Don't Miss!
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನೆನಪಿಡಿ...ಒಳ್ಳೆ ಸುದ್ದಿ ಬರುತ್ತದೆ": ಸಮಂತಾ
ನಾಗಚೈತನ್ಯ-ಸಮಂತಾ ವಿವಾಹಕ್ಕಿಂತ, ಅವರ ವಿಚ್ಛೇದನವೇ ಬಹುಶಃ ಹೆಚ್ಚು ಸುದ್ದಿ ಮಾಡಿದೆ. ಅವರ ವಿಚ್ಛೇದನದ ವಿಷಯವಂತೂ ಜನತೆ ಒಂದು ರಾಷ್ಟ್ರೀಯ ಸಮಸ್ಯೆಯಂತೆ ಬಹುಕಾಲ ಚರ್ಚೆ ಮಾಡಿದ್ದಾರೆ. ಕೆಲವರು ನಾಗಚೈತನ್ಯ ಬಗ್ಗೆ ಸಹಾನುಭೂತಿ ತೋರಿಸಿದರೆ, ಮತ್ತೆ ಕೆಲವರು ಸಮಂತಾ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.
ಒಂದಷ್ಟು ಮಂದಿ ನೀವಿಬ್ಬರೂ ಮತ್ತೆ ಒಂದಾಗಿ ಬದುಕಿ ಅಂತ ಕೂಡ ಜೋಡಿ ಬೇರೆ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಾಗಚೈತನ್ಯ ವಿಚ್ಛೇದನದ ನಂತರ ತನ್ನ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೊಂದೆಡೆ ಸಮಂತಾ ಕೂಡ ವಿಚ್ಛೇದನದ ನೋವಿನಿಂದ ಹೊರಬರಲು ತನ್ನ ಸ್ನೇಹಿತರ ಜೊತೆ ಧಾರ್ಮಿಕ ಪ್ರವಾಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಬ್ಬರು ನಿಧಾನವಾಗಿ ವಿಚ್ಛೇದನದ ಕಹಿಯನ್ನು ಮರೆತು ಸ್ವತಂತ್ರವಾಗಿ ತಮ್ಮ ತಮ್ಮ ಬದುಕುಗಳನ್ನು ಆರಂಭಿಸಿದ್ದಾರೆ.

'ಏ ಮಾಯ ಚೇಸಾವೆ...' ಸಮಂತಾ
ಸಮಂತಾ ಸೌತ್ ಇಂಡಸ್ಟ್ರಿಯ ನಂಬರ್ ಒನ್ ನಟಿ ಆಗಿದ್ದವಳು. ತೆಲುಗು ಮತ್ತು ತಮಿಳಿನ ಎಲ್ಲಾ ಟಾಪ್ ನಟರ ಜೊತೆಯಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ಗೌತಮ್ ಮೆನನ್ ನಿರ್ದೇಶನದ 'ಏ ಮಾಯ ಚೇಸಾವೆ' ಚಿತ್ರದ ಮೂಲಕ ನಾಯಕ ನಟಿಯಾಗಿ ಅರಂಗ್ರೇಟಂ ಮಾಡಿದ ಸಮಂತಾ ಮುಂದೆ ಅದೇ ಚಿತ್ರದಲ್ಲಿ ನಾಯಕ ನಟನಾಗಿದ್ದ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದಳು. ಆದರೆ ಇದಕ್ಕೆ ಮೊದಲು ಸಮಂತಾ ಮತ್ತೊಬ್ಬ ನಾಯಕ ನಟನ ಜೊತೆಯಲಿ ಪ್ರೀತಿಯಲ್ಲಿ ಬಿದ್ದಿದ್ದಳು.

ನಟ ಸಿದ್ದಾರ್ಥ್ ಜೊತೆ ರೋಮ್ಯಾನ್ಸ್
ನಾಗಚೈತನ್ಯ ಜೊತೆ ವಿವಾಹವಾಗುವುದಕ್ಕೆ ಮೊದಲೇ ಸಮಂತಾ-ಸಿದ್ದಾರ್ಥ್ ಜೊತೆಯಲ್ಲಿ ಒಂದಷ್ಟು ಕಾಲ ಸುತ್ತಾಡಿದರು. ಅಲ್ಲದೆ ಅವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಕೂಡ ಮನೆಮಾಡಿತ್ತು. ಇದಕ್ಕೆ ಪೂರಕವೆಂಬಂತೆ ಅವರಿಬ್ಬರೂ ಸೇರಿ ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ನಾಗದೋಷ ಪರಿಹಾರಕ್ಕಾಗಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು. ಆದರೆ ಅಲ್ಲಿಗೆ ಇವರಿಬ್ಬರ ಪ್ರೀತಿ ಪಯಣ ನಿಂತುಹೋಯಿತು ಮುಂದೆ ನಾಗಚೈತನ್ಯ ಸಮಂತಾಳನ್ನು ಜೀವನದಲ್ಲಿ ಬಂದ.

ವಿವಾಹದಿಂದ ವಿಚ್ಛೇದನದವರೆಗೆ
ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿದ್ದ ನಾಗಚೈತನ್ಯ- ಸಮಂತಾ ಕೊನೆಗೂ ಅಕ್ಟೋಬರ್ 2017ರಲ್ಲಿ ವಿವಾಹವಾದರು. ಹಿಂದೂ ಸಂಪ್ರದಾಯಕ್ಕೆ ಸೇರಿದ ನಾಗಚೈತನ್ಯ ಗೋವಾದಲ್ಲಿ ಸಮಂತಾಳ ಜೊತೆಯಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿ ಆನಂತರ ಹೈದರಾಬಾದಿನಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು. ಆನಂತರ ಇಬ್ಬರೂ ಸೇರಿ ಹೈದರಾಬಾದಿನಲ್ಲಿ ಒಂದು ಮನೆಯನ್ನು ಕೂಡ ಖರೀದಿ ಮಾಡಿ ಜೋಡಿ ಹಕ್ಕಿಯಂತೆ ಜೀವನ ಸಾಗಿಸಿದರು. ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಮನಸ್ತಾಪಗಳ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆಯುತ್ತಿತ್ತು. ಇಬ್ಬರು ಬೇರೆಯಾಗುತ್ತಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು ಇದಕ್ಕೆ ಪೂರಕವಾಗಿ ಅಕ್ಟೋಬರ್‌ನಲ್ಲಿ ಇವರಿಬ್ಬರು ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡರು.

ವಿಚ್ಛೇದನದ ನಂತರ ಧಾರ್ಮಿಕ ಪ್ರವಾಸಗಳು
ವಿಚ್ಛೇದನದ ನಂತರ ಸಮಂತಾ ಪೂರ್ತಿಯಾಗಿ ಧಾರ್ಮಿಕ ಪ್ರವಾಸಗಳ ಮೇಲೆ ಮನಸ್ಸು ನೆಟ್ಟರು. ಇದೇ ಕ್ರಮದಲ್ಲಿ ಚಾರ್ ಧಾಮ್ ಪ್ರವಾಸ ಕೂಡ ಮಾಡಿಕೊಂಡು ಬಂದಳು. ಒಂದಷ್ಟು ಸಮಯ ಹೆಚ್ಚಾಗಿ ಧಾರ್ಮಿಕ ವಿಚಾರಗಳ ಬಗ್ಗೆ ಸಮಂತಾ ಮಾತನಾಡಿದಳು. ಇದೇ ಸಮಯದಲ್ಲಿ ನಾಗಚೈತನ್ಯ 'ಲವ್ ಸ್ಟೋರಿ' ಚಿತ್ರದ ಯಶಸ್ಸಿನ ನಂತರ ಮತ್ತಷ್ಟು ಚಿತ್ರಗಳನ್ನು ಮಾಡುವುದರ ಕಡೆಗೆ ಗಮನ ನೆಟ್ಟರು. ಇಬ್ಬರ ನಡುವಿನ ಡಿವೋರ್ಸ್ ಗೆ ನಿರ್ದಿಷ್ಟ ಕಾರಣಗಳು ಇಂದಿಗೂ ಬಹಿರಂಗವಾಗಿಲ್ಲ.
ಆದರೆ ಸೋಶಿಯಲ್ ಮೀಡಿಯಾಗಳು ಅಂತೆ- ಕಂತೆ ಪುರಾಣಗಳಂತೆ ಅನೇಕ ಕಥೆಗಳನ್ನು ಕಟ್ಟಿದ್ದು ಕೂಡ ಆಯಿತು, ಇದೇ ಸಮಯದಲ್ಲಿ ಸಮಂತಾ ಮಾಡುತ್ತಿದ್ದ ಪ್ರತಿಯೊಂದು ಕೂಡ ಸಾಕಷ್ಟು ವೈರಲ್ ಆಯಿತು. ಇತ್ತೀಚಿನ ದಿನಗಳಲ್ಲಿ ಅವರ ವಿಚ್ಛೇದನದ ಸುದ್ದಿ ತುಸುಮಟ್ಟಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಕಮ್ಮಿಯಾಗಿದೆ.

ಗುಡ್ ನ್ಯೂಸ್ ಬಗ್ಗೆ ಹೊಸ ಪೋಸ್ಟ್ ಅನ್ನು ಹಂಚಿಕೊಂಡ ಸಮಂತಾ
ನಾಗಚೈತನ್ಯ ಜೊತೆಗಿನ ಸಂಬಂಧವನ್ನು ಮುರಿದಾಗಿನಿಂದ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ವಿಚ್ಛೇದನದ ಘೋಷಣೆಯ ನಂತರ, ಅವರು ಇನ್ಸ್ಟಾಗ್ರಾಮ್ ಮೂಲಕ ಹೇಳಲು ಬಯಸಿದ್ದನ್ನೆಲ್ಲ ಹೇಳುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವು, ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಆಗಾಗ್ಗೆ ಪೋಸ್ಟ್ ಅನ್ನು ಹೇಳುತ್ತಿದ್ದಾರೆ ಮತ್ತು ಅವರ ಪ್ರಸ್ತುತ ಸ್ಥಿತಿಯನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ. ಇದರೊಂದಿಗೆ ಆಕೆ ಹಾಕುವ ಪ್ರತಿಯೊಂದು ಪೋಸ್ಟ್ ಸುದ್ದಿಯಲ್ಲಿ ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ಇತ್ತೀಚೆಗೆ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಯಾವಾಗಲೂ ನಿರಾಶೆಗೊಂಡ ಅಥವಾ ಭಾವನಾತ್ಮಕ ಉಲ್ಲೇಖಗಳನ್ನು ಹಂಚಿಕೊಳ್ಳುವ ಸಮಂತಾ ಈ ಸಮಯದಲ್ಲಿ ಆಸಕ್ತಿದಾಯಕ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ.

ನೆನಪಿಡಿ...ಒಳ್ಳೆ ಸುದ್ದಿ ಬರುತ್ತಿದೆ
'ನೆನಪಿಡಿ .. ಒಳ್ಳೆಯ ಸುದ್ದಿ ಬರುತ್ತಿರುತ್ತದೆ' ಎಂಬ ಶೀರ್ಷಿಕೆಯೊಂದಿಗೆ ಸಮಂತಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಮಂತಾ ತನ್ನ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟಿಜನ್‌ಗಳು ಚರ್ಚಿಸುತ್ತಿದ್ದಾರೆ ಮತ್ತು ಅವಳ ಜೀವನಕ್ಕೆ ಸಂಬಂಧಿಸಿದಂತೆ ಯಾವುದೋ ದೊಡ್ಡ ತಿರುವು ಸಿಕ್ಕಿರಬಹುದು ಅಂತ ಕೂಡ ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಸಮಂತಾ, ಜೀವನದಲ್ಲಿ ಬರುತ್ತಿರುವ ದೊಡ್ಡ ಸುದ್ದಿಯಾದರೂ ಏನು ಅಂತ ಮಾತ್ರ ಬಹಿರಂಗಪಡಿಸಿಲ್ಲ
ಸದ್ಯ ಸಮಂತಾ ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ 'ಕತ್ತು ವಕ್ಕುಲರೆಂದು ಕಾದಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸುತ್ತಿರುವ 30ನೇ ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಅಲ್ಲದೇ ಈಕೆ ನಟಿಸಿರುವ ತೆಲುಗು ಚಿತ್ರ 'ಶಾಕುಂತಲಂ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ.