twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ತಪ್ಪಿಲ್ಲ: ಆಣೆ ಪ್ರಮಾಣಕ್ಕೂ ಸಿದ್ಧ ಎಂದ ಅನಿರುದ್ಧ್

    |

    'ಜೊತೆ ಜೊತೆಯಲಿ' ಧಾರಾವಾಹಿಯಿಂದ ತಮ್ಮನ್ನು ಕೈಬಿಟ್ಟಿರುವ ಬಗ್ಗೆ ನಟ ಅನಿರುದ್ಧ್ ಇಂದು ಮಾತನಾಡಿದ್ದು, ನನಗೆ ದುರಹಂಕಾರ ಎಂದಿರುವುದೆಲ್ಲ ಸುಳ್ಳು, ಚಿತ್ರಕತೆ ಬೇಗ ಕೊಡದೇ ಇರುವುದಕ್ಕೆ ಜಗಳವಾಗಿದೆಯೇ ವಿನಃ ಬೇರೆ ಕಾರಣಕ್ಕೆ ಅಲ್ಲ. ಆಣೆ ಪ್ರಮಾಣಕ್ಕೆ ಬೇಕಾದರೂ ನಾನು ಸಿದ್ಧ'' ಎಂದಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಹಲವು ವಿಷಯಗಳ ಬಗ್ಗೆ ನಟ ಅನಿರುದ್ಧ್ ಮಾತನಾಡಿದ್ದಾರೆ. ಸಂಭಾವನೆ ವಿಷಯ, ಕಾರು ಅಪಘಾತ, ಟಿಆರ್‌ಪಿ, ಇತರೆ ಸಹ ನಟರು, ತಮ್ಮ ಮೇಲೆ ಬಂದಿರುವ ಆರೋಪ, ತಮಗೆ ದುರಹಂಕಾರಾನ? ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

    ಜೊತೆ ಜೊತೆಯಲಿ ಧಾರವಾಹಿ ನನಗೆ ವಯಕ್ತಿಕವಾಗಿ ತುಂಬಾ ಕೊಟ್ಟಿದೆ. ಈ ತರ‌ದ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಠ. ಈ ಧಾರವಾಹಿ ಇರೋದು ನನ್ನಿಂದ ಅಂತ ನಾನು ಯಾವತ್ತು ಭಾವಿಸಿಲ್ಲ. ವೀಕ್ಷಕರಿಂದ ಈ ಧಾರವಾಹಿಗೆ ಯಶಸ್ಸು ಸಿಕ್ಕಿದೆ. ನನ್ನಲ್ಲಿ ದುರಹಂಕಾರ ಇದೆ ಅಂತ ಆರೋಪ ಮಾಡಿದ್ದಾರೆ. ನನ್ನಲ್ಲಿ ದುರಹಂಕಾರ ಇದ್ದಿದ್ರೆ ಇಷ್ಷರೊಳಗೆ ಗೊತ್ತಾಗಬೇಕಿತ್ತು. ನಾನು ದುರಹಂಕಾರದಿಂದ ಎಲ್ಲಾದ್ರು ಇದ್ದಿದ್ದನ್ನ ನಟಿಸಿದ್ದನ್ನ ನೋಡಿದ್ದೀರಾ..? ಇಲ್ವಲ್ಲಾ.. ನಾನು ಪಾತ್ರಕ್ಕಾಗಿ ಮಾತ್ರ ಶ್ರಮ ಪಟ್ಟಿದ್ದೇನೆ. 12 kg ವೇಟ್ ಲಾಸ್ ಮಾಡಿಕೊಂಡಿದ್ದೇನೆ'' ಎಂದಿದ್ದಾರೆ ಅನಿರುದ್ಧ್.

    ಅನಿರುದ್ಧ್ ಇಲ್ಲದೆ 'ಜೊತೆ ಜೊತೆಯಲಿ' ನೋಡಲ್ಲ ಅಂತಿರೋ ಜನ!ಅನಿರುದ್ಧ್ ಇಲ್ಲದೆ 'ಜೊತೆ ಜೊತೆಯಲಿ' ನೋಡಲ್ಲ ಅಂತಿರೋ ಜನ!

    ಹಿಂದಿನ ದಿನ ಸೀನ್ ಪೇಪರ್ ಕಳಿಸಿ ಅಂತ ಕೇಳಿದ್ದೇನೆ. ಯಾಕಂದ್ರೆ ಹೋಮ್ ವರ್ಕ್ ಮಾಡಿ ನಾನು ಕ್ಯಾಮೆರಾ ಮುಂದೆ ಬರುತ್ತೇನೆ. ದೃಶ್ಯಗಳು ಚನ್ನಾಗಿ ಬರಲಿ ಅಂತ ಮಾತ್ರ ಹೀಗೆ ಮಾಡುತ್ತೇನೆ. ಅದು ನನ್ನ ತಪ್ಪ. ಒಂದು ಸೀನ್ ಪೇಪರ್ ಕಳಿಸೋದು ತುಂಬಾ ತಡವಾಗಿ ಕಳಿಸ್ತಿದ್ರು.. ಸ್ವಲ್ಪ ಬೇಗ ಕಳಿಸಿ ಅಂತ ಕೇಳಿದ್ದು ತಪ್ಪಾ..? ನಾನು ಹೋರಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಮಾತ್ರ. ನಾನು ಹೈ ಪಿಚ್ ನಲ್ಲೇ ಜಗಳ ಮಾಡಿದ್ದು ಜನ.. ಆದ್ರೆ ಅದು‌ ಸ್ಕ್ರಿಪ್ಟ್ ಗೋಸ್ಕರ್ ಮಾತ್ರ. ಆರ್ಯವರ್ಧನ್ ಪಾತ್ರ ನೆಗೆಟೀವ್ ಆಗಿರಲ್ಲ ಅಂತ ಹೇಳಿದ್ರು. ನಾನು ನೆಗೆಟೀವ್ ಪಾತ್ರ ಮಾಡಲ್ಲ ಅಂತ ಹೇಳಿರಲಿಲ್ಲ. ನಿರ್ಮಾಪಕ‌ ಜಗದೀಶ್ ಸರ್ ಆರೋಪ ಮಾಡಿದ್ದಾರಲ್ಲಾ ಅದನ್ನ‌ ಅವರ ಮಕ್ಕಳ ಮೇಲೆ ಕೈ ಇಟ್ಟು ಆರೋಪ ಮಾಡಲಿ. ನಾನು ಬೇಕಾದರೆ ನನ್ನ ಮಕ್ಕಳ ಮೇಲೆ ಆಣೆ ಮಾಡುತ್ತೇನೆ'' ಎಂದಿದ್ದಾರೆ ಅನಿರುದ್ಧ್.

    ಮಧು ಉತ್ತಮ್ ಕೆಲಸದ ವೈಖರಿ ಸರಿಯಿಲ್ಲ: ಅನಿರುದ್ಧ್

    ಮಧು ಉತ್ತಮ್ ಕೆಲಸದ ವೈಖರಿ ಸರಿಯಿಲ್ಲ: ಅನಿರುದ್ಧ್

    ಎಪಿಸೋಡ್ ನಿರ್ದೇಶಕ, ಮಧು ಉತ್ತಮ್ ಬಗ್ಗೆ ಮಾತನಾಡಿರುವ ಅನಿರುದ್ಧ್, ''ಅವರು ತುಂಬಾ ಕಿರುಚಿಕೊಂಡೇ‌ ಕೆಲಸ ಮಾಡ್ತಾರೆ. ಅವರ ಜೊತೆ ಕೆಲಸ ಮಾಡೋದು ಕಷ್ಟ ಇದೆ. ಮಧು ಉತ್ತಮ ಸರ್ ಕೆಲಸದ ಪದ್ದತಿ ಸರಿ‌ ಇಲ್ಲ. ಅವರ ನಡವಳಿಕೆ ಯಿಂದ ನಮ್ಮ ಕಲಾವಿದರು ಕಣ್ಣೀರು ಹಾಕಿದ್ದಾರೆ ಎಂದ ಅನಿರುದ್ಧ್, ''ಕ್ಯಾರಾವನ್ ಇಲ್ಲದಿದ್ರೆ ಶೂಟಿಂಗ್ ಗೆ ಬರುತ್ತನೇ ಇರಲಿಲ್ಲ ಅಂತ ಅವರು ಆರೋಪಿಸಿದ್ದಾರೆ.

    ನಾನು ರಂಗಭೂಮಿ ಕಲಾವಿದ ಕ್ಯಾರಾವ್ಯಾನ್ ಇಲ್ದದೇ ಇರೋಕೆ ಗೊತ್ತು. ಕಲಾವಿಧರೆಲ್ಲಾ ನೀವು ಕ್ಯಾರಾವ್ಯಾನ್‌ ಕೇಳಲ್ಲ ನಮಗೂ ಕೊಡಲ್ಲ ಅಂತ ಹೇಳಿದ್ರು. ಕಾಡಿನಲ್ಲಿ ಶೂಟಿಂಗ್ ಮಾಡುವಾಗ ಕ್ಯಾರಾವಾನ್ ಇಲ್ಲದಿದ್ರೆ ಹೇಗೆ ಇರಬೇಕು..? ಹೆಂಗಸರು ಇದ್ದಾಗ ಕ್ಯಾರಾವ್ಯಾನ್ ಇಲ್ಲದಿದ್ರೆ ಅವರು ಬಟ್ಟೆ ಬದಲಾಯಿಸೋದು ಹೇಗೆ.? ಅಕ್ಕ ಪಕ್ಕ ಇರೋರ ಮನೆಗೆ ಹೋಗಿ ಬಾತ್ ರೂಂ ಕೇಳೋಕೆ ಆಗುತ್ತಾ..?'' ಎಂದಿದ್ದಾರೆ.

    ಕಟ್ ಮಾಡಿಯೇ ಸಂಭಾವನೆ ಕೊಟ್ಟಿದ್ದಾರೆ: ಅನಿರುದ್ಧ್

    ಕಟ್ ಮಾಡಿಯೇ ಸಂಭಾವನೆ ಕೊಟ್ಟಿದ್ದಾರೆ: ಅನಿರುದ್ಧ್

    ಕೋವಿಡ್ ಸಮಯದಲ್ಲಿ ಎಲ್ರೂ ಸಂಭಾವನೆ ಕಡಿಮೆ ಮಾಡಿಕೊಂಡ್ರು. ಆದ್ರೆ ನಾನು ಮಾಡಿಲ್ಲ ಅಂತಾರೆ. ಮೊದಲು ಎಷ್ಟು ಕೊಡ್ತಿದ್ರೋ ಅಷ್ಟೆ ಕೊಟ್ರೆ ಮಾಡ್ತೇನೆ ಅಂದಿದ್ದೆ ಅದಕ್ಕೆ ಅವರು ಒಪ್ಪಿದ್ರು. ಮೊದಲ ತಿಂಗಳು ಕಟ್ ಮಾಡಿಯೇ ಸಂಬಳ ಕೊಟ್ಟಿದ್ದಾರೆ. ಎರಡನೇ ತಿಂಗಳು ಕೂಡ ಕಟ್ ಮಾಡಿ‌ ಕೊಟ್ಟಿದ್ದಾರೆ. ಕೇಳಿದ್ರೆ ಕೊಡ್ತೇನೆ ಅಂತ ಹೇಳಿದ್ರು. ಆದ್ರೆ ಕೊಡಲಿಲ್ಲ. ಜೊತೆ ಜೊತೆಯಲಿ ನನ್ನ ಕುಟುಂಬ, ದಾಖಲೆ‌ ಸೃಷ್ಟಿ ಮಾಡಿದ ಕುಟುಂಬ. ಅರುರ್ ಜಗದೀಶ್ ನಮ್ಮ ಅನ್ನ ದಾತರು. ಮೂರ್ಕರ ತರ ನಾವೇಲ್ಲಾ ಕೆಲಸ ಮಾಡಬಾರದು ಅಂತ ಹೇಳಿದ್ದೆ. ಅವರನ್ನೇ ಮೂರ್ಖ ಅಂತ ಹೇಳಲಿಲ್ಲ'' ಎಂದಿದ್ದಾರೆ.

    ''ನಮ್ಮನ್ನು ಫೈವ್ ಸ್ಟಾರ್‌ ಹೋಟೆಲ್‌ನಲ್ಲಿ ಉಳಿಸಿದ್ದರು''

    ''ನಮ್ಮನ್ನು ಫೈವ್ ಸ್ಟಾರ್‌ ಹೋಟೆಲ್‌ನಲ್ಲಿ ಉಳಿಸಿದ್ದರು''

    ನಾನು ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದೆ ಎಂಬ ಆರೋಪಕ್ಕೆ ಉತ್ತರಿಸಿದ ಅನಿರುದ್ಧ್, ''ಹೈದರಾಬಾದ್ ನಲ್ಲಿ ನಮ್ಮನ್ನ‌ ಇರಿಸಿದ್ದು ಫೈವ್ ಸ್ಟಾರ್ ಹೋಟೆಲ್ ನಲ್ಲೇ. ನಾನು ಹೋಟೆಲ್ ನಲ್ಲೇ ಊಟ ಮಾಡ್ತೀನಿ ಅಂತ ಯಾವತ್ತು ಹೇಳಿಲ್ಲ. ಪ್ರೊಡಕ್ಷನ್ ನಲ್ಲಿ ಊಟ ಮಾಡಲ್ಲಾ ಅಂತ ಯಾವತ್ತು ಹೇಳಿಲ್ಲ. ನಾನು ಕಲಾವಿಧರನ್ನ ಕರೆದುಕೊಂಡು ಹೋಗಿಲ್ಲ. ರಾಮೋಜಿನರಾವ್ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುತ್ತಿದ್ವಿ.

    ಆಗ ಹೋಟೆಲ್ ನಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದೆ. ಸಹ ಕಲಾವಿಧರ ಕೂಡ ಕಾರಲ್ಲಿ ಬಂದು ಊಟ ಮಾಡಿಕೊಂಡು ಹೋಗುತ್ತಿದ್ರು. ಅವರು ಹೇಳಬಹುದಿತ್ತು ನೀವು ಶೂಟಿಂಗ್ ಸೆಟ್ ನಲ್ಲೇ ಊಟ ಮಾಡಿ ಅಂತಾ. ಯಾಕೆ ಹೇಳಲಿಲ್ಲ'' ಎಂದಿದ್ದಾರೆ ಅನಿರುದ್ದ್.

    ಬೆಂಜ್‌ ಕಾರು ಆಕ್ಸಿಡೆಂಟ್ ಆಗಿದ್ದು ನನ್ನಿಂದ ನಿಜ: ಅನಿರುದ್ದ್

    ಬೆಂಜ್‌ ಕಾರು ಆಕ್ಸಿಡೆಂಟ್ ಆಗಿದ್ದು ನನ್ನಿಂದ ನಿಜ: ಅನಿರುದ್ದ್

    ''ಬೆಂಜ್‌ ಕಾರು ಆಕ್ಸಿಡೆಂಟ್ ಆಗಿದ್ದು ನಿಜ. ಅದಕ್ಕೆ ನಾನೇ ಕಾರಣ ಆಗಿದ್ದು ನಿಜ. ಗಾಡಿ ಓಡಿಸಿಕೊಂಡು ಡೈಲಾಗ್ ಹೇಳೋದು ತುಂಬಾ ಕಷ್ಡ ಅಂತ ನಿರ್ಮಾಪಕರಿಗೆ‌ ಕೇಳಿಕೊಂಡಿದ್ದೇನೆ. ಬೆಜ್ ಕಾರಿನಲ್ಲಿ ಕೂತುಕೊಂಡು ನಟಿಸಿ ಅಂದ್ರು. ಆಗ ಕಾರ್ ಆಕ್ಸಿಡೆಂಟ್ ಆಗಿದ್ದು ನಿಜ. ಕೊನೆಗೆ ನಾನೇ ಕಾರಿನ ಖರ್ಚು ಬರಿಸಬೇಕು ಅಂತ ಪ್ಲಾನ್ ಮಾಡಿದ್ರು'' ಎಂದ ಅನಿರುದ್ಧ್, ''ನನ್ನಿಂದ ಕೆಲಸ ಕೆಟ್ಟಿದೆ'' ಅಂತಾರೆ, ಆದರೆ, ಆದ್ರೆ ನಾನು ಅವರನ್ನ‌ ಕೆಲಸದಿಂದ ತೆಗಿಬೇಡಿ ಅಂದಿದ್ದೇನೆ. ಕ್ಯಾಮೆರಾ ಮ್ಯಾಮ್ ಸಂತೋಷ್ ರನ್ನ, ಮೇಘಾ ಶೆಟ್ಟಿಯನ್ನ ತೆಗಿಬೇಡಿ ಸರ್ ಅಂತ ಉಳಿಸಿಕೊಂಡೆ. ಈಗಲೂ ನಾನು ನಿರ್ಮಾಪಕ ಜಗದೀಶ್ ಸರ್ ಗೆ ಮೆಸೆಜ್ ಮಾಡಿದ್ದೇನೆ. ನಾಳೆಯಿಂದ ಬನ್ನಿ ಅಂತ ಹೇಳಿದ್ರೆ ಕಂಡಿತ ಬರ್ತೇನೆ ಅಂತ ಮೆಸೆಜ್‌ ಹಾಕಿದ್ದೇನೆ'' ಎಂದಿದ್ದಾರೆ.

    ಟಿಆರ್ ಪಿ ಡೌನ್ ಆಗ್ತಿರೋದು ನನ್ನಿಂದಾನ? ಅನಿರುದ್ದ್ ಪ್ರಶ್ನೆ

    ಟಿಆರ್ ಪಿ ಡೌನ್ ಆಗ್ತಿರೋದು ನನ್ನಿಂದಾನ? ಅನಿರುದ್ದ್ ಪ್ರಶ್ನೆ

    ಧಾರವಾಹಿ ಟಿಆರ್ ಪಿ ಡೌನ್ ಆಗ್ತಿರೋದು ನನ್ನಿಂದಾನ..? ಅವರ‌ ಮಕ್ಕಳ ಮೇಲೆ ಕೈ ಇಟ್ಟು ಹೇಳೋಕೆ‌ ಹೇಳಿ? ನಾನೊಬ್ಬ ‌ಇದ್ರೆ ನಟಿಸೋಕೆ‌ ಆಗುತ್ತಾ. ಟೀಂ ವರ್ಕ್ ಇದ್ರೆ ಮಾತ್ರ ಸಾಧ್ಯ. ಮಾತುಕಥೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧ. ಸೋಮವಾರ ಮಂಗಳವಾರ ಎಲ್ಲಾ‌ ಸರಿ ಮಾಡಿಕೊಳ್ಳೊ ಮನಸ್ಸಿದೆ. ಕರ್ನಾಟಕ‌ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ‌ರು ಸರಿ ಮಾಡೋಣ ಅಂದಿದ್ದಾರೆ. ಎರಡು ವರ್ಷ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ಅನ್ನೋ ನಿರ್ಧಾರ. ಇಲ್ಲಿ ಯಾರು ಸಹ ಪ್ರೊಡ್ಯೂಸರ್ ಅಲ್ಲ ಎಕ್ಸಿಕ್ಯೂಟೀವ್ ಪ್ರೊಡ್ಯೂಸರ್. ಪ್ರೊಡ್ಯೂಸರ್ ಚಾನೆಲ್ ಆಗಿರುತ್ತೆ. ಏನೇ ಆದ್ರು ದೇವರು ಅನ್ನ ಕೊಟ್ಟೇ ಕೊಡ್ತಾನೆ. ನನ್ನ ಹಣೆ ಬರಹದಲ್ಲಿ ಯಾವುದು ಇರಲ್ವೋ ಅದು ಬರಲ್ಲ. ಯಾವುದು ಇರುತ್ತೋ ಅದು ಬಂದೇ ಬರುತ್ತೆ'' ಎಂದಿದ್ದಾರೆ ಅನಿರುದ್ಧ್.

    English summary
    Actor Anirudh gave clarification about Jothe Jotheyali serial. Director and Producer Aruru Jagadish said team decided to give gate pass to Anirudh.
    Saturday, August 20, 2022, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X