X
ರುಸ್ತುಂ

ರುಸ್ತುಂ

Action | 28 Jun 2019 |
Kannada

2.5 /5 Users

4 /5 Filmibeat

ರುಸ್ತುಂ ಕಥೆ

ಹಿನ್ನಲೆ - ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ `ರುಸ್ತುಮ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ,ರಚಿತಾ ರಾಮ್, ಶ್ರದ್ಧಾ ಶ್ರೀನಾಥ್,ಮಯೂರಿ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯಿ ಮತ್ತು RJ ರೋಹಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜಯಣ್ಣ - ಭೋಗೆಂದ್ರ ಬಂಡವಾಳ ಹೂಡಿದ್ದರೆ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.ಚಿತ್ರದ ಮುಹೂರ್ತ ಎಪ್ರಿಲ್ 24,2018 ರಂದು ಡಾ.ರಾಜಕುಮಾರ್ ಜನ್ಮದಿನದಂದು ನೇರವೇರಿತು.2019 ಮಾರ್ಚ್‌ನಲ್ಲಿ ಶಿವಣ್ಣ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯ ಗೀತೆಯೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಯಿತು.ಒಬ್ಬ ನಿಷ್ಟಾವಂತ ಪೋಲಿಸ್ ಅಧಿಕಾರಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರಕಥೆ - ಚಿತ್ರದ ಕಥೆ ಬಿಹಾರನಲ್ಲಿ ನೆಡೆಯುತ್ತದೆ. ಒಬ್ಬ ನಿಷ್ಟಾವಂತ ಐಎಎಸ್ ಅಧಿಕಾರಿ ಒಂದು ದೊಡ್ಡ ಹಗರಣ ಹಿಂದೆ ಬೆನ್ನತ್ತುತ್ತಾನೆ. ಕೊನೆಗೆ ಈ ಎಲ್ಲಾ ಅವ್ಯವಹಾರಗಳ ಹಿಂದೆ ಹೋಮ್ ಮಿನಿಸ್ಟರ್ ಮತ್ತು ಅವನ ಪುತ್ರ ಇರುವುದು ತಿಳಿಯುತ್ತದೆ. ಇನ್ನೇನು ಈ ಕೇಸಿಗೆ ಒಂದು ಅಂತ್ಯ ಹಾಡಬೇಕೆನ್ನುಷ್ಟರಲ್ಲಿ ಐಎಎಸ್ ಆಧಿಕಾರಿಯೇ ನಿಗೂಡವಾಗಿ ಕಾಣೆಯಾಗುತ್ತಾನೆ.ನಂತರ ಅವರ ಸಹಾಯಕ್ಕೆ ಅವರ ಮನೆಯ ಪಕ್ಕದ ಅಭಿಷೇಕ್ ಬರುತ್ತಾನೆ. ಈ ಅಭಿಷೇಕ್ ಯಾರು , ಆತನ ಹಿನ್ನಲೆಯೇನು ಮತ್ತು ಐಎಎಸ್ ಅಧಿಕಾರಿ ಕಾಣೆಯಾಗುವುದರ ಹಿಂದೆ ಯಾರ ಕೈವಾಡವಿದೆ ಎಂಬುದು ಚಿತ್ರದ ಮುಂದಿನ ಕಥೆ.
Read More

ರುಸ್ತುಂ ಕಲಾವಿದರು ಮತ್ತು ಸಿಬ್ಬಂದಿ

ರುಸ್ತುಂ ಕ್ರೂ ಮಾಹಿತಿ

ನಿರ್ದೇಶಕ ರವಿ ವರ್ಮ
ಸಿನಿಮಾಟೋಗ್ರಫಿ ಮಹೇಂದ್ರ ಸಿಂಹ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ ಜಯಣ್ಣ, ಬೋಗೆಂದ್ರ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರುಸ್ತುಂ ವಿಮರ್ಶಕರ ವಿಮರ್ಶೆ

ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಬಹುಶಃ ಸಿಕ್ಕಾಪಟ್ಟೆ ಆಕ್ಷನ್ ಇರಬಹುದು. ಅದೇನ್ ಮಾಡಿರ್ತಾರೋ ಅಂದುಕೊಂಡು ಹೋದವರಿಗೆ ರುಸ್ತುಂ ಸಿನಿಮಾ ಖಂಡಿತಾ ನಿರಾಸೆ ಮಾಡಲ್ಲ. ಸಖತ್ ಕಿಕ್ ಕೊಡುವುದರ ಜೊತೆಗೆ ಇಷ್ಟವಾಗುತ್ತೆ. ಆರಂಭದಲ್ಲಿ ಜಿಲ್ಲಾಧಿಕಾರಿ ಕಾಣೆ, ಅದರ ಹಿಂದೆ ಗೃಹಮಂತ್ರಿ ಕೈವಾಡ. ಯಾವುದೋ ಹಗರಣ...ಹೀಗೆ ಶುರುವಾಗುವ ರುಸ್ತುಂ ಕಂಪ್ಲೀಟ್ ಆಕ್ಷನ್ ಚಿತ್ರ. ಹಾಗಂತ ಫ್ಯಾಮಿಲಿ ನೋಡುವಂತಹ ಸಿನಿಮಾ ಅಲ್ಲ ಎಂದುಕೊಳ್ಳಬೇಡಿ. ಕೌಟುಂಬಿಕ ಮಿಶ್ರಿತ ಆಕ್ಷನ್ ಚಿತ್ರ. ಜಿಲ್ಲಾಧಿಕಾರಿ ಯಾಕೆ ಕಾಣೆ ಆಗ್ತಾನೆ, ಯಾರು ಕಿಡ್ನಾಪ್ ಮಾಡಿದ್ದು, ಆ ಕುಟುಂಬಕ್ಕೆ ಜೊತೆಯಾಗುವ ಶಿವಣ್ಣ ಯಾರು, ಆ ಡಿ.ಸಿಗೂ ಶಿವಣ್ಣನಿಗೂ ಏನು ಸಂಬಂಧ ಎಂಬ ಕುತೂಹಲಗಳೊಂದಿಗೆ ಇಂಟ್ರೆಸ್ಟಿಂಗ್ ಆಗಿ ಮೊದಲಾರ್ಧ ಮುಗಿಸಿದ್ದಾರೆ ನಿರ್ದೇಶಕರು. ನಿಧಾನಗತಿಯ ಆರಂಭ ಸ್ವಲ್ಪ ಕಿರಿಕಿರಿ ಉಂಟು ಮಾಡಿದ್ರು ನಂತರ ಪ್ರೇಕ್ಷಕರ ಜೊತೆ ಎಂಗೇಜ್ ಆಗುತ್ತೆ. ಆರಂಭದಲ್ಲಿ ಸ್ವಲ್ಪ ತಾಳ್ಮೆಯಿಂದ ಕುಳಿತುಕೊಂಡರೇ ಮುಂದೆ ಸಾಗುತ್ತಿದ್ದಂತೆ ರುಸ್ತುಂ ಚಿತ್ರವನ್ನ ಎಂಜಾಯ್ ಮಾಡಬಹುದು. ಸೆಕೆಂಡ್ ಹಾಫ್, ಕ್ಲೈಮ್ಯಾಕ್ಸ್ ಬರೋವತ್ತಿಗೆ ಆರಂಭವೇ ನೆನಪಲ್ಲಿ ಇರಲ್ಲ. ಬಿಹಾರ್ ಕಾ ಶೇರ್ ಜೊತೆಗೆ ಹೊರಬರಬಹುದು. ಸೋ, ಶಿವಣ್ಣ ಎನರ್ಜಿಟಿಕ್ ಪೊಲೀಸ್ ಅವತಾರ ನೋಡಲು ರುಸ್ತುಂ ಮಿಸ್ ಮಾಡಿಕೊಳ್ಳಬೇಡಿ.

ರುಸ್ತುಂ ಪಾಟ್ಲುಗಳು

ರುಸ್ತುಂ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Best vampire movie ever!!! Edward Cullen is the hottest vampire in history, and they make a stunning couple. They have chemistry and belong together. Excellent movie

×
2.5 /5 Your Rating

ರುಸ್ತುಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+