X
ಅಮೂಲ್ಯ

ಅಮೂಲ್ಯ

Actress
ಜೀವನ ಚರಿತ್ರೆ :  ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. 1993ರ ಸೆಪ್ಟೆಂಬರ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರು, ತಾಯಿ ಜಯಮ್ಮನ ಮಡಿಯಲಲ್ಲಿ ಬೆಳೆದರು. ಅಮೂಲ್ಯ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅಮೂಲ್ಯ ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್, ಭರತನಾಟ್ಯ ಹಾಗೂ ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಷ್ಟೇ ಅಲ್ಲದೇ, ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದುಕೊಂಡಿದ್ದಾರೆ.  ಹೀಗೆ ಕಾಲೇಜು ದಿನಗಳಲ್ಲಿ ಕ್ರಿಯಾಶೀಲರಾಗಿದ್ದ ಅಮೂಲ್ಯ ಚಿಕ್ಕ ವಯಸ್ಸಿನಲ್ಲಿಯೇ ಕಿರುತೆರೆಯಲ್ಲಿ ಕಾಣಿಸಿಕೊಂಡರು. ನಂತರ 2001ರಲ್ಲಿ ಪರ್ವ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತ ಲಾಲಿಹಾಡು, ಮಂಡ್ಯ, ಸಜಿನಿ, ಸುಂಟರಗಾಳಿ, ಮಹಾರಾಜ, ನಮ್ಮ ಬಸವ, ಚಂದು ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಪ್ರಸಿದ್ಧಿ ಪಡೆದಿದ್ದ ಅಮೂಲ್ಯ 2007ರಲ್ಲಿ ಬಿಡುಗಡೆಗೊಂಡ 'ಚೆಲುವಿನ ಚಿತ್ತಾರ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಅಭೂತಪೂರ್ವ ಯಶಸ್ಸು ಕಂಡ ಹಿನ್ನಲೆಯಲ್ಲಿ ಅಮೂಲ್ಯ ಅವರ ಸಿನಿಜೀವನಕ್ಕೆ ಬಿಗ್‌ ಬಗ್ರೇಕ್ ಸಿಕ್ಕಿತು.  ಚೆಲುವಿನ ಚಿತ್ತಾರ ಸಿನಿಮಾ ಯಶಸ್ವಿ ನಂತರ ಇವರಿಗೆ ಹಲವು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ದೊರೆತವು. ಬಳಿಕ ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ನಾನು ನನ್ನ ಕನಸು, ಕೃಷ್ಣ ರುಕ್ಕು, ಮಾಸ್ತಿಗುಡಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮದುವೆ: ನಟಿ ಅಮೂಲ್ಯ 2017ರ ಮೇ 12ರಂದು ಆದಿಚುಂಚನಗಿರಿಯಲ್ಲಿ ಉದ್ಯಮಿ ಜಗದೀಶ್‌ ಆರ್ ಚಂದ್ರ ಅವರನ್ನು ವಿವಾಹವಾದರು. ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿರುವ ನಟಿ ಅಮೂಲ್ಯ, ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ತಮ್ಮ ಮಕ್ಕಳಿಗೆ ಅಥರ್ವ್ ಹಾಗೂ ಆದವ್ ಅಂತ ಹೆಸರಿಟ್ಟಿದ್ದಾರೆ. 
ಮುಂದೆ ಓದಿ

ಅಮೂಲ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕವಿರಾಜ್ 22 Nov 2019
ಯೋಗರಾಜ್ ಭಟ್ 01 Sep 2017
ನಾಗಶೇಖರ್ 12 May 2017
ಅನಿಲ್ ಕುಮಾರ್ 26 Feb 2016

ಅಮೂಲ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಮೂಲ್ಯ

ಹೆಸರು ಅಮೂಲ್ಯ
ಹುಟ್ಟಿದ ದಿನ 14 Sep 1993
ವಯಸ್ಸು 33
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಮೂಲ್ಯ ಆಸ್ತಿ

ಆಸ್ತಿ

ಅಮೂಲ್ಯ ಪ್ರಸಿದ್ದಿ

ಅಮೂಲ್ಯ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+