For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆ ಎದುರು ಆತ್ಮಹತ್ಯೆಗೆ ಯತ್ನಿಸಿದ ನಟಿ

  |

  ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಣ ಸಂಸ್ಥೆ ಗೀತಾ ಆರ್ಟ್‌ ಎದುರು ನಟಿ ಸುನಿತಾ ಬೋಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

  ಗೀತಾ ಆರ್ಟ್ಸ್‌ಗೆ ಸೇರಿದ ನಿರ್ಮಾಪಕ ಬನ್ನಿ ವಾಸು ವಿರುದ್ಧ ಕಳೆದ ಕೆಲ ವರ್ಷಗಳಿಂದಲು ಸುನಿತಾ ಬೋಯಾ ಆರೋಪ ಮಾಡುತ್ತಲೇ ಇದ್ದರು. ಬನ್ನಿ ವಾಸು ಕಾಸ್ಟಿಂಗ್ ಕೌಚ್‌ನಲ್ಲಿ ಭಾಗಿಯಾಗಿದ್ದು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸುನಿತಾ ಬೋಯಾ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಬನ್ನಿ ವಾಸು ಅಲ್ಲಗಳೆದಿದ್ದರು.

  ಸುನಿತಾ ಬೋಯಾ ಈ ಮುಂಚೆಯೂ ಗೀತಾ ಆರ್ಟ್ಸ್ ಕಚೇರಿಯ ಎದುರು ಜಗಳ, ಗಲಾಟೆ ಮಾಡಿದ್ದರು. ಒಮ್ಮೆಯಂತೂ ಆಕೆಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಕೆಲವು ದಿನಗಳ ಮುಂದೆ ಮತ್ತೆ ಕಚೇರಿ ಮುಂದೆ ಬಂದ ಸುನಿತಾ ಬೋಯಾ ನ್ಯಾಯಕ್ಕಾಗಿ ಒತ್ತಾಯಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುನಿತಾ ಬೋಯಾ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.

  ಈ ಮುಂಚೆ ಪೊಲೀಸರು ಸುನಿತಾರನ್ನು ಬಂಧಿಸಿದ್ದಾಗ ಆಕೆಗೆ ಮಾನಸಿಕ ಸ್ಥಿಮಿತ ಹದಗೆಟ್ಟಿದ್ದು ಚಿಕಿತ್ಸೆಯ ಅಗತ್ಯ ಇದೆಯೆಂದು ಹೇಳಿ ಯರ್ರಗಡ್ಡ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನೀಡಲಾಗಿತ್ತು. ಅದೆಲ್ಲ ಆದ ಮೇಲೆ ಮತ್ತೆ ವಿಡಿಯೋ ಬಿಡುಗಡೆ ತನಗೆ ಬನ್ನಿ ವಾಸು ಬೆದರಿಕೆ ಹಾಕುತ್ತಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು.

  ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada

  ಗೀತಾ ಆರ್ಟ್ಸ್‌ ತೆಲುಗಿನ ಪ್ರಖ್ಯಾತ ನಿರ್ಮಾಣ ಸಂಸ್ಥೆಯಾಗಿದ್ದು ಅದರ ಸ್ಥಾಪಕರು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್. ಅಲ್ಲು ಅರ್ಜುನ್ ಅವರದ್ದೂ ಸಂಸ್ಥೆಯಲ್ಲಿ ಪಾಲುದಾರಿಕೆ ಇದೆ. 1974 ರಿಂದಲೂ ಈ ಸಂಸ್ಥೆ ಸಿನಿಮಾ ನಿರ್ಮಾಣ ಉದ್ದಿಮೆಯಲ್ಲಿದ್ದು ತೆಲುಗಿನ ಹಲವು ಟಾಪ್ ಹೀರೋಗಳ ಸಿನಿಮಾಗಳನ್ನು ನಿರ್ಮಾಣ ಮಾಡಿದೆ, ಈಗಲೂ ಮಾಡುತ್ತಿದೆ. 'ಆಹಾ' ಒಟಿಟಿಯ ಮಾತೃ ಸಂಸ್ಥೆ ಇದೇ ಗೀತಾ ಆರ್ಟ್ಸ್.

  English summary
  Actress Sunitha Boya attempt to commit suicide in front of Geetha arts movie production company office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X