For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾಕ್ಕೆ ಅದ್ಧೂರಿ ಪ್ರಿ ರಿಲೀಸ್ ಇವೆಂಟ್: ಬೆದರಿಕೆ ನಡುವೆಯೂ ಬರ್ತಾರಾ ಸಲ್ಮಾನ್

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬಂದಿದೆ. ಸಿನಿಮಾದ ಪ್ರಚಾರಕ್ಕಾಗಿ ಭರ್ಜರಿ ಪ್ರೀ ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಆಯೋಜಿಸಿದೆ.

  ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾ ಅಕ್ಟೋಬರ್ 05 ರಂದು ತೆರೆಗೆ ಬರಲಿದ್ದು, ಸೆಪ್ಟೆಂಬರ್ 28 ರಂದು ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಆಂಧ್ರದ ಅನಂತಪುರದಲ್ಲಿ ಚಿತ್ರತಂಡ ಹಮ್ಮಿಕೊಂಡಿದೆ.

  ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ. ಸೆಪ್ಟೆಂಬರ್ 28 ರಂದು ಅನಂತಪುರದಲ್ಲಿ ಸಂಜೆ ಆರು ಗಂಟೆಗೆ ಭರ್ಜರಿ ಇವೆಂಟ್ ನಡೆಯಲಿದೆ.

  ಇವೆಂಟ್‌ನಲ್ಲಿ ಅತಿಥಿಯಾಗಿ ಯಾರು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದು, ಸಲ್ಮಾನ್ ಖಾನ್ ಅತಿಥಿಯಾಗಿ ಇವೆಂಟ್‌ಗೆ ಆಗಮಿಸುತ್ತಾರಾ ಎಂಬ ಕುತೂಹಲ ಇದೆ.

  ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇರುವ ಕಾರಣ ಅವರು ಇತ್ತೀಚೆಗೆ ಹೆಚ್ಚು ಬಹಿರಂಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಜೀವ ಬೆದರಿಕೆ ಬಂದ ಬಳಿಕ ಅವರು ಅತಿಥಿಯಾಗಿ ಆಗಮಸಿದ ಏಕೈಕ ಸಿನಿಮಾ ಕಾರ್ಯಕ್ರಮವೆಂದರೆ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ್ದು.

  ಈಗ 'ಗಾಡ್ ಫಾದರ್‌' ಸಿನಿಮಾಕ್ಕಾಗಿ ಭಾರಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾವಿರಾರು ಗಟ್ಟಲೆ ಜನ ಕಾರ್ಯಕ್ರಮಕ್ಕೆ ಆಗಮಿಸುವ ಕಾರಣ ಸಲ್ಮಾನ್ ಖಾನ್‌ ಕಾರ್ಯಕ್ರಮಕ್ಕೆ ಆಗಮಿಸುತ್ತಾರೊ ಇಲ್ಲವೊ ಎಂಬ ಅನುಮಾನವಿದೆ.

  ಚಿರಂಜೀವಿ ನಟನೆಯ ಕೊನೆಯ ಸಿನಿಮಾ 'ಆಚಾರ್ಯ' ದೊಡ್ಡ ಫ್ಲಾಪ್ ಆಗಿತ್ತು. ಹಾಗಾಗಿ ಈ ಸಿನಿಮಾವನ್ನು ಹಿಟ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರೆ ಚಿರಂಜೀವಿ. ಹಾಗಾಗಿ ಭಾರಿ ದೊಡ್ಡ ಮಟ್ಟದ ಇವೆಂಟ್ ಅನ್ನು ಚಿರಂಜೀವಿ ಆಯೋಜಿಸಿದ್ದಾರೆ. ರಾಜಕಾರಣಿಗಳು ಸಹ ಇವೆಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  'ಗಾಡ್ ಫಾದರ್' ಸಿನಿಮಾವು ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಮೂಲ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದರು.

  English summary
  Megastar Chiranjeevi starrer God Father movie grand pre release event will happen in Ananthpuram on September 28.
  Monday, September 26, 2022, 0:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X