Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಲ್ಲು ಅರ್ಜುನ್‌ಗೆ ಸರ್ಪ್ರೈಜ್ ಉಡುಗೊರೆ ಕಳಿಸಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಚಿತ್ರರಂಗದ ಡಾರ್ಲಿಂಗ್ ಆಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೂ ಕಾಲಿಟ್ಟಿರುವ ಈ ನಟಿ ಅಲ್ಲಿಯೂ ಆರಂಭದಲ್ಲಿಯೇ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ತೆಲುಗು ಚಿತ್ರ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಹಲವು ಗೆಳೆಯರನ್ನು ಸಹ ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ. ಯಾವುದೇ ನಟರೊಟ್ಟಿಗೆ ನಟಿಸಿದರೂ ಅವರೊಟ್ಟಿಗೆ ಆತ್ಮೀಯ ಬಂಧವನ್ನು ರಶ್ಮಿಕಾ ಮಂದಣ್ಣ ಸಾಧಿಸಿಕೊಳ್ಳುತ್ತಾರೆ. ಇದೇ ರೀತಿಯಾಗಿ ಚಿತ್ರರಂಗದಲ್ಲಿ ಹಲವು ಗೆಳೆಯರನ್ನು ರಶ್ಮಿಕಾ ಹೊಂದಿದ್ದಾರೆ.
ಇದೀಗ ನಟಿ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್‌ಗೆ ರಶ್ಮಿಕಾ ಉಡುಗೊರೆಯೊಂದನ್ನು ಕಳಿಸಿದ್ದಾರೆ. ಉಡುಗೊರೆಯ ಚಿತ್ರವನ್ನು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉಡುಗೊರೆ ಕಳಿಸಿದ ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್‌ಗೆ ಕೆಲವು ತಿನಿಸುಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ನಟಿ ರಶ್ಮಿಕಾ ಮಂದಣ್ಣ ಸುಂದರವಾದ ಗಿಫ್ಟ್ ಬಾಕ್ಸ್‌ನಲ್ಲಿಟ್ಟು, ತಾವೇ ಕೈಯಾರೆ ಒಂದು ಪುಟ್ಟ ನೋಟ್ ಅನ್ನು ಬರೆದು ಕಳಿಸಿಕೊಟ್ಟಿದ್ದಾರೆ. ರಶ್ಮಿಕಾ ಕಳಿಸಿರುವ ಉಡುಗೊರೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ''ಈ ಅಚಾನಕ್ ಉಡುಗೊರೆಗೆ ಬಹಳ ಧನ್ಯವಾದಗಳು ಪ್ರೀತಿಯ ರಶ್ಮಿಕಾ'' ಎಂದು ಬರೆದುಕೊಂಡಿದ್ದಾರೆ.

ಪ್ರೀತಿಯಿಂದ ಸಂದೇಶ ಬರೆದಿರುವ ರಶ್ಮಿಕಾ
''ನಿಮಗೆ ಈ ಥರಹದ್ದು ಏನಾದರೂ ಕಳಿಸಬೇಕು ಎನಿಸಿತು ಸರ್, 'ಪುಷ್ಪ' ಸಿನಿಮಾಕ್ಕೆ ಆಲ್ ದಿ ಬೆಸ್ಟ್, ಪ್ರೀತಿಯೊಂದಿಗೆ ರಶ್ಮಿಕಾ'' ಎಂಬ ನೋಟ್ ಅನ್ನು ರಶ್ಮಿಕಾ ತಮ್ಮ ಕೈಬರಹದಲ್ಲಿ ಬರೆದಿದ್ದಾರೆ. ಜೊತೆಗೆ, 'ಒಂದಿಷ್ಟು ಪ್ರೀತಿಯನ್ನು ನಿಮ್ಮ ಕಡೆ ಕಳಿಸುತ್ತಿದ್ದೇನೆ'' ಎಂಬ ಮತ್ತೊಂದು ಕ್ಯೂಟ್ ನೋಟ್ ಅನ್ನು ಬರೆದು ರಶ್ಮಿಕಾ, ಅಲ್ಲು ಅರ್ಜುನ್‌ಗೆ ಕಳಿಸಿದ್ದಾರೆ. ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡುವ ಹವ್ಯಾಸ ರಶ್ಮಿಕಾಗೆ ಇದೆ. ಕೆಲ ತಿಂಗಳ ಹಿಂದೆ ಬಾಲಿವುಡ್ ಸಿನಿಮಾ 'ಗುಡ್ ಬೈ'ನಲ್ಲಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ನಟಿಸುವಾಗ ಅಪ್ಪಂದಿರ ದಿನಕ್ಕೆ ಅಮಿತಾಬ್ ಬಚ್ಚನ್ ಅವರಿಗೆ ಉಡುಗೊರೆ ನೀಡಿದ್ದರು.

ಡಿಸೆಂಬರ್ 17ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ
ಇನ್ನು ನಟಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿರುವ 'ಪುಷ್ಪ' ಸಿನಿಮಾ ಡಿಸೆಂಬರ್ 17ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಮಲಯಾಳಂನ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ ಕನ್ನಡಿಗ ಡಾಲಿ ಧನಂಜಯ್, ಕಿಶೋರ್, ತೆಲುಗು ಹಾಸ್ಯನಟ ಸುನಿಲ್ ಸಹ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮತ್ತೊಂದು ಪ್ರಮುಖ ವಿಶೇಷತೆಯೆಂದರೆ ಇದೇ ಮೊದಲ ಬಾರಿಗೆ ಸಮಂತಾ ಐಟಂ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ನಾಲ್ಕು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಎಲ್ಲವೂ ಹಿಟ್ ಆಗಿವೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಇದು ಅವರ ಮೂರನೇ ಸಿನಿಮಾ.

ಮೂರು ಸಿನಿಮಾಗಳು ಬಿಡುಗಡೆಗೆ ರೆಡಿ
ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮಾತ್ರವೇ ಅಲ್ಲದೆ ಬಾಲಿವುಡ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. 'ಪುಷ್ಪ' ಸಿನಿಮಾ ಬಿಡುಗಡೆಗೆ ತಯಾರಿರುವಾಗಲೇ ರಶ್ಮಿಕಾ, 'ಆಡುವಾಳ್ಳು ಮೀಕು ಜೋಹಾರ್ಲು' ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಒಂದು ಹೆಸರಿಡದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ. ಜೊತೆಗೆ 'ಸಿದ್ಧಾರ್ಥ್ ಮಲ್ಹೋತ್ರಾ' ನಾಯಕ ನಟನಾಗಿರುವ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಮಲಯಾಳಂ ಸಿನಿಮಾದಲ್ಲಿ ನಟಿಸಲಿದ್ದಾರೆ ರಶ್ಮಿಕಾ.