For Quick Alerts
  ALLOW NOTIFICATIONS  
  For Daily Alerts

  ರಾಮ-ಹನುಮನ ಈ ಮನಮೋಹಕ ಚಿತ್ರ ಬರೆದಿರುವುದು ಖ್ಯಾತ ಹಾಸ್ಯನಟ

  |

  ಶ್ರೀರಾಮನು ಆಂಜನೇಯನನ್ನು ಎದೆಗೆ ಅಪ್ಪಿಕೊಂಡಿರುವ ಈ ಮನನೋಹಕ ಚಿತ್ರವನ್ನು ಖ್ಯಾತ ಹಾಸ್ಯನಟರೊಬ್ಬರು ರಚಿಸಿದ್ದಾರೆ.

  KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

  ಆಗಸ್ಟ್ 5 ರಂದು ಅತ್ತ ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ನಿರ್ಮಿಸಲು ಶಿಲಾನ್ಯಾಸ ಪೂಜೆ ನೆರವೇರುತ್ತಿದ್ದರೆ, ಇತ್ತ ಈ ಹಾಸ್ಯಬ್ರಹ್ಮ ಮನೆಯಲ್ಲಿ ಕೂತು ರಾಮನನ್ನು ಮನಸಲ್ಲೇ ಕಲ್ಪಿಸಿಕೊಳ್ಳುತ್ತಾ, ಆತನ ಸ್ನೇಹ, ಪ್ರಸನ್ನ ಭಾವವನ್ನು ಮುಂದು ಮಾಡಿ ಈ ಸುಂದರ ಚಿತ್ರವನ್ನು ಬಿಡಿಸಿದ್ದಾರೆ.

  ಸಾವಿರಾರು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ತನ್ನ ಹೆಸರಿಗೆ ಮಾಡಿಕೊಂಡಿರುವ ಹಾಸ್ಯಬ್ರಹ್ಮ ಖ್ಯಾತಿಯ ತೆಲುಗಿನ ಹಾಸ್ಯನಟ ಬ್ರಹ್ಮಾನಂದಂ ಬರೆದಿರುವ ಸುಂದರ ಚಿತ್ರವಿದು. ಈ ಚಿತ್ರ ಇದೀಗ ಭಾರಿ ವೈರಲ್ ಆಗಿದೆ.

  ಹಾಸ್ಯಬ್ರಹ್ಮ ಬರೆದಿರುವ ಚಿತ್ರವಿದು

  ಹಾಸ್ಯಬ್ರಹ್ಮ ಬರೆದಿರುವ ಚಿತ್ರವಿದು

  ಈ ಚಿತ್ರವನ್ನು ಹಾಸ್ಯನಟ ಬ್ರಹ್ಮಾನಂದಂ ಬರೆದಿರುವುದು ಎನ್ನಲಾಗುತ್ತಿದ್ದು. ಬ್ರಹ್ಮಾನಂದಂ ತದೇಕಚಿತ್ರದಿಂದ ಈ ಚಿತ್ರ ಬರೆಯುತ್ತಿರುವ ಮತ್ತೊಂದು ಚಿತ್ರ ಸಹ ಇದೇ ಚಿತ್ರದೊಂದಿಗೆ ವೈರಲ್ ಆಗಿದೆ.

  ಬ್ರಹ್ಮಾನಂದಂ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ

  ಬ್ರಹ್ಮಾನಂದಂ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ

  ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯದ ಶಿಲಾನ್ಯಾಸ ಪೂಜೆ ನೆರವೇರಿದ ಬೆನ್ನಲ್ಲೇ ಈ ಸುಂದರ ಚಿತ್ರ ವೈರಲ್ ಆಗಿದೆ. ಚಿತ್ರ ಬರೆದಿರುವ ಬ್ರಹ್ಮಾನಂದಂ ಅವರ ಪ್ರತಿಭೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

  ಕಾಲೇಜು ಫ್ರೊಫೆಸ್ಸರ್ ಆಗಿದ್ದ ಬ್ರಹ್ಮಾನಂದಂ

  ಕಾಲೇಜು ಫ್ರೊಫೆಸ್ಸರ್ ಆಗಿದ್ದ ಬ್ರಹ್ಮಾನಂದಂ

  ಬ್ರಹ್ಮಾನಂದಂ ಹಾಸ್ಯನಟರಾಗಿ ಬಹುದೊಡ್ಡ ಹೆಸರು ಮಾಡಿದವರು. ಸಿನಿಮಾಗಳಲ್ಲಿ ವ್ಯಂಗ್ಯಕ್ಕೊಳಗಾಗುವ, ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವ ಬ್ರಹ್ಮಾನಂದಂ ನಿಜ ಜೀವನದಲ್ಲಿ ಬಹಳ ಬುದ್ಧಿವಂತರು. ಕಾಲೇಜಿನ ಫ್ರೊಫೆಸ್ಸರ್ ಆಗಿದ್ದ ಬ್ರಹ್ಮಾನಂದಂ ಪುಸ್ತಕ ಓದುವ ವಿಪರೀತ ಹವ್ಯಾಸವುಳ್ಳವರು.

  ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ

  ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ

  1986 ರಲ್ಲಿ ಮೊದಲ ಸಿನಿಮಾದಲ್ಲಿ ಅಭಿನಯಿಸಿದ ಬ್ರಹ್ಮಾನಂದಂ ಅಂದಿನಿಂದ ಇಂದಿನ ವರೆಗೂ ಜನಪ್ರಿಯತೆ ಕುಗ್ಗಿಸಿಕೊಂಡಿಲ್ಲ. ವರ್ಷಗಳ ಕಳೆದಂತೆ ಅವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಸಾಗುತ್ತಿದೆ. 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವರದ್ದು ಗಿನ್ನೆಸ್ ದಾಖಲೆ. ಕನ್ನಡದ ನಿನ್ನಿಂದಲೇ ಸಿನಿಮಾದಲ್ಲಿ ನಟಿಸಿದ್ದಾರೆ ಅವರು.

  English summary
  Brahmanandam's drawing of Sri Ram and Hanuman got viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X