For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ನೆಲೆಸಿದ್ದಾರಾ ನಟಿ ಸಮಂತಾ?, ನಾಗಚೈತನ್ಯ ಪತ್ನಿ ಹೇಳಿದ್ದೇನು?

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಜೋಡಿಗಳಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಜೋಡಿ ಕೂಡ ಒಂದು. ತೆಲುಗಿನ ಈ ಕ್ಯೂಟ್ ಕಪಲ್ ಮಧ್ಯೆ ಯಾವುದು ಸರಿಯಿಲ್ಲ, ಇಬ್ಬರೂ ವಿಚ್ಚೇದನ ಪಡೆಯಲು ಮುಂದಾಗಿದ್ದು, ದೂರ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಸಮಂತಾ ಈಗಾಗಲೇ ನಾಗ ಚೈತನ್ಯ ಅವರಿಂದ ದೂರ ಆಗಿ, ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ವಿಚ್ಛೇದನ ವಿಚಾರವಾಗಿ ಸಮಂತಾ ಮತ್ತು ನಾಗ ಚೈತನ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರೂ ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಓಡಾಡುತ್ತಿದ್ದಾರೆ ಸ್ಟಾರ್ ಜೋಡಿ. ಹಾಗಾಗಿ ವಿಚ್ಛೇದನ ವದಂತಿ ಮತ್ತಷ್ಟು ಜೋರಾಗಿಯೆ ಸದ್ದು ಮಾಡುತ್ತಿದೆ.

  ಸಮಂತಾ ಈಗಾಗಲೇ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದು, ಅಲ್ಲೇ ನೆಲೆಸಿದ್ದಾರೆ ಎನ್ನವ ಮಾತು ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಸಮಂತಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದರು. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಮಂತಾಗೆ ಅಭಿಮಾನಿಯೊಬ್ಬರು ನೀವು ಮುಂಬೈಗೆ ಶಿಫ್ಟ್ ಆಗಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು.

  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಂತಾ ಸಾವಿರ ವದಂತಿಗಳಂತೆ ಇದು ಕೂಡ, ತಾನು ಮುಂಬೈಗೆ ಶಿಫ್ಟ್ ಆಗಿರುವುದು ಸುಳ್ಳು ಎಂದಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಸಮಂತಾ, " ಈ ವದಂತಿ ಎಲ್ಲಿಂದ ಪ್ರಾರಂಭವಾಯಿತು ನನಗೆ ಗೊತ್ತಿಲ್ಲ. ಆದರೆ ಇತರ ನೂರು ವದಂತಿಗಳಂತೆ ಇದು ಕೂಡ ನಿಜವಲ್ಲ. ಹೈದರಾಬಾದ್ ನನ್ನ ಮನೆ, ನಾನು ಯಾವಾಗಲೂ ನನ್ನ ಮನೆ ಹೈದರಾಬಾದ್ ನಲ್ಲಿ ಇರುತ್ತೇನೆ. ಹೈದರಾಬಾದ್ ನನಗೆ ಎಲ್ಲವನ್ನು ನೀಡಿದೆ. ನಾನು ಇಲ್ಲೇ ಸಂತೋಷದಿಂದ ಬದುಕುತ್ತಿದ್ದೇನೆ" ಎಂದು ಹೇಳಿದ್ದಾರೆ.

  ಇತ್ತೀಚಿಗಷ್ಟೆ ನಟ ನಾಗ ಚೈತನ್ಯ ವೈಯಕ್ತಿಕ ವಿಚಾರದ ಬಗ್ಗೆ ಸುದ್ದಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗ ಚೈತನ್ಯ ಇದು ತುಂಬಾ ನೋವಾಗುತ್ತದೆ ಎಂದು ಹೇಳಿದ್ದರು.

  ''ನನ್ನ ಖಾಸಗಿ ಬದುಕಿನ ಬಗ್ಗೆ ಕ್ಷಣ-ಕ್ಷಣದ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಸುಳ್ಳು ಸುದ್ದಿಗಳನ್ನು ಪ್ರೊಮೋಟ್ ಮಾಡಲು ನನ್ನ ಹೆಸರು ಬಳಸಿಕೊಳ್ಳುತ್ತಿರುವುದನ್ನು ಕಂಡು ಬಹಳ ಬೇಸರವಾಗುತ್ತಿದೆ. ಆದರೆ ಈ ಮನೊರಂಜನ ಮಾಧ್ಯಮದ ಒಳ ಮರ್ಮವನ್ನು ನಾನು ಅರಿತುಕೊಂಡಿದ್ದೇನೆ. ಇಲ್ಲಿ ಒಂದು ಸುದ್ದಿಯನ್ನು ಮತ್ತೊಂದು ಸುದ್ದಿ ಮರೆಸುತ್ತದೆ'' ಎಂದು ನಾಗ ಚೈತನ್ಯ ಹೇಳಿದ್ದರು. ಆದರೆ ವಿಚ್ಛೇದನದ ವದಂತಿ ಬಗ್ಗೆ ನಾಗ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಾಗ ಚೈತನ್ಯ ಹಾಗೂ ಸಮಂತಾ ದೂರಾಗುವುದು ಖಾತ್ರಿಯಾಗಿದ್ದು ಅಕ್ಟೋಬರ್ 7ರಂದು ತಮ್ಮ ವಿಚ್ಛೇದನವನ್ನು ಈ ಜೋಡಿ ಘೋಷಿಸಲಿದೆ ಎನ್ನಲಾಗುತ್ತಿದೆ. ವಿಚ್ಛೇದನದ ಬಳಿಕ ಸಮಂತಾಗೆ 50 ಕೋಟಿ ರೂಪಾಯಿ ಹಣ ಜೀವನಾಂಶದ ರೂಪದಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಕ್ಟೋಬರ್ 7ರಂದು ಸ್ಪಷ್ಟನೆ ಸಿಗಲಿದೆಯೇ ಎಂದು ಕಾದುನೋಡಬೇಕು.

  English summary
  Telugu Actress Samantha Akkineni reacts Shifting to Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X