ಕೋಟ್ಯಾಧಿಪತಿ: ಹಾಟ್ ಸೀಟ್ ನಲ್ಲಿ ಆಡುವವರ ಕಷ್ಟ ಯಾರಿಗೊತ್ತು?

ನಮ್ಮ ಬುದ್ದಿ ನಮ್ಮ ಕೈಯಲ್ಲಿ ಇಟ್ಟುಕೊಂಡು ಆಡಲು ಕೂರುವ ಸ್ಪರ್ಧಾಳುಗಳಿಗೆ ಹಾಟ್ ಸೀಟ್ ಮೇಲೆ ಕೂತಾಗ ತೀರ ಸಣ್ಣ ಮಕ್ಕಳಿಗೆ ಕೇಳುವ ಪ್ರಶ್ತ್ನೆ ಕೂಡಾ ಕಷ್ಟವೆನಿಸಬಹುದು. ವಿಜಯಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದವರೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಹೇಳುವ ಹಾಗೆ "ಮನೀಲಿ ಕೂತಾಗ ಇಷ್ಟು ಸರಳ ಪ್ರಶ್ತ್ನೆಗೆ ಲೈಫ್ ಲೈನ್ ಬಳಸಿಕೊಳ್ಳುತ್ತಾರಲ್ವಾ, ತಪ್ಪು ಉತ್ತರ ಹೇಳುತ್ತಾರಲ್ವಾ ಅನ್ಕೊತೀವಿ ಆದರೆ ಹಾಟ್ ಸೀಟ್ ನಲ್ಲಿ ಕೂತಾಗ ಗೊತ್ತಾಗುತ್ತೆ ಎಷ್ಟು ನರ್ವಸ್ ಆಗುತ್ತೆ ಎಂದು".
ಉದಾಹರಣೆಗೆ ಕೆಲ ದಿನಗಳ ಹಿಂದೆ ಬಂದ ಕಾರ್ಯಕ್ರಮವೊಂದರಲ್ಲಿ ಮೂರು ಸಾವಿರ ರೂಪಾಯಿಗೆ ಮಹಿಳೆಯೊಬ್ಬರಿಗೆ ಪುನೀತ್ ಕೇಳಿದ ಪ್ರಶ್ತ್ನೆ ಏನೆಂದರೆ "ಇದರಲ್ಲಿ ಯಾವ ನಾಣ್ಯವನ್ನು ರಿಸರ್ವ್ ಬ್ಯಾಂಕ್ ಮುದ್ರಿಸುವುದಿಲ್ಲ" ಎಂದು. ಪುನೀತ್ ನೀಡಿದ option: ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಮೂವತ್ತು ರೂಪಾಯಿ. ಆ ಪ್ರಶ್ತ್ನೆಗೆ ಮಹಿಳೆ ಎರಡು ರೂಪಾಯಿ ಎಂದು ಉತ್ತರಿಸಿ ಏನೂ ಗೆಲ್ಲಲಾಗದೆ ಸ್ಪರ್ಧೆಯಿಂದ ನಿರ್ಗಮಿಸಿದರು.
ಇಲ್ಲಿ ಆ ಮಹಿಳೆಗೆ ಮೂವತ್ತು ರೂಪಾಯಿ ನಾಣ್ಯವನ್ನು ಆರ್ಬಿಐ ಮುದ್ರಿಸುತ್ತಿಲ್ಲ ಎಂದು ತಿಳಿದಿದ್ದರೂ ಆ ಸಮಯದಲ್ಲಿ confuse ಆಗಿ ತಪ್ಪು ನೀಡಿರಬಹುದು ಅಲ್ವೇ?. ಸ್ಪರ್ಧೆಯ ಮಿನಿಮಮ್ ಮೊತ್ತವಾದ ಹತ್ತು ಸಾವಿರ ರೂಪಾಯಿ ಕೂಡಾ ಗೆಲ್ಲಲಾಗದೆ ಸೋತವರಲ್ಲಿ ಇದುವರೆಗೆ ಮೂರು ನಾಲ್ಕು ಜನರಿದ್ದಾರೆ. ಸಾಮಾಜಿಕ ಜ್ಞಾನದಲ್ಲಿ ಎಂಥಹ ಪ್ರಳಯಾಂತಕನಾದರೂ ನರ್ವಸ್ ಎನ್ನುವುದು ಮಾನವ ಸಹಜ ಧರ್ಮವಲ್ಲವೇ? 90 -99 ರನ್ ಒಳಗೆ ಅದೆಷ್ಟು ಬಾರಿ ನಮ್ಮ ರಾಹುಲ್ ದ್ರಾವಿಡ್ ಕಳಪೆ ಚೆಂಡಿಗೆ ಬಲಿಯಾಗಲಿಲ್ಲವೇ?
ಹಾಗಾಗಿ ಕಾರ್ಯಕ್ರಮದಲ್ಲಿ ಬರುವ ಪ್ರಶ್ತ್ನೆಗಳು ಬಹಳ ಸರಳ ಎಂದು ಟಿವಿ ಮುಂದೆ ಕೂತ ನಮ್ಮಂತಹ ವೀಕ್ಷಕರಿಗೆ ಅನಿಸಿದರೂ, ಸ್ಪರ್ಧೆಯಲ್ಲಿ ಭಾಗವಹಿಸುವವರ ನಾಡಿಮಿಡಿತ ಅರಿತೆ ವಾಹಿನಿ ಈ ರೀತಿಯ ಪ್ರಶ್ತ್ನೆ ರೂಪಿಸಿದೆ ಎಂದು ಅನಿಸುವುದಿಲ್ಲವೇ?


Click it and Unblock the Notifications











