Just In
Don't Miss!
- Automobiles
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- Sports
ಐಪಿಎಲ್ 2021: ಬೆನ್ ಸ್ಟೋಕ್ಸ್ ಸ್ಥಾನವನ್ನು ತುಂಬಬಲ್ಲ ಐವರು ಆಟಗಾರರು
- News
ಯುಗಾದಿಗೆ ವರ್ಷಧಾರೆ ಸಿಂಚನ: ಮೈಸೂರು-ಕೊಡಗು ಜನರಲ್ಲಿ ಸಂತಸ
- Finance
ಇನ್ಫೋಸಿಸ್ 4ನೇ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭ ಕುಸಿತ
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಚಿತ್ರ ವಿಶ್
ತೆಲುಗು ಚಿತ್ರರಂಗದ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿಗಳಿಸಿರುವ ರಾಮ್ ಗೋಪಲ್ ವರ್ಮಾ ಅವರಿಗೆ ಇಂದು ಜನ್ಮದಿನ. 59ನೇ ವಸಂತಕ್ಕೆ ಕಾಲಿಟ್ಟಿರುವ ವರ್ಮಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದಬರುತ್ತಿವೆ. ಆದರೆ ಹುಟ್ಟುಹಬ್ಬದ ಆಚರಣೆ, ಶುಭಕೋರುವವರನ್ನು ಕಂಡರೆ ರಾಮ್ ಗೋಪಾಲ್ ವರ್ಮಾ ಅವರಿಗೆ ಆಗಲ್ಲ.
ಎಲ್ಲರೂ ಅದ್ದೂರಿಯಾಗಿ, ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ. ಎಲ್ಲರೂ ವಿಶ್ ಮಾಡಬೇಕು, ಎಲ್ಲರಿಗಿಂತ ಗ್ರ್ಯಾಂಡ್ ಆಗಿ ಇರಬೇಕೆಂದು ಬಯಸುತ್ತಾರೆ. ಆದರೆ ಆರ್ ಜಿ ವಿ ಹಾಗಲ್ಲ. ಹುಟ್ಟುಹಬ್ಬ ಆಚರಣೆ ಅಂದರೆ ವಿವಾದಾತ್ಮಕ ನಿರ್ದೇಶಕರಿಗೆ ಅಲರ್ಜಿ. ಯಾರಾದರೂ ವಿಶ್ ಮಾಡಿದ್ರೆ ಉರಿದು ಬೀಳುತ್ತಾರೆ.
ತಲೈವಿ ಟ್ರೈಲರ್ ನೋಡಿ ಕಂಗನಾಗೆ 'ಬಹುಪರಾಕ್' ಎಂದ ರಾಮ್ ಗೋಪಾಲ್ ವರ್ಮಾ
ಹಾಗಾಗಿ ವಿಚಿತ್ರ ನಿರ್ದೇಶಕರಿಗೆ ಅಭಿಮಾನಿಗಳು ವಿಚಿತ್ರವಾಗಿಯೇ ವಿಶ್ ಮಾಡುತ್ತಿದ್ದಾರೆ. ಎಲ್ಲರಿಗೂ ಹ್ಯಾಪಿ ಬರ್ತಡೇ ಅಂತ ವಿಶ್ ಮಾಡಿದ್ರೆ, ಆರ್ ಜಿ ವಿಗೆ ಮಾತ್ರ 'ಅನ್ ಹ್ಯಾಪಿ ಬರ್ತಡೇ' ಅಂತ ನೆಟ್ಟಿಗರು ಶುಭ ಕೋರುತ್ತಿದ್ದಾರೆ. ಅಂದಹಾಗೆ ವರ್ಮಾ ಮೇಲಿನ ಸಿಟ್ಟಿನಿಂದ ಅಥವ ಬೇರೆ ಸ್ಟಾರ್ ನಟರ ಅಭಿಮಾನಿಗಳು ಹೀಗೆ ಮಾಡುತ್ತಿದ್ದಾರೆ ಅಂತ ಯೋಚಿಸಬೇಡಿ. ಆರ್ ಜಿ ವಿಯನ್ನು ತುಂಬಾ ಇಷ್ಟ ಪಡುವ ಅಭಿಮಾನಿಗಳೇ ಹೀಗೆ ವಿಶ್ ಮಾಡುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ #unhappybirthdayrgv ಎಂದು ಹ್ಯಾಷ್ ಟ್ಯಾಗ್ ಹಾಕಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅಷ್ಟಕ್ಕೂ ಹೀಗೆ ವಿಶ್ ಮಾಡುವುದರ ಹಿಂದೆ ಒಂದು ಕಾರಣವಿದೆ. ಈ ಹಿಂದೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭಕೋರಿದಾಗ ರೊಚ್ಚಿಗೆದಿದ್ದರು. 'ನಾನು ಮಾಡಿರುವ ಪಾಪಗಳಿಗೆ ಎಂದೋ ಸತ್ತು ಹೋಗಿದ್ದೇನೆ. ನಾನು ಮತ್ತೊಮ್ಮೆ ಹುಟ್ಟಿ ಬರುತ್ತೇನೆ ಅನ್ನುವ ನಂಬಿಕೆ ಕೂಡ ನನಗಿಲ್ಲ. ಹೀಗಾಗಿ ನನ್ನ ಬರ್ತಡೇಗೆ ವಿಶ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು.
'ನನ್ನ ಸೋ ಕಾಲ್ಡ್ ಹ್ಯಾಪಿ ಬರ್ತಡೇ ಇವತ್ತು ಅನ್ ಹ್ಯಾಪಿ ಬರ್ತಡೇ ಆಗಿದೆ' ಎಂದಿದ್ದರು. ಹಾಗಾಗಿ ಅಭಿಮಾನಿಗಳು ಅನ್ ಹ್ಯಾಪಿ ಬರ್ತಡೇ ಅಂತನೇ ವಿಶ್ ಮಾಡುತ್ತಿದ್ದಾರೆ. ಮೂರು ದಶಕಗಳ ವೃತ್ತಿ ಜೀವನದಲ್ಲಿ ವರ್ಮಾ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ಅಷ್ಟೆ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಏನೆ ಮಾಡಿದ್ರು ವರ್ಮಾ ಅವರನ್ನು ಇಷ್ಟ ಪಡುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ರಾಮ್ ಗೋಪಾಲ್ ವರ್ಮಾ ಕಾಮನ್ ಡಿಪಿ ಬಿಡುಗಡೆ ಮಾಡಿ ಅನ್ ಹ್ಯಾಪಿ ಬರ್ತಡೇ ಎಂದು ಶುಭಕೋರುತ್ತಿದ್ದಾರೆ. 1989ರಲ್ಲಿ ಸಿವ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ತೆಲುಗು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ ವರ್ಮಾ ಬಳಿಕ ತಮಿಳು, ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮೂಲಕ ವರ್ಮಾ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಆರ್ ಜಿ ವಿ ಕಡಿಮೆ ಅವಧಿಯಲ್ಲಿ ಸಿನಿಮಾಗಳನ್ನು ಮಾಡಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.