»   » ''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

Posted By:
Subscribe to Filmibeat Kannada
Bigg Boss Kannada Season 5 : ಜಗನ್ ನ ನೋಡಿದ್ರೆ ಆಗಲ್ಲ ಅಂದ್ಲು ಈ ಹುಡುಗಿ

'ಬಿಗ್ ಬಾಸ್' ಕಾರ್ಯಕ್ರಮ ಮೂರು ವಾರ ಮುಗಿಸಿ ಇದೀಗ ನಾಲ್ಕನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮದಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರೇಕ್ಷಕರಿಂದ ಪರ ವಿರೋಧದ ಮಾತು ಕೇಳಿ ಬರುತ್ತಿದೆ.

ಪ್ರತಿ ದಿನ 8 ಗಂಟೆಗೆ ಟಿವಿ ಮುಂದೆ ಕೂರುವ ಜನ ಕಾರ್ಯಕ್ರಮದ ಬಗ್ಗೆ ತಮ್ಮದೆ ಆದ ಅಭಿಪ್ರಾಯ ಹೊಂದಿರುತ್ತಾರೆ. ಈಗ ಅದೇ ರೀತಿ 'ಬಿಗ್ ಬಾಸ್' ಕಾರ್ಯಕ್ರಮದ ಫ್ಯಾನ್ ಆಗಿರುವ ಒಬ್ಬ ಯುವತಿ ಅದರ ಬಗ್ಗೆ ಯೂ ಟ್ಯೂಬ್ ನಲ್ಲಿ ಮಾತನಾಡಿದ್ದಾರೆ. ವಿಶೇಷ ಅಂದರೆ ಈ ಹುಡುಗಿಯ ವಿಡಿಯೋ ಈಗ ಯೂ ಟ್ಯೂಬ್ ನಲ್ಲಿ 4ನೇ ಟ್ರೆಂಡಿಂಗ್ ನಲ್ಲಿದೆ. ಮುಂದೆ ಓದಿ...

4 ನೇ ಟ್ರೆಂಡಿಂಗ್ ವಿಡಿಯೋ

'ಬಿಗ್ ಬಾಸ್' ಬಗ್ಗೆ ಅನೇಕರು ಯೂ ಟ್ಯೂಬ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ, ಅದರಲ್ಲಿ ಅಂತ ವಿಶೇಷ ಏನು ಇಲ್ಲ. ಆದರೆ ಈ ಹುಡುಗಿಯ ವಿಡಿಯೋ ಮಾತ್ರ ಇದೀಗ ಯೂ ಟ್ಯೂಬ್ ನಲ್ಲಿ 4ನೇ ಟ್ರೆಂಡಿಂಗ್ ನಲ್ಲಿದೆ. ಸೋ, ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.

ಜಗನ್ ಅವರನ್ನು ನೋಡುವುದಕ್ಕೆ ಆಗಲ್ಲ

''ನಾನು 'ಬಿಗ್ ಬಾಸ್' ಸಂಚಿಕೆಯನ್ನು ಮಿಸ್ ಮಾಡದೆ ನೋಡುತ್ತಿದ್ದೇನೆ. ಆದರೆ ಜಗ್ಗನ್ ಅವರನ್ನು ಮಾತ್ರ ನೀವು ತೋರಿಸಬೇಡಿ ಅವರನ್ನು ನೋಡುವುದಕ್ಕೆ ನಮಗೆ ಆಗಲ್ಲ.'' ಎಂದು ಈ ಯುವತಿ ಹೇಳಿದ್ದಾರೆ.

ಸ್ವಲ್ಪನ್ನು ಚೆನ್ನಾಗಿಲ್ಲ

''ಜಗನ್ ಗೆ ಸ್ವಲ್ಪ ಕೈ ನೋವು ಆದರೆ ಸಾಕು ತೇಜಸ್ವಿನಿ, ಆಶಿತಾ, ಕೃಷಿ ಮೂರು ಜನ ಹುಡುಗಿಯರು ಓಡಿ ಬರುತ್ತಾರೆ. ಅನುಪಮ ಅದನ್ನೂ ನೋಡಿ ಉರಿದುಕೊಳ್ಳುತ್ತಾರೆ. ಇದೆಲ್ಲ ನೋಡುವುದಕ್ಕೆ ಒಂದು ಸ್ವಲ್ಪನ್ನು ಚೆನ್ನಾಗಿಲ್ಲ.'' ಎನ್ನುವುದು ಯುವತಿಯ ಅಭಿಪ್ರಾಯ.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಒಳ್ಳೆಯದನ್ನು ತೋರಿಸಿ

''ಒಳ್ಳೆಯದನ್ನು ತೋರಿಸಿ.. ಸಮೀರ್ ಆಚಾರ್ಯ, ದಿವಾಕರ್ ಅವರನ್ನು ನೀವು ಹೆಚ್ಚು ತೋರಿಸುವುದಿಲ್ಲ. ಯಾಕೆ ಅವರು ಕಾಮನ್ ಮ್ಯಾನ್ ಅಂತ ಬಿಟ್ಟಿದ್ದೀರಾ.'' ಎಂದು 'ಬಿಗ್ ಬಾಸ್'ಗೆ ಪ್ರಶ್ನೆ ಮಾಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಯಾರಿಗೆ ಯಾರ ಮೇಲೆ ಲವ್ ಆಗಿದೆ.?

ಫ್ಯಾಮಿಲಿ ಕಾರ್ಯಕ್ರಮ

''ಇದು ಫ್ಯಾಮಿಲಿ ಕಾರ್ಯಕ್ರಮ.. ಇಡೀ ಕುಟುಂಬ ನೋಡುತ್ತಿರುತ್ತಾರೆ. ಅದರಲ್ಲಿ ಸಣ್ಣ ಅಶ್ಲೀಲವೂ ಇರಬಾರದು. ಜಗನ್ ಅವರನ್ನು ನಿಜವಾಗಿಯೂ ನೋಡುವುದಕ್ಕೆ ಆಗುವುದಿಲ್ಲ. ನಿವೇದಿತಾ ಕ್ಯೂಟ್.. ಚಂದನ್ ಶೆಟ್ಟಿ ಮೂಸ್ಸಿಕ್ ಸೂಪರ್.. ಅವರೇ ಗೆಲ್ಲಬೇಕು.'' ಎಂದು ವಿಡಿಯೋದಲ್ಲಿ ಯುವತಿ ಸ್ಪಷ್ಟಪಡಿಸಿದ್ದಾರೆ.

English summary
A girl has uploded a video on Youtube about Bigg Boss Kannada 5.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X