twitter
    X
    Home ಚಲನಚಿತ್ರಗಳ ಒಳನೋಟ

    2022ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಟಾಪ್ 10 ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Published: Monday, December 26, 2022, 12:20 PM [IST]

    ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು ಪರಭಾಷೆಯ ಚಿತ್ರಗಳಿಗೆ ಪೈಪೋಟಿ ಕೊಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 2022ರಲ್ಲಿ ತೆರೆಕಂಡ ಕನ್ನಡದ ಸಿನಿಮಾಗಳು ಬೇರೆ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿವೆ. ಹೀಗಾಗಿ ಕನ್ನಡದ ನಟ-ನಟಿಯರಿಗೆ ಬೇಡಿಕೆಯೂ ಹೆಚ್ಚಾಗಿದೆ. ಕೆಜಿಎಫ್ ನಿಂದ ಹಿಡಿದು ಕಾಂತರಾದವರೆಗೆ ಎಲ್ಲ ಸಿನಿಮಾಗಳು ಹಿಟ್ ಆಗಿವೆ. ಹಿಟ್ ಆಗುವುದರ ಜೊತೆ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಕಂಡಿವೆ. ಹಾಗಾದರೆ, 2022ರಲ್ಲಿ ಅತಿಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಕೆಜಿಎಫ್: ಚಾಪ್ಟರ್ 2

    ಕೆಜಿಎಫ್: ಚಾಪ್ಟರ್ 2

    1

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ 2022 ಏಪ್ರಿಲ್ 14ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಇದು ಕೆಜಿಎಫ್ ಚಾಪ್ಟರ್ 1ನ ಮುಂದುವರೆದ ಭಾಗ. ರಾಕಿ ಭಾಯ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು. ಕನ್ನಡದ ಹೆಮ್ಮೆಯ ಕೆಜಿಎಫ್-2  ಸಿನಿಮಾ 1,250 ಕೋಟಿ ರೂ. ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. 

    ಕಾಂತಾರ

    ಕಾಂತಾರ

    2

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು.   ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು.  ಕಾಂತಾರದ ಹಿಂದಿ ವರ್ಷನ್‌ ಅಕ್ಟೋಬರ್ 14ರಂದೇ ತೆರೆಕಂಡಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಕಾಂತಾರ ಸಿನಿಮಾ 450 ಕೋಟಿ ರೂ. ಗಳಿಸಿದೆ.  

    ವಿಕ್ರಾಂತ್ ರೋಣ

    ವಿಕ್ರಾಂತ್ ರೋಣ

    3

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಜಾಕ್ವೆಲಿನ್ ಫೆರ್ನಾಂಡಿಸ್ ಈ ಸಿನಿಮಾದ 'ರಾ ರಾ ರಕ್ಕಮ್ಮ' ಹಾಡಿಗೆ ಹೆಜ್ಜೆ ಹಾಕಿದ್ದರು. ದುಬೈನ ಬುರ್ಜ್ ಖಲೀಫಾದಲ್ಲಿ  ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು.  3D, 2Dಯಲ್ಲಿ ಕೂಡ ಚಿತ್ರ ರಿಲೀಸ್ ಆಗಿತ್ತು. ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ವಿಕ್ರಾಂತ್ ರೋಣ ಮೊದಲ ದಿನವೇ 35 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ವಿಕ್ರಾಂತ್ ರೋಣ ಸಿನಿಮಾ 2022ರ ಜುಲೈ 28ರಂದು ಬಿಡುಗಡೆಯಾಗಿತ್ತು. ವಿಕ್ರಾಂತ್ ರೋಣ ಸಿನಿಮಾ 158 ರಿಂದ 210 ಕೋಟಿ ರೂ. ಗಳಿಕೆ ಕಂಡಿದೆ.  

    ಜೇಮ್ಸ್

    ಜೇಮ್ಸ್

    4

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಬಾರಿ ನಾಯಕನಾಗಿ ನಟಿಸಿರುವ ಸಿನಿಮಾ ಜೇಮ್ಸ್. ಈ ಸಿನಿಮಾವನ್ನು  ಬಹದ್ದೂರ್ ಚೇತನ್ ನಿರ್ದೇಶಿಸಿದ್ದಾರೆ. ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಜೇಮ್ಸ್ ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು.  ಜೇಮ್ಸ್ ಬಿಡುಗಡೆಯಾದ ಮೊದಲ ದಿನದಲ್ಲೇ 28 ರಿಂದ 32 ರೂ ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಜೇಮ್ಸ್ ಸಿನಿಮಾ 2022ರ ಮಾರ್ಚ್ 17ರಂದು ಬಿಡುಗಡೆಯಾಗಿತ್ತು. ಪುನೀತ್ ರಾಜ್‍ಕುಮಾರ್ ಕೊನೆಯ ಬಾರಿ ನಾಯಕನಾಗಿ ಈ ಸಿನಿಮಾ 151 ಕೋಟಿ ರೂ. ಗಳಿಕೆ ಕಂಡಿದೆ.  

    777 ಚಾರ್ಲಿ

    777 ಚಾರ್ಲಿ

    5

    ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಐದು ಭಾಷೆಗಳಲ್ಲೂ ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದರು. 777 ಚಾರ್ಲಿ 105 ಕೋಟಿ ರೂ. ಕಲೆಕ್ಷನ್ ಮಾಡಿದೆ. 777 ಚಾರ್ಲಿ ಚಿತ್ರ 2022ರ ಜೂನ್ 10ರಂದು ಬಿಡುಗಡೆಯಾಗಿತ್ತು. 

    ಗಾಳಿಪಟ 2

    ಗಾಳಿಪಟ 2

    6

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ 2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ.ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಟಿಸಿದ್ದರೆ, ಅರ್ಜುನ ಜನ್ಯ ಸಂಗೀತ ನೀಡಿದ್ದರು. ಈ ಸಿನಿಮಾದ ಮೇಲೆ ನೀರಿಕ್ಷೆಗಳು ಹೆಚ್ಚಾಗಿದ್ದು, ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಆದರೆ, ಈ ಸಿನಿಮಾ ಬಿಪಿ=ಬಾಕ್ಸಾಫೀಸ್ ನಲ್ಲಿ ಹೆಚ್ಚ್ ಗಳಿಕೆ ಕಂಡಿಲ್ಲ. ಈ ಸಿನಿಮಾ 35 ಕೋಟಿ ರೂ. ಗಳಿಕೆ ಕಂಡಿದೆ.  

    ಗಂಧದ ಗುಡಿ

    ಗಂಧದ ಗುಡಿ

    7

    ಅಮೋಘವರ್ಷ ನಿರ್ದೇಶನದಲ್ಲಿ  ಮೂಡಿಬಂದಿರುವ `ಗಂಧದ ಗುಡಿ'ಯಲ್ಲಿ ಪುನೀತ್ ರಾಜ್‍ಕುಮಾರ್ ಕನ್ನಡ ನಾಡಿನ ನೈಸರ್ಗಿಕ ಸಂಪತ್ತಿನ ಪರಿಚಯ ಮಾಡಿಸಿದ್ದರು. ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಅಶ್ವನಿ ಪುನೀತ್ ರಾಜ್‍ಕುಮಾರ್ ನಿರ್ಮಿಸಿದ್ದರು. ಕರ್ನಾಟಕದ ವನ್ಯ ಸಂಪತ್ತಿನ ಪರಿಚಯ ನೀಡಿದ್ದ ಈ ಚಿತ್ರಕ್ಕೆ ಡಾ. ರಾಜ್‍ಕುಮಾರ್ ಅವರ ಚಿತ್ರದ ಹೆಸರಾದ `ಗಂಧದ ಗುಡಿ' ಎಂದು ಹೆಸರಿಡಲಾಗಿತ್ತು. 'ಗಂಧದ ಗುಡಿ' ಪುನೀತ್ ಅವರ ಕನಸಿನ ಕೂಸಾಗಿತ್ತು. 2022ರ ಅಕ್ಟೋಬರ್ 28ರಂದು ಈ ಸಿನಿಮಾ ಬಿಡುಗಡೆಯಾಗಿ 30 ಕೋಟಿ ರೂ. ಗಳಿಕೆ ಮಾಡಿತ್ತು. 

    ಲವ್ ಮಾಕಟೇಲ್ 2

    ಲವ್ ಮಾಕಟೇಲ್ 2

    8

    ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲವ್ ಮಾಕ್ಟೇಲ್ ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಯಕಿರಾಗಿ ರೇಚೆಲ್ ಡೇವಿಡ್, ಸುಶ್ಮಿತಾ ಗೌಡ, ಅಮೃತಾ ಅಯ್ಯಂಗಾರ್ ಮತ್ತು ರಚನಾ ನಟಿಸಿದ್ದಾರೆ. ಹಾಗೇ ಕೆಲ ಫ್ಲ್ಯಾಶಬ್ಯಾಕ್ ಸನ್ನಿವೇಶಗಳಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಒಂದನೇ ಭಾಗ ನಿಧಿಯ ವಿಷಾದಕರ ನಿಧನದಲ್ಲಿ ಮುಕ್ತಾಯವಾಗುತ್ತದೆ. ಲವ್ ಮಾಕ್ಟೇಲ್ 2 ಚಿತ್ರದಲ್ಲಿ ನಿಧಿಯ ನೆನಪುಗಳ ದೋಣಿಯಲ್ಲಿ ಸಾಗುತ್ತಿರುವ ಆದಿಯ ಮುಂದಿನ ಜೀವನದ ಚಿತ್ರವಿದೆ. ಈ ಸಿನಿಮಾ 13 ಕೋಟಿ ರೂ. ಗಳಿಸಿತ್ತು. 

    ಲಕ್ಕಿ ಮ್ಯಾನ್

    ಲಕ್ಕಿ ಮ್ಯಾನ್

    9

    ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರೀತಿ, ಪ್ರೇಮ, ಸ್ನೇಹ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಇಂದಿನ ಯುವಕರ ಒದ್ದಾಟ, ಪೀಕಲಾಟ, ತೊಳಲಾಟ, ಎಲ್ಲವನ್ನೂ ನಿರ್ದೇಶಕ ನಾಗೇಂದ್ರ ಪ್ರಸಾದ್ ಬ್ಯೂಟಿಫುಲ್ ಆಗಿ ತೆರೆಮೇಲೆ ಕಟ್ಟಿಕೊಟ್ಟಿದ್ದರು. ಈ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ 9.7 ಕೋಟಿ ರೂ. ಗಳಿಸಿತ್ತು. 

     

    ಗುರು ಶಿಷ್ಯರು

    ಗುರು ಶಿಷ್ಯರು

    10

    ಶರಣ್ ನಾಯಕನಾಗಿ ನಟಿಸಿರುವ ಗುರು ಶಿಷ್ಯರು ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. 1995ರಲ್ಲಿ ನಡೆದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶರಣ್ ಪಿಟಿ ಶಿಕ್ಷಕನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ 6.47 ಕೋಟಿ ರೂ. ಗಳಿಕೆ ಮಾಡಿತ್ತು. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X