For Quick Alerts
  ALLOW NOTIFICATIONS  
  For Daily Alerts

  ಸಮಂತಾ ಎಲ್ಲಿ..?, ನಾಗ ಚೈತನ್ಯ ಹೊಸ ಪೋಸ್ಟ್ ಗೆ ನೆಟ್ಟಿಗರ ಕಾಮೆಂಟ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಜೋಡಿಗಳಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಜೋಡಿ ಕೂಡ ಒಂದು. ತೆಲುಗಿನ ಈ ಕ್ಯೂಟ್ ಕಪಲ್ ಮಧ್ಯೆ ಯಾವುದು ಸರಿಯಿಲ್ಲ, ಇವರು ವಿಚ್ಛೇದನ ಪಡೆಯಲು ಮುಂದಾಗಿದ್ದು, ದೂರ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಸಮಂತಾ ಈಗಾಗಲೇ ನಾಗ ಚೈತನ್ಯ ಅವರಿಂದ ದೂರ ಆಗಿ, ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ವಿಚ್ಛೇದನ ವಿಚಾರವಾಗಿ ಸಮಂತಾ ಮತ್ತು ನಾಗ ಚೈತನ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರೂ ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಓಡಾಡುತ್ತಿದ್ದಾರೆ. ಹಾಗಾಗಿ ವಿಚ್ಛೇದನ ವದಂತಿ ಮತ್ತಷ್ಟು ಜೋರಾಗಿಯೇ ಸದ್ದು ಮಾಡುತ್ತಿದೆ.

  ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ಯಶಸ್ಸಿನ ಬಳಿಕ ಚೈ ಫುಲ್ ಖುಷ್ ಆಗಿದ್ದಾರೆ. ಲವ್ ಸ್ಟೋರಿ ಎಲ್ಲಾ ಕಾರ್ಯಕ್ರಮಗಳಲ್ಲೂ ನಾಗ ಚೈತನ್ಯ ಅವರಿಗೆ ನಾಗಾರ್ಜುನ ಸಾಥ್ ನೀಡಿದ್ದಾರೆ. ಆದರೆ ಪತ್ನಿ ಸಮಂತಾ ಯಾವುದೇ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿಲ್ಲ. ಪ್ರತಿಯೊಂದು ಈವೆಂಟ್ ನಲ್ಲೂ ಸಮಂತಾ ಮಿಸ್ ಆಗುತ್ತಿರುವುದು ಅಭಿಮಾನಿಗಳ ಅನುಮಾನ ಮತ್ತಷ್ಟು ಹೆಚ್ಚಾಗುತ್ತಿದೆ.

  ಇತ್ತೀಚೆಗಷ್ಟೆ ಲವ್ ಸ್ಟೋರಿ ಸಿನಿಮಾದ ಸಕ್ಸಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಯಶಸ್ಸಿನ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆಗೆ ನಾಗ ಚೈತನ್ಯ ಕುಟುಂಬ ಕೂಡ ಹಾಜರಿತ್ತು. ಆದರೆ ನಟಿ ಸಮಂತಾ ಮಾತ್ರ ಮಿಸ್ ಆಗಿದ್ದಾರೆ. ತಂಡದ ಜೊತೆ ನಾಗ ಚೈತನ್ಯ ಫೋಟೋ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದ ನಾಗ ಚೈತನ್ಯಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸಮಂತಾ ಎಲ್ಲಿ ಕೇಳುತ್ತಿದ್ದಾರೆ.

  ಪ್ರಾರಂಭದಲ್ಲಿ ಸಮಂತಾ ಲವ್ ಸ್ಟೋರಿ ಸಿನಿಮಾಗೆ ಉತ್ತಮವಾದ ಬೆಂಬಲ ನೀಡಿದ್ದರು. ಚಿತ್ರದ ಪ್ರಮೋಷನ್ ನಲ್ಲಿ ಸಮಂತಾ ಪಾತ್ರ ಕೂಡ ಇತ್ತು. ಆದರೀಗ ಸಮಂತಾ ಅಕ್ಕಿನೇನಿ ಕುಟುಂಬದಿಂದ ದೂರ ಆಗಿದ್ದು, ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿಲ್ಲ.

  ಸಮಂತಾ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಬಗ್ಗೆ ಸ್ವತಃ ಸಮಂತಾ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಮುಂಬೈ ವಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಈ ವದಂತಿ ಎಲ್ಲಿಂದ ಪ್ರಾರಂಭವಾಯಿತು ನನಗೆ ಗೊತ್ತಿಲ್ಲ. ಆದರೆ ಇತರ ನೂರು ವದಂತಿಗಳಂತೆ ಇದು ಕೂಡ ನಿಜವಲ್ಲ. ಹೈದರಾಬಾದ್ ನನ್ನ ಮನೆ, ನಾನು ಯಾವಾಗಲೂ ನನ್ನ ಮನೆ ಹೈದರಾಬಾದ್ ನಲ್ಲಿ ಇರುತ್ತೇನೆ. ಹೈದರಾಬಾದ್ ನನಗೆ ಎಲ್ಲವನ್ನು ನೀಡಿದೆ. ನಾನು ಇಲ್ಲೇ ಸಂತೋಷದಿಂದ ಬದುಕುತ್ತಿದ್ದೇನೆ" ಎಂದು ಹೇಳುವ ಮೂಲಕ ಮುಂಬೈ ಹೋಗಿದ್ದಾರೆ ಎನ್ನುವ ವದಂತಿಗೆ ಬ್ರೇಕ್ ಹಾಕಿದ್ದಾರೆ.

  ಸದ್ಯ ಸಮಂತಾ ಮತ್ತು ನಾಗ ಚೈತನ್ಯ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಇಬ್ಬರ ನಡುವಿನ ವದಂತಿ ಮತ್ತಷ್ಟು ಜೋರಾಗುತ್ತಲೇ ಇದೆ. ಇಬ್ಬರು ಅಕ್ಟೋಬರ್ 7ರಂದು ವಿಚ್ಛೇದನ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಅಲ್ಲಿವರೆಗೂ ಕಾದು ನೋಡಬೇಕು.

  English summary
  Where is Samantha? netizens questions to Nag Chaitya's new post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X