sai Dharam Tej Is Back To Home, Real Festival For Family,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X