»   » ಬಿಡದಿ ಫಿಲ್ಮ್ ಸಿಟಿಯಲ್ಲಿ ಜೀ ಕನ್ನಡ ಸಂಗೀತ ಸಮರ

ಬಿಡದಿ ಫಿಲ್ಮ್ ಸಿಟಿಯಲ್ಲಿ ಜೀ ಕನ್ನಡ ಸಂಗೀತ ಸಮರ

Posted By:
Subscribe to Filmibeat Kannada

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಸರಿಗಮಪ ಚಾಲೆಂಜ್' ಸಂಗೀತ ಸಮರ ಸರಣಿ ಯಶಸ್ವಿಯಾಗಿ ಮುಂದುವರಿದಿದ್ದು ಈ ನೂತನ ಸಂಗೀತ ಸರಣಿ ಈಗಾಗಲೇ ಮಹತ್ವದ ಘಟ್ಟ ತಲುಪಿ ತೀರ್ವ ಕುತೂಹಲ ಕೆರಳಿಸಿದೆ. ಈ ನಡುವೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಸರಿಗಮಪ ಚಾಲೆಂಜ್ ಸಂಗೀತ ಸಮರ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಹಾಸನ, ಮೈಸೂರು, ಹುಬ್ಬಳ್ಳಿ ಹಾಗೂ ದಾವಣಗೆರೆ ನಂತರ ಈ ಬಾರಿ ಬೆಂಗಳೂರು ಹೊರವಲಯದ ಬಿಡದಿ ಸಮೀಪದಲ್ಲಿರುವ ಇನೋವೆಟಿವ್ ಫಿಲಿಂ ಸಿಟಿಯಲ್ಲಿ ಆಯೋಜಿಸಲಾಗಿದೆ. ಇನೋವೆಟಿವ್ ಫಿಲಿಂ ಸಿಟಿ ಆವರಣದಲ್ಲಿ ಮಾರ್ಚ್ 31ರ ಬುಧವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಕಳೆದ ಹಲವು ತಿಂಗಳುಗಳಿಂದ ತಮ್ಮ ಅದ್ಭುತ ಗಾಯನದ ಮೂಲಕ ರಾಜ್ಯದ ಮನೆಮಾತಾಗಿರುವ ಯುವ ಗಾಯಕ ಗಾಯಕಿಯರು ತಮ್ಮ ಸ್ವರಮಾಧುರ್ಯವನ್ನು ಇಲ್ಲಿ ಅನಾವರಣ ಮಾಡಲಿದ್ದಾರೆ. ನಾಡಿನ ಹೆಸರಾಂತ ಗಾಯಕ, ಗಾಯಕಿಯರಾಯರಾದ ರಾಜೇಶ್ ಕೃಷ್ಣನ್, ನಂದಿತಾ, ಅರ್ಚನಾ ಉಡುಪ ಹಾಗೂ ಹೇಮಂತ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತೋರ್ವ ಜನಪ್ರಿಯ ಗಾಯಕಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada