For Quick Alerts
  ALLOW NOTIFICATIONS  
  For Daily Alerts

  ನಟಿ ಮಲ್ಲಿಕಾ ಶೆರಾವತ್ ಸ್ವಯಂವರಕ್ಕೆ ವೇದಿಕೆ ಸಿದ್ಧ

  By Rajendra
  |

  ಮರ್ಡರ್ ಚಿತ್ರದ ಮೂಲಕ ಬೆಳಕಿಗೆ ಬಂದ ತಾರೆ ಮಲ್ಲಿಕಾ ಶೆರಾವತ್. ಆ ಚಿತ್ರದಲ್ಲಿನ ಹಾಟ್ ಸನ್ನಿವೇಶಗಳು, ಭರ್ಜರಿ ಚುಂಬನ ದೃಶ್ಯಗಳು ಮಲ್ಲಿಕಾಗೆ ಎಲ್ಲಿಲ್ಲದ ಜನಪ್ರಿಯತೆಯನ್ನು ತಂದುಕೊಟ್ಟವು. ಆ ಚಿತ್ರದ ಬಳಿಕ ಮಲ್ಲಿಕಾ ಸಿನಿಮಾ ಗ್ರಾಫ್ ಒಂದೇ ಸ್ಪೀಡ್ ನಲ್ಲಿ ಸಾಗಿದರೂ ಸದ್ಯಕ್ಕೆ ಬಿಗಡಾಯಿಸಿದೆ.

  ಈ ಹಿನ್ನೆಲೆಯಲ್ಲಿ ಮಲ್ಲಿಕಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರುತೆರೆಯಲ್ಲಿ ಮಿಂಚಲು ಹಾತೊರೆಯುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ವೀಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ. 'ದಿ ಬ್ಯಾಚುಲರೇಟ್ ಇಂಡಿಯಾ - ಮೇರೆ ಖಯಾಲೋ ಕಿ ಮಲ್ಲಿಕಾ' ಎಂಬ ಶೋ ಮೂಲಕ ತನ್ನ ಕನಸಿನ ರಾಜಕುಮಾರನನ್ನು ಹುಡುಕಲಿದ್ದಾರೆ.

  'ದಿ ಬ್ಯಾಚುಲರ್' ಎಂಬ ಜನಪ್ರಿಯ ಡೇಟಿಂಗ್ ರಿಯಾಲಿಟಿ ಶೋ ಸ್ಫೂರ್ತಿಯಿಂದ ಇದನ್ನು ರೂಪಿಸಲಾಗಿದೆ. ಈ ಸ್ವಯಂವರದಲ್ಲಿ ಮಲ್ಲಿಕಾ ಕೈಹಿಡಿಯಲು 30 ಮಂದಿ ಸ್ಪರ್ಧಿಗಳ ನಡುವೆ ಬಿರುಸಿನ ಪೈಪೋಟಿ ನಡೆಯಲಿದೆ. Life ok ಚಾನಲ್ ನಲ್ಲಿ ಅಕ್ಟೋಬರ್ 7ರಿಂದ ಶೋ ಪ್ರಾರಂಭ.

  ನಟ ರೋಹಿತ್ ರಾಯ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೆ 30 ಮಂದಿ ಸ್ಪರ್ಧಿಗಳಲ್ಲಿ 15 ಮಂದಿಯ ಪರಿಚಯವಾಗಿದೆ. ಇಷ್ಟು ದಿನ ಮಲ್ಲಿಕಾ ಏನೋ ಒಂದು ನ್ಯೂಸೆನ್ಸ್ ಮಾಡಿ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದರು. ಈಗ ಯಾಕೋ ತಣ್ಣಗಾಗಿದ್ದಾರೆ.

  ಈಗ ಮಲ್ಲಿಕಾ ಕೈಯಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳೂ ಇಲ್ಲ. ಮಾಧ್ಯಮಗಳು ಆಕೆಯನ್ನು ಕ್ಯಾರೆ ಎನ್ನುತ್ತಿಲ್ಲ. 'ಹಿಸ್' ಸಿನಿಮಾ ಠುಸ್ ಆದ ಮೇಲೆ ಮಲ್ಲಿಕಾಗೆ ಆಫರ್ ಗಳು ಇಲ್ಲದಂತಾಗಿದೆ. ಸದ್ಯಕ್ಕೆ 'ಡರ್ಟಿ ಪೊಲಿಟಿಕ್ಸ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಗ್ಲಾಮರ್ ಗೆ ಅವಕಾಶವೇ ಇಲ್ಲದಂತಾಗಿದೆ.

  English summary
  Actress Mallika Sherawat joins the likes of Rakhi Sawant and Ratan Rajput to find her Mr Right through a television show. The actress will feature in "The Bachelorette India - Mere Khayalon Ki Mallika", which will air on Life OK is expected to go on air in 7th October. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X