For Quick Alerts
  ALLOW NOTIFICATIONS  
  For Daily Alerts

  ರಾಜ ರಾಣಿ ಜತೆಗೆ ಪ್ರೀತಿಯಿಂದ ರಮೇಶ್ ಅರವಿಂದ್

  By Rajendra
  |

  ಕನ್ನಡ ಕಿರುತೆರೆಗೆ ಮತ್ತೊಬ್ಬ ನಾಯಕ ನಟನ ಆಗಮನವಾಗಿದೆ. ಈ ಟಿವಿ ಕನ್ನಡ ವಾಹಿನಿ ಮೂಲಕ ನಟ ರಮೇಶ್ ಅರವಿಂದ್ ಕಿರುತೆರೆಗೆ ಲಗ್ಗೆಯಿಟ್ಟಿದ್ದಾರೆ. ಕಾರ್ಯಕ್ರಮದ ಹೆಸರು 'ರಾಜ ರಾಣಿ ರಮೇಶ್'. ಒಬ್ಬರನ್ನೊಬ್ಬರು ಇಷ್ಟಪಡುವ ಜೋಡಿಗಳಿಗಾಗಿ ರೂಪಿಸಿರುವ ಕುಟುಂಬ ಪ್ರಧಾನ ಕಾರ್ಯಕ್ರಮ ಇದಾಗಿದೆ.

  ಆಗಸ್ಟ್ 15ರಿಂದ ಪ್ರಸಾರ ಪ್ರಾರಂಭಿಸಿರುವ ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 9.30ಕ್ಕೆ ನಿಮ್ಮ ನೆಚ್ಚಿನ ಈ ಟಿವಿ ಕನ್ನಡದಲ್ಲಿ ಪ್ರತ್ಯಕ್ಷವಾಗಲಿದೆ. ನಟನೆ, ನಿರ್ದೇಶನ, ಸಂಭಾಷಣೆ ಹೀಗೆ ನೂರೆಂಟು ರಗಳೆಗಳ ನಡುವೆ ಪ್ರೀತಿಯಿಂದ ರಮೇಶ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

  ಏತನ್ಮಧ್ಯೆ ರಮೇಶ್ ಅರವಿಂದ ಎರಡು ಚಿತ್ರಗಳನ್ನು ಮುಗಿಸಿದ್ದಾರೆ. ಒಂದು 'ರಂಗಪ್ಪ ಹೋಗ್ಬಿಟ್ನಾ' ಮತ್ತು 'ಶಾಕ್'. ಹಾಸ್ಯಪ್ರಧಾನ 'ರಂಗಪ್ಪ ಹೋಗ್ಬಿಟ್ನಾ' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದವರು ಎಂ ಎಲ್ ಪ್ರಸನ್ನ. 'ಶಾಕ್' ಚಿತ್ರವನ್ನು ರಾಜಶೇಖರ್ ನಿರ್ದೇಶಿಸಿದ್ದಾರೆ. 'ಶಾಕ್' ಚಿತ್ರದಲ್ಲಿ ರಮೇಶ್ ಸೈಕೋ ಪಾತ್ರದಲ್ಲಿ ಕಾಣಿಸಲಿದ್ದಾರೆ. ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ರಮೇಶ್ ಈಗ ಮನೆಮನೆಗೆ ತಲುಪುತ್ತಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X