For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಮಗಳ ಮಾನವೀಯತೆಗೆ ಈ ಘಟನೆ ಉದಾಹರಣೆ

  |

  ನಟ, ರಾಜಕಾರಣಿ ಪವನ್ ಕಲ್ಯಾಣ್ ದಕ್ಷಿಣ ಭಾರತದ ಖ್ಯಾತ ನಟ. ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಅವರು ಪ್ರಸ್ತುತ ರಾಜಕೀಯದಲ್ಲಿ ಅದೃಷ್ಟ ಹುಡುಕುತ್ತಿದ್ದಾರೆ.

  ಹೊಸ ಟ್ಯಾಲೆಂಟ್ ಗೆ ಅಪ್ಪು ಅಣ್ಣ ಅವಕಾಶ ಕೊಡ್ತಾರೆ | Law | Ragini | Filmibeat Kannada

  ಪವನ್ ಕಲ್ಯಾಣ್ ಸಿನಿಮಾಗಳ ಬಗ್ಗೆ ಸಾಕಷ್ಟು ವಿಷಯ ಗೊತ್ತು, ಆದರೆ ಅವರ ವೈಯಕ್ತಿಕ ಜೀವನ ಸಹ ತುಸು ರೋಚಕವೇ. ಮೂರು ಬಾರಿ ಮದುವೆ ಆಗಿರುವ ಪವನ್ ಕಲ್ಯಾಣ್‌ ಗೆ ನಾಲ್ವರು ಮಕ್ಕಳಿದ್ದಾರೆ.

  ಎರಡನೇ ಹೆಂಡತಿ ರೇಣು ದೇಸಾಯಿ ಜೊತೆಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳು ಹೊಂದಿದ್ದಾರೆ. ಪ್ರಸ್ತುತ ಇರುವ ರಶ್ಯನ್ ಹೆಂಡತಿ ಅನ್ನಾ ಲೆಜ್ನೇವಾ ಜೊತೆಗೂ ಎರಡು ಮಕ್ಕಳನ್ನು ಹೊಂದಿದ್ದಾರೆ ಪವನ್ ಕಲ್ಯಾಣ್.

  ರೇಣು ದೇಸಾಯಿ ಪವನ್ ಕಲ್ಯಾಣ್ ಅವರ ಮಗಳಾದ ಆದ್ಯಾ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಆಕೆಯ ಮಾನವೀಯತೆ ನೆಟ್ಟಿಗರ ಹೃದಯ ಗೆದ್ದಿದೆ.

  ಎರಡು ಬೆಕ್ಕು ದತ್ತು ಪಡೆದ ಆದ್ಯಾ

  ಎರಡು ಬೆಕ್ಕು ದತ್ತು ಪಡೆದ ಆದ್ಯಾ

  ಪವನ್ ಕಲ್ಯಾಣ್-ರೇಣುದೇಸಾಯಿ ಪುತ್ರಿ ಆದ್ಯಾ ಎರಡು ಬೆಕ್ಕುಗಳನ್ನು ದತ್ತು ಪಡೆದಿದ್ದಾಳೆ. ಎಂಟು ವರ್ಷದ ಈ ಪೋರಿ ಬೆಕ್ಕುಗಳನ್ನು ಇಷ್ಟಪಡುವುದು ತೀರ ಸುದ್ದಿಯಾಗುವಂಥಹಾ ಸುದ್ದಿಯಲ್ಲ. ಆದರೆ ಅದರಲ್ಲಿ ಒಂದು ವಿಶೇಷವಿದೆ.

  ಕಾಲುಗಳಿಲ್ಲದ ಬೆಕ್ಕುಗಳನ್ನು ಸಾಕುತ್ತಿದ್ದಾರೆ

  ಕಾಲುಗಳಿಲ್ಲದ ಬೆಕ್ಕುಗಳನ್ನು ಸಾಕುತ್ತಿದ್ದಾರೆ

  ಆದ್ಯಾ ದತ್ತು ಪಡೆದಿರುವ ಎರಡು ಬೆಕ್ಕುಗಳಿಗೆ ಎರಡು ಕಾಲುಗಳಿಲ್ಲ. ಎರಡೂ ಬೆಕ್ಕುಗಳು ಸಹ ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡಿವೆ. ಅಂಥಹಾ ಬೆಕ್ಕುಗಳನ್ನು ದತ್ತು ಪಡೆದು ಸಾಕುತ್ತಿದ್ದಾಳೆ ಆದ್ಯಾ.

  ಚಿತ್ರ ಹಂಚಿಕೊಂಡಿರುವ ತಾಯಿ ರೇಣು ದೇಸಾಯಿ

  ಚಿತ್ರ ಹಂಚಿಕೊಂಡಿರುವ ತಾಯಿ ರೇಣು ದೇಸಾಯಿ

  ಎರಡೂ ಬೆಕ್ಕುಗಳ ಚಿತ್ರವನ್ನು ಆದ್ಯಾಳ ತಾಯಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನನ್ನ ಮಕ್ಕಳ ಬಗ್ಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  ಮೂರು ಮದುವೆಯಾಗಿರುವ ಪವನ್ ಕಲ್ಯಾಣ್

  ಮೂರು ಮದುವೆಯಾಗಿರುವ ಪವನ್ ಕಲ್ಯಾಣ್

  ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವರನ್ನು ಮದುವೆಯಾದರು. ನಂತರ 2009 ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾದರು. ನಂತರ 2013 ರಲ್ಲಿ ರಶ್ಯನ್ ಮಹಿಳೆ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾದರು.

  English summary
  Actor, politician Pawan Kalyan-Renu Desai daughter Adya adapted two handicapped cats.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X