For Quick Alerts
  ALLOW NOTIFICATIONS  
  For Daily Alerts

  10 ಕೋಟಿ ರೂ. ನಷ್ಟ ಕಂಡ ಯಶ್ ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್: ಹೇಗಿದೆ ರೆಸ್ಪಾನ್ಸ್?

  |

  KGF ಸರಣಿ ಸಿನಿಮಾಗಳ ಸಕ್ಸಸ್‌ನಿಂದ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋದು ಗೊತ್ತೇಯಿದೆ. ಯಶ್‌ಗೆ ಈಗ ಹೊರ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಈ ಕ್ರೇಜ್ ನೋಡಿ ಯಶ್ ನಟನೆಯ ಹಳೇ ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಡಬ್‌ ಮಾಡಿ ರಿಲೀಸ್ ಮಾಡಲಾಗ್ತಿದೆ.

  ಆಂಧ್ರ, ತೆಲಂಗಾಣದಲ್ಲಿ ಡಬ್ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತೆ. ಯಾವುದೇ ಭಾಷೆಯ ಸಿನಿಮಾ ಆದರೂ ಚೆನ್ನಾಗಿದ್ದರೆ ತೆಲುಗು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸುತ್ತಾರೆ. ಈಗಾಗಲೇ ಸಾಕಷ್ಟು ಕನ್ನಡ ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿವೆ. ಈಗ ಅದೇ ಸಾಲಿಗೆ ಯಶ್ ನಟನೆಯ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಕೂಡ ಸೇರಿಕೊಂಡಿದೆ. ಮಹೇಶ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ 2016ರಲ್ಲಿ ತೆರೆಕಂಡಿತ್ತು. ಯಶ್ ಜೋಡಿಯಾಗಿ ರಾಧಿಕಾ ಪಂಡಿತ್ ಮಿಂಚಿದ್ದರು. 'ರಾರಾಜು' ಹೆಸರಿನಲ್ಲಿ 'ಸಂತು ಸ್ಟ್ರೈಟ್ ಫಾರ್ವರ್ಡ್' ತೆಲುಗಿಗೆ ಡಬ್ ಆಗಿ ಇಂದು(ಅಕ್ಟೋಬರ್ 14) ಬಿಡುಗಡೆಯಾಗಿದೆ. ಈ ಚಿತ್ರದಿಂದ 10 ಕೋಟಿ ರೂ. ನಷ್ಟ ಆಗಿತ್ತು ಎಂದು ಇತ್ತೀಚೆಗೆ ನಿರ್ಮಾಪಕ ಕೆ. ಮಂಜು ಹೇಳಿದ್ದರು.

  ಅಬ್ಬಬ್ಬಾ.. ಥಿಯೇಟರ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: ಹೊರರಾಜ್ಯದಲ್ಲಿ ಇಂದಿಗೂ KGF - 2 ಹೌಸ್‌ಫುಲ್!ಅಬ್ಬಬ್ಬಾ.. ಥಿಯೇಟರ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: ಹೊರರಾಜ್ಯದಲ್ಲಿ ಇಂದಿಗೂ KGF - 2 ಹೌಸ್‌ಫುಲ್!

  ಬಹಳ ಹಿಂದೆಯೇ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೆದಿತ್ತು. ಅಂತೂ ಇಂತೂ ಇದೀಗ ಸಿನಿಮಾ ರಿಲೀಸ್ ಆಗಿದೆ. ಕನ್ನಡದಲ್ಲಿ ಸೋಲುಂಡ ಸಿನಿಮಾ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.

   ಪ್ರೇಕ್ಷಕರ ಮನಗೆಲ್ಲದ 'ಸಂತು ಸ್ಟ್ರೈಟ್ ಫಾರ್ವರ್ಡ್'

  ಪ್ರೇಕ್ಷಕರ ಮನಗೆಲ್ಲದ 'ಸಂತು ಸ್ಟ್ರೈಟ್ ಫಾರ್ವರ್ಡ್'

  6 ವರ್ಷಗಳ ಹಿಂದೆ ತೆರೆಕಂಡಿದ್ದ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲೇ ಇಲ್ಲ. ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾ ಕುರಿತು ಹೆಚ್ಚು ಪ್ರಚಾರವನ್ನು ಮಾಡಿರಲಿಲ್ಲ. ಕಥೆಯಲ್ಲಿ ಧಮ್ ಇರಲಿಲ್ಲ. ಸೀದಾ ಸಾದಾ ಸಿನಿಮಾ ಪ್ರೇಕ್ಷಕರಿಗೆ ರುಚಿಸಲಿಲ್ಲ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರಸಿ ಮಾಡಿದ್ದ ಸಿನಿಮಾದಲ್ಲಿ ಗಟ್ಟಿ ಕತೆ ಇಲ್ಲದೇ ಪೇಲವ ಎನ್ನಿಸಿಕೊಂಡಿತ್ತು. ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯಕ್ಕೆ ಮಾತ್ರ ಫುಲ್ ಮಾರ್ಕ್ಸ್ ಸಿಕ್ಕಿತ್ತು. 'ಸಂತು ಸ್ಟ್ರೈಟ್ ಫಾರ್ವರ್ಡ್' ಜೊತೆಗೆ ಸುದೀಪ್- ಉಪೇಂದ್ರ ನಟನೆಯ 'ಮುಕುಂದ ಮುರಾರಿ' ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು.

   ಪ್ರಚಾರಕ್ಕೆ ಯಶ್- ರಾಧಿಕಾ ಹಿಂದೇಟು

  ಪ್ರಚಾರಕ್ಕೆ ಯಶ್- ರಾಧಿಕಾ ಹಿಂದೇಟು

  ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಚಿತ್ರರಂಗ ಪ್ರತಿಭಟನೆ ನಡೆಸಿದ್ದ ವೇಳೆ ಯಶ್ ಹಾಗೂ ರಾಧಿಕಾ ಪಂಡಿತ್ ಕರ್ನಾಟಕದಲ್ಲಿ ಇರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ಕೆಲ ಮಾಧ್ಯಮಗಳು ಯಶ್ ಅವರ ರೈತಪರ ಕಾಳಜಿಯನ್ನು ಕೆಣಕಿದ್ದವು. 'ನನ್ನ ರೈತಪರ ಕಾಳಜಿ ಪ್ರಶ್ನಿಸುವವರು, ತಾವೆಷ್ಟು ರೈತರ ಪರವಾಗಿದ್ದೇವೆ ಎಂಬುದನ್ನು ಸಾಬೀತು ಮಾಡಬೇಕು. ಪ್ರೈಮ್‌ಟೈಮ್‌ನಲ್ಲಿ ರೈತರ ಪರ ಸಂವಾದ ಏರ್ಪಡಿಸಿದರೆ ಬಹಿರಂಗ ಚರ್ಚೆಗೆ ನಾನು ಸಿದ್ಧ' ಎನ್ನುವ ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ಅದೇ ಸಮಯದಲ್ಲಿ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿತ್ತು. ಯಶ್ ಹೇಳಿಕೆ ಸಿನಿಮಾ ಪ್ರಚಾರದ ಗಿಮಿಕ್ ಎನ್ನುವ ಟೀಕೆಯೂ ಎದುರಾಗಿತ್ತು. ಹಾಗಾಗಿ "ಇದು ನನ್ನನ್ನು ನಾನು ಪರೀಕ್ಷಿಸಿಕೊಳ್ಳುವ ಕಾಲ. ಜನರ ಮಧ್ಯೆ ನಾನು ಎಷ್ಟರ ಮಟ್ಟಿಗೆ ಇದ್ದೇನೆ ಎನ್ನುವುದು ಗೊತ್ತಾಗಬೇಕಿದೆ" ಎನ್ನುವ ಕಾರಣಕ್ಕೆ ಯಶ್ ಸಿನಿಮಾ ಪ್ರಚಾರ ಮಾಡಲಿಲ್ಲ ಎನ್ನಲಾಗಿತ್ತು.

   ಚಿತ್ರದಿಂದ 10 ಕೋಟಿ ನಷ್ಟ?

  ಚಿತ್ರದಿಂದ 10 ಕೋಟಿ ನಷ್ಟ?

  'ಸಂತು ಸ್ಟ್ರೈಟ್ ಫಾರ್ವರ್ಡ್' 10 ಕೋಟಿ ರೂ. ನಷ್ಟ ಆಗಿತ್ತು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ. ಮಂಜು ಹೇಳಿಕೊಂಡಿದ್ದಾರೆ. ಕಾವೇರಿ ವಿಚಾರದಲ್ಲಿ ಮಾಧ್ಯಮಗಳ ಜೊತೆಗಿನ ಯಶ್ ಮುನಿಸು ಸಿನಿಮಾ ಸೋಲಿಗೆ ಕಾರಣ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಕೆಲವರು ಮಾತ್ರ ಸಿನಿಮಾ ಚೆನ್ನಾಗಿಲ್ಲ. ಹಾಗಾಗಿ ಸಕ್ಸಸ್ ಆಗಲಿಲ್ಲ ಎಂದಿದ್ದರು.

   ಆಂಧ್ರ, ತೆಲಂಗಾಣದಲ್ಲಿ 'ರಾರಾಜು' ಹವಾ

  ಆಂಧ್ರ, ತೆಲಂಗಾಣದಲ್ಲಿ 'ರಾರಾಜು' ಹವಾ

  ನಿರ್ಮಾಪಕ ವಿ. ಎಸ್ ಸುಬ್ಬಾರಾವು 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. 'ಕಿಂಗ್ ಆಫ್ ಕಿಂಗ್ಸ್' ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಹೈದರಾಬಾದ್‌ನಲ್ಲಿ 26ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಸಿನಿಮಾ ಯಾವ ರೀತಿ ಸದ್ದು ಮಾಡುತ್ತೋ ಕಾದು ನೋಡಬೇಕು.

  ಫಾರ್ಮುಲಾ ಕಾರು ರೇಸರ್ ಜೊತೆ ನಟ ಯಶ್: ಯಾರು ಈ ಹ್ಯಾಮಿಲ್ಟನ್?ಫಾರ್ಮುಲಾ ಕಾರು ರೇಸರ್ ಜೊತೆ ನಟ ಯಶ್: ಯಾರು ಈ ಹ್ಯಾಮಿಲ್ಟನ್?

  English summary
  Yash Starrer Kannada movie Santhu Straight Forward has been dubbed and released in Telugu. Know More.
  Friday, October 14, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X