For Quick Alerts
  ALLOW NOTIFICATIONS  
  For Daily Alerts

  ಅಂಧಾಧುನ್ ತೆಲುಗು ಟೈಟಲ್ ಪ್ರಕಟಣೆ: ಜೂನ್ 11ಕ್ಕೆ ಸಿನಿಮಾ ಬಿಡುಗಡೆ

  |

  ಬಾಲಿವುಡ್ ಸೂಪರ್ ಹಿಟ್ ಚಿತ್ರ ಅಂಧಾಧುನ್ ತೆಲುಗಿನಲ್ಲಿ ತಯಾರಾಗುತ್ತಿರುವುದು ತಿಳಿದಿದೆ. ನಿತೀನ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತಡೇ ಸಂಭ್ರಮದಲ್ಲಿರುವ ನಿತೀನ್‌ಗೆ ಅಂಧಾಧುನ್ ತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ.

  ಅಂಧಾಧುನ್ ತೆಲುಗು ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ 'ಮಾಸ್ಟ್ರೊ' ಎಂದು ಹೆಸರಿಡಲಾಗಿದೆ. ಜೂನ್ 11ಕ್ಕೆ ಸಿನಿಮಾ ತೆರೆಕಾಣಲಿದೆ.

  ಅಂಧಾದುನ್ ತಮಿಳು ರೀಮೇಕ್‌ಗೆ ಎಂಟ್ರಿಯಾದ ಪ್ರಿಯಾ ಆನಂದ್ಅಂಧಾದುನ್ ತಮಿಳು ರೀಮೇಕ್‌ಗೆ ಎಂಟ್ರಿಯಾದ ಪ್ರಿಯಾ ಆನಂದ್

  ನಿತೀನ್ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಣ್ಣಿಗೆ ಕನ್ನಡಕ ಹಾಕಿ ಕುರುಡು ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಆಯುಷ್ಮಾನ್ ಖುರಾನ ನಟಿಸಿದ್ದ ಪಾತ್ರದಲ್ಲಿ ನಿತೀನ್ ಅಭಿನಯಿಸುತ್ತಿದ್ದಾರೆ.

  ತೆಲುಗಿನಲ್ಲಿ ನಿತೀನ್ ಜೊತೆ ನಭಾ ನಟೇಶ್ ಮತ್ತು ತಮನ್ನಾ ಭಾಟಿಯಾ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಹಿಂದಿಯಲ್ಲಿ ಟಬು ಮಾಡಿದ್ದ ಪಾತ್ರದಲ್ಲಿ ತಮನ್ನಾ ಹಾಗೂ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ನಭಾ ನಟೇಶ್ ಅಭಿನಯಿಸುತ್ತಿದ್ದಾರೆ.

  ಮೆರ್ಲಪಾಕ ಗಾಂಧಿ ಈ ಚಿತ್ರ ನಿರ್ದೇಶಿಸುತ್ತಿದ್ದು, ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ದುಬೈನಲ್ಲಿ ಕಳೆದ ವರ್ಷ ತೆಲುಗು ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಪ್ರಸ್ತುತ, ಹೈದರಾಬಾದ್‌ನಲ್ಲಿ ಸಿನಿಮಾ ಕೆಲಸ ಪ್ರಗತಿಯಲ್ಲಿದೆ.

  ತಮಿಳಿನಲ್ಲೂ ಅಂಧಾಧುನ್ ರಿಮೇಕ್ ಆಗುತ್ತಿದ್ದು, ಪ್ರಶಾಂತ್ ಮತ್ತು ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟಿ ಸಿಮ್ರಾನ್ ಸಹ ತಾರಬಳಗದಲ್ಲಿದ್ದಾರೆ. ತಮಿಳಿನಲ್ಲಿ ಚಿತ್ರಕ್ಕೆ ಅಂಧಗನ್ ಎಂದು ಹೆಸರಿಡಲಾಗಿದೆ.

  ಗೋವಾದಲ್ಲಿ ಸೊನಾಲ್ ಜೊತೆ ಡಾರ್ಲಿಂಗ್ ಕೃಷ್ಣ ಫುಲ್ ಬ್ಯುಸಿ | Filmibeat Kannada

  ಅಂದ್ಹಾಗೆ, 2018ರಲ್ಲಿ ತೆರೆಕಂಡಿದ್ದ 'ಅಂಧಾಧುನ್' ಚಿತ್ರವನ್ನು ಹಿಂದಿಯಲ್ಲಿ ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದರು. 2019ನೇ ಸಾಲಿನಲ್ಲಿ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದುಕೊಂಡಿತ್ತು.

  English summary
  Actor Nithin starrer Andhadhun Telugu remake titled Maestro. first look released on Nithin's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X