twitter
    For Quick Alerts
    ALLOW NOTIFICATIONS  
    For Daily Alerts

    ಗಳಿಸಿದ್ದೆಷ್ಟು? ತೆರಿಗೆ ಕಟ್ಟಿದ್ದೆಷ್ಟು? ಪಕ್ಷಕ್ಕೆ ಕೊಟ್ಟಿದ್ದೆಷ್ಟು? ಎಲ್ಲ ಲೆಕ್ಕ ತೆರೆದಿಟ್ಟ ಪವನ್ ಕಲ್ಯಾಣ್

    |

    ಮಂಗಳಗಿರಿಯಲ್ಲಿ ಇಂದು (ಅಕ್ಟೋಬರ್ 18) ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ತೀವ್ರ ಸಿಟ್ಟಿನಿಂದ ಮಾತನಾಡಿರುವುದು ಭಾರಿ ವೈರಲ್ ಆಗಿದೆ.

    ಆಡಳಿತಾರೂಢ ವೈಎಸ್‌ಆರ್‌ಸಿಪಿ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪವನ್ ಕಲ್ಯಾಣ್, 'ಚಪ್ಪಲಿಯಲ್ಲಿ ಹೊಡೆಯುತ್ತೇನೆ, ನಾಲಿಗೆ ಸೀಳುತ್ತೇನೆ, ಮನೆಯಿಂದ ಹೊರಗೆಳೆದುಕೊಂಡು ಬಂದು ಹೊಡೆಯುತ್ತೇನೆ' ಎಂದೆಲ್ಲ ಸಿನಿಮೀಯ ಮಾದರಿಯಲ್ಲಿ ಹೇಳಿದ್ದಾರೆ.

    ವೈಎಸ್‌ಆರ್‌ಸಿಪಿ ಪಕ್ಷದವರು ತಮ್ಮ ಮೇಲೆ ಸಾಮಾನ್ಯವಾಗಿ ಮಾಡುವ ಆರೋಪಗಳ ಬಗ್ಗೆಯೂ ಉತ್ತರ ಕೊಡುವ ಯತ್ನವನ್ನೂ ಪವನ್ ಕಲ್ಯಾಣ್ ಮಾಡಿದ್ದಾರೆ. ಮೂರು ಮದುವೆ, ಸಂಭಾವನೆ, ಖರ್ಚು ಇತ್ಯಾದಿಗಳ ಬಗ್ಗೆಯೂ ಪವನ್ ಕಲ್ಯಾಣ್ ಮಾತನಾಡಿದ್ದು, ತಾವು ಗಳಿಸಿದ ಹಣ ಎಷ್ಟು? ಅದನ್ನು ಹೇಗೆ ಖರ್ಚು ಮಾಡಿದ್ದಾಗಿಯೂ ಲೆಕ್ಕಕೊಟ್ಟಿದ್ದಾರೆ. ಆದರೆ ಪವನ್ ಕಲ್ಯಾಣ್ ಕೊಟ್ಟಿರುವ ಲೆಕ್ಕ ಎಷ್ಟರ ಮಟ್ಟಿಗೆ ನಿಜ ಎಂಬುದು ಚರ್ಚೆ ಆಗಬೇಕಿದೆ.

    ಎಂಟು ವರ್ಷದಲ್ಲಿ ಗಳಿಸಿದ ಹಣವೆಷ್ಟು?

    ಎಂಟು ವರ್ಷದಲ್ಲಿ ಗಳಿಸಿದ ಹಣವೆಷ್ಟು?

    ನಾನು ಕಳೆದ ಎಂಟು ವರ್ಷದಲ್ಲಿ ಸಮಾರು ಆರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಆರು ಸಿನಿಮಾಗಳಿಂದ ಅಂದಾಜು 100 ರಿಂದ 120 ಕೋಟಿ ಹಣ ಸಂಪಾದನೆ ಮಾಡಿದ್ದೀನಿ. 33.37 ಕೋಟಿ ರುಪಾಯಿಗಳನ್ನು ತೆರಿಗೆಯಾಗಿ ಪಾವತಿ ಮಾಡಿದ್ದೇನೆ. ಇದು ಕೇವಲ ಆದಾಯ ತೆರಿಗೆ ಲೆಕ್ಕ, ಜಿಎಸ್‌ಟಿ ಲೆಕ್ಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಪವನ್ ಕಲ್ಯಾಣ್.

    ಮಕ್ಕಳಿಗಾಗಿ ಇಟ್ಟಿದ್ದ ಹಣದಲ್ಲಿ ಪಕ್ಷ ಕಟ್ಟಿದ್ದೇನೆ: ಪವನ್ ಕಲ್ಯಾಣ್

    ಮಕ್ಕಳಿಗಾಗಿ ಇಟ್ಟಿದ್ದ ಹಣದಲ್ಲಿ ಪಕ್ಷ ಕಟ್ಟಿದ್ದೇನೆ: ಪವನ್ ಕಲ್ಯಾಣ್

    ''ನನ್ನ ಮಕ್ಕಳಿಗೆ ಭವಿಷ್ಯತ್‌ಗಾಗಿ ಇರಿಸಿದ್ದ ಎಫ್‌ಡಿ ಅನ್ನು ಮುರಿದು ಜನಸೇನಾ ಪಕ್ಷದ ಪಾರ್ಟಿ ಕಚೇರಿ ನಿರ್ಮಾಣ ಮಾಡಿದ್ದೇನೆ. 2021 ಹಾಗೂ 2022 ರಲ್ಲಿಯೇ ಸುಮಾರು 5 ಕೋಟಿ ರುಪಾಯಿ ಹಣವನ್ನು ಪಕ್ಷಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದೇನೆ. 2014 ರ ಹುದ್-ಹುದ್ ಸೈಕ್ಲೋನ್ ಇಂದ ಹಿಡಿದು ರಾಜ್ಯ ಹಾಗೂ ದೇಶಕ್ಕೆ ಎದುರಾದ ಇನ್ನಿತರೆ ಸಮಸ್ಯೆಗಳಿಗೆ ಸ್ಪಂದಿಸಿ, ಸಿಎಂ ಕೇರ್, ಪಿಎಂ ಕೇರ್ ಇನ್ನಿತರೆಗಳಿಗೆ ಸುಮಾರು 12 ಕೋಟಿ ವರೆಗೆ ನೀಡಿದ್ದೇನೆ. ಇದರ ಜೊತೆಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 30 ಲಕ್ಷ ರುಪಾಯಿ ಹಣ ದೇಣಿಗೆ ನೀಡಿದ್ದೇನೆ'' ಎಂದಿದ್ದಾರೆ ಪವನ್ ಕಲ್ಯಾಣ್.

    ಜನಸೇನಾ ಪಕ್ಷದಲ್ಲಿರುವ ಹಣದ ಬಗ್ಗೆಯೂ ಮಾಹಿತಿ

    ಜನಸೇನಾ ಪಕ್ಷದಲ್ಲಿರುವ ಹಣದ ಬಗ್ಗೆಯೂ ಮಾಹಿತಿ

    ''ಜನಸೇನಾ ಪಕ್ಷದಲ್ಲಿ ಇರುವ ಹಣ, ಪಕ್ಷ ಖರ್ಚು ಮಾಡಿದ ಹಣ, ಪಕ್ಷಕ್ಕೆ ಬಂದ ದೇಣಿಗೆ ಬಗ್ಗೆಯೂ ಲೆಕ್ಕ ಕೊಟ್ಟಿರುವ ಪವನ್ ಕಲ್ಯಾಣ್, ''ಜನಸೇನಾ ಪಕ್ಷ 2014 ರಲ್ಲಿ ಪ್ರಾರಂಭವಾದಾಗಿನಿಂದಲೂ ನಾನು, ನಾಗಬಾಬು, ಕಾರ್ಯಕರ್ತರು, ಸಾಮಾನ್ಯ ಜನ ಸೇರಿ ಹಲವರು ದೇಣಿಗೆ ನೀಡಿದ್ದಾರೆ. ಪಕ್ಷದ ಐದು ಬ್ಯಾಂಕ್ ಖಾತೆಗಳಲ್ಲಿ ಈಗಿರುವ ಮೊತ್ತ 15.87 ಕೋಟಿ. 'ರೈತು ಭರೋಸಾ' ಕಾರ್ಯಕ್ರಮಕ್ಕಾಗಿ 3.80 ಲಕ್ಷ. ನನ್ನ ಹುಟ್ಟುಹಬ್ಬ ಸಂದರ್ಭ ಮಾಡಲಾದ 'ನನ್ನ ಸೇನೆಗೆ ನನ್ನ ದೇಣಿಗೆ' ಕಾರ್ಯಕ್ರಮದಡಿ ಸಂಗ್ರಹವಾದ ಹಣ 4.32 ಕೋಟಿ'' ಎಂದು ಲೆಕ್ಕ ಬಿಚ್ಚಿಟ್ಟರು ಪವನ್ ಕಲ್ಯಾಣ್.

    ಪ್ಯಾಕೇಜ್ ಸ್ಟಾರ್ ಎಂದವರಿಗೆ ಚಪ್ಪಲಿ ತೋರಿಸಿದ ಪವನ್ ಕಲ್ಯಾಣ್

    ಪ್ಯಾಕೇಜ್ ಸ್ಟಾರ್ ಎಂದವರಿಗೆ ಚಪ್ಪಲಿ ತೋರಿಸಿದ ಪವನ್ ಕಲ್ಯಾಣ್

    ''ನನ್ನನ್ನು 'ಪ್ಯಾಕೇಜ್ ಸ್ಟಾರ್' ಎನ್ನುವವರಿಗೆ ಚಪ್ಪಲಿಯಲ್ಲಿ ಹೊಡಿತೀನಿ ನನ್ ಮಕ್ಳ. ಈ ರೀತಿ ಬೇರೆ ಯಾರಾದರೂ ಲೆಕ್ಕ ಹೇಳಿದ್ದಾರಾ? ನನ್ನನ್ನು ಪ್ಯಾಕೇಜ್ ಸ್ಟಾರ್ ಎಂದು ಇನ್ನೊಮ್ಮೆ ಕರೆದರೆ ವೈಎಸ್‌ಆರ್‌ಸಿಪಿ ನನ್ ಮಕ್ಳಿಗೆ ಚಪ್ಪಲಿ ಹರಿದುಹೋಗುವವರೆಗೆ ಹೊಡೆಯುತ್ತೇನೆ'' ಎನ್ನುತ್ತಾ ವೇದಿಕೆ ಮೇಲೆಯೇ ತಾವು ಧರಿಸಿದ್ದ ಚಪ್ಪಲಿಯನ್ನು ಬಿಚ್ಚಿ ಕೈಯಲ್ಲಿ ಹಿಡಿದು ತೋರಿಸಿದರು ಪವನ್ ಕಲ್ಯಾಣ್.

    English summary
    Pawan Kalyan talks about how much he earned in last eight years and how much he gave as tax. How much money does his party has now.
    Wednesday, October 19, 2022, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X