For Quick Alerts
  ALLOW NOTIFICATIONS  
  For Daily Alerts

  ಟಿವಿ9ನಲ್ಲಿ ರವಿ, ದರ್ಶನ್ ನಡುವೆ ಮಾತಿನ ಚಕಮಕಿ

  By Rajendra
  |
  "ಭೀಮಾ ತೀರದ ಹಂತಕರ ಬಗ್ಗೆ ಪುಸ್ತಕ ಬರೆದಿದ್ದೀರಲ್ಲಾ ಅದರಿಂದ ಬಂದ ದುಡ್ಡಲ್ಲಿ ಎಷ್ಟು ಅವರ ಫ್ಯಾಮಿಲಿಗೆ ಕೊಟ್ಟಿದ್ದೀರಿ. ಯಾಕ್ ಸಾರ್ ಅವನನ್ನು (ಅಣಜಿ) ಹಿಂಡ್ತಿದ್ದೀರಾ ಬಿಟ್ ಬಿಡಿ ಸಾರ್. ನಿಮಗೆ ದುಡ್ಡು ಬೇಕಾ ನನ್ನ ಯಾವುದೋ ಫ್ರಾಫರ್ಟಿ ಮಾರಿ ಕೊಡ್ತೀನಿ. ಅವನು ಸಿಕ್ಕಾಪಟ್ಟೆ ಸಾಲ ಮಾಡಿದ್ದಾನೆ. ಬಿಟ್ ಬಿಡಿ ಸಾರ್" ಎಂದು ಭಾವುಕರಾಗಿ ಟಿವಿ 9 ನೇರ ಪ್ರಸಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.

  'ಭೀಮಾ ತೀರದ' ಜನಕ್ಕೆ, ಇಂಡಿ ತಾಲೂಕಿನ ಸಂತ್ರಸ್ತರಿಗೆ ಹಾಗೂ ಆ ಭಾಗದ ಜನರಿಗೆ ಆರ್ಥಿಕ ಸಹಾಯ ಮಾಡಿ ಎಂಬ ಮಾತನ್ನು ರವಿ ಬೆಳಗೆರೆ ಹೇಳಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಮೇಲಿನಂತೆ ಉತ್ತರ ನೀಡಿದರು. "ಅಣಜಿ ಎಷ್ಟು ಸಾಲದಲ್ಲಿದ್ದಾರೆ. ತಿಂಗಳಿಗೆ ಎಷ್ಟು ಬಡ್ಡಿ ಕೊಡ್ತಿದ್ದಾರೆ ಮೊದಲು ಅವನನ್ನು (ಅಣಜಿ) ಕೇಳಿ" ಎಂದು ನೇರಾನೇರವಾಗಿ ಹೇಳಿದರು.

  ಟಿವಿ9 ಸ್ಟುಡಿಯೋದಲ್ಲಿದ್ದ ದುನಿಯಾ ವಿಜಯ್ ಕೂಡ ದರ್ಶನ್ ಧ್ವನಿಗೆ ಧ್ವನಿಗೂಡಿಸಿದರು. 'ಹೆಂಡತಿಗೆ ಹೊಡೆದವರು, ಅವಿವೇಕಿಗಳು' ಎಂಬ ರವಿ ಬೆಳಗೆರೆ ಮಾತುಗಳೂ ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದವು. "ನಮ್ಮ ಹೆಂಡ್ತೀಗೆ ನಾವು ಹೊಡೆದಿದ್ದೀವಿ ಸ್ವಾಮಿ. ಪಕ್ಕದಲ್ಲಿ ಕೂತವರ ಹೆಂಡತಿಗೇನು ಹೊಡೀಲಿಲ್ಲ ಅಲ್ವ. ಅದಕ್ಯಾಗೆ ನೀವ್ ಬೇಜಾರಾಗ್ತೀರಾ ಸ್ವಾಮಿ" ಎಂದು ರವಿ ಬೆಳಗೆರೆ ಅವರನ್ನು ದರ್ಶನ್ ಪ್ರಶ್ನಿಸಿ ಫೋನನ್ನು ಕಟ್ ಮಾಡಿದರು. (ಒನ್‌ಇಂಡಿಯಾ ಕನ್ನಡ)

  English summary
  Challenging Star Darshan and journalist Ravi Belagere exchange tense words over Kannada film Bheema Theeradalli plagiarism report on TV 9 Kannada news channel. The two spoke intensely for a few minutes over phone
  Tuesday, April 10, 2012, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X