For Quick Alerts
  ALLOW NOTIFICATIONS  
  For Daily Alerts

  ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲವೆಂದ ಅಕ್ಷಯ್ ಕುಮಾರ್: ಕಾರಣ?

  |

  ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಕಪಿಲ್ ಶರ್ಮಾ' ಶೋ ಭಾರತೀಯ ಕಿರುತೆರೆಯ ಬಹು ಜನಪ್ರಿಯ ಶೋಗಳಲ್ಲಿ ಒಂದು. ಬಹುವರ್ಷಗಳಿಂದ ನಡೆದುಬರುತ್ತಿರುವ ಈ ಶೋನಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಭಾಗವಹಿಸಿದ್ದಾರೆ.

  ಬಾಲಿವುಡ್‌ನಲ್ಲಿ ಯಾವುದೇ ಹೊಸ ಸಿನಿಮಾ ಬರಲು ತಯಾರಾಯಿತೆಂದರೆ ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ ಮೊದಲು ಬರುವುದು ಕಪಿಲ್ ಶರ್ಮಾ ಶೊಗೆ ಎಂಬ ಸಮಯವಿತ್ತು. ಈಗಲೂ ಅದು ಹಾಗೆಯೇ ಇದೆ.

  ಈಗಲೂ ಸಹ ಯಾವುದೇ ಹಿಂದಿ ಸಿನಿಮಾ ಬಿಡುಗಡೆ ಆದರೂ ಕಪಿಲ್ ಶರ್ಮಾ ಶೋಗೆ ಪ್ರಚಾರಕ್ಕೆ ಹೋಗುವುದು ಕಡ್ಡಾಯ ಎಂಬಂತಾಗಿದೆ. ತೆಲುಗು ಸಿನಿಮಾ ಆದರೂ 'RRR' ಚಿತ್ರತಂಡ ಸಹ ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಶೊಗೆ ಹೋಗಿತ್ತು. ಆದರೆ ಈಗ ನಟ ಅಕ್ಷಯ ಕುಮಾರ್ ತಾವು ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲ ಎಂದಿದ್ದಾರೆ.

  ಅಕ್ಷಯ್ ನಟನೆಯ ಹೊಸ ಸಿನಿಮಾ 'ಬಚ್ಚನ್ ಪಾಂಡೆ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ತಾವು ಸಿನಿಮಾದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆಂದು ಬಾಲಿವುಡ್‌ನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕಾರಣವೂ ಇದೆ.

  ಕಪಿಲ್ ಮೇಲೆ ಅಕ್ಷಯ್ ಮುನಿಸು

  ಕಪಿಲ್ ಮೇಲೆ ಅಕ್ಷಯ್ ಮುನಿಸು

  ಕಪಿಲ್ ಶರ್ಮಾ ಶೋ ಹಾಗೂ ಅದರ ತಂಡದೊಂದಿಗೆ ಅಕ್ಷಯ್ ಕುಮಾರ್ ಮುನಿಸಿಕೊಂಡಿದ್ದಾರೆ. ನಟ ಅಕ್ಷಯ್ ಕುಮಾರ್ ಕಳೆದ ಬಾರಿ ಕಪಿಲ್ ಶರ್ಮಾ ಶೋಗೆ ಹೋಗಿದ್ದಾಗ ತಾವು ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರ ಬಗ್ಗೆ ಜೋಕ್ ಒಂದನ್ನು ಮಾಡಿದ್ದರು. ಆ ಜೋಕ್ ಅನ್ನು ಪ್ರಸಾರ ಮಾಡದಂತೆ ಕಪಿಲ್‌ಗೆ ಹೇಳಿದ್ದರು. ಅಂತೆಯೇ ಆ ಜೋಕ್ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಆದರೆ ಆ ದೃಶ್ಯದ ಕ್ಲಿಪ್ಪಿಂಗ್ ಅನ್ನು ಯಾರೋ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದರು. ಇದು ಅಕ್ಷಯ್‌ಗೆ ಸಿಟ್ಟು ತರಿಸಿದೆ.

  ಅಂದು ಶೋನಲ್ಲಿ ನಡೆದಿದ್ದು ಏನು?

  ಅಂದು ಶೋನಲ್ಲಿ ನಡೆದಿದ್ದು ಏನು?

  ''ನನಗೆ ಪ್ರಶ್ನೆ ಕೇಳುವಾಗ ಯಾವಾಗಲು ಯಾರೋ ಮಕ್ಕಳು ಕೇಳಿದ ಪ್ರಶ್ನೆ ಇದು, ಇನ್ಯಾರೊ ಕೇಳಿದ ಪ್ರಶ್ನೆ ಇದು ಎಂದು ಹೇಳಿ ನನಗೆ ಪ್ರಶ್ನೆ ಕೇಳುತ್ತೀಯ. ನೇರವಾಗಿ ಏಕೆ ನಾನೇ ಪ್ರಶ್ನೆ ಕೇಳುತ್ತಿದ್ದೀನಿ ಎಂದು ನೀನು ಹೇಳುವುದಿಲ್ಲ ಎಂದು ಅಕ್ಷಯ್ ಕುಮಾರ್ ಕಪಿಲ್ ಅನ್ನು ಕೇಳುತ್ತಾರೆ. ಆಗ ಕಪಿಲ್, ನೀವು ಒಮ್ಮೆ ದೇಶದ ದೊಡ್ಡ ರಾಜಕಾರಣಿಯ (ಮೋದಿ) ಸಂದರ್ಶನ ಮಾಡಿದ್ದಿರಿ ಅಂದು ನನ್ನ ಡ್ರೈವರ್‌ನ ಮಗ ಪ್ರಶ್ನೆ ಕೇಳಿದ್ದಾನೆ, ನೀವು ಮಾವಿನ ಹಣ್ಣನ್ನು ಕಟ್ ಮಾಡಿ ತಿನ್ನುತ್ತೀರೊ ಹಾಗೆಯೇ ತಿನ್ನುತ್ತೀರೋ ಎಂದು ಪ್ರಶ್ನೆ ಕೇಳಿದ್ದಿರಿ'' ಎಂದು ಕಪಿಲ್ ಹೇಳುತ್ತಾರೆ. ಇದಕ್ಕೆ ಜನರೆಲ್ಲ ನಗುತ್ತಾರೆ. ಇದರಿಂದ ಮುಜುಗರಗೊಳ್ಳುವ ಅಕ್ಷಯ್ ಕುಮಾರ್, ಆ ರಾಜಕಾರಣಿಯ ಹೆಸರನ್ನು ಧೈರ್ಯವಾಗಿ ಹೇಳು ಎಂದು ಕಪಿಲ್‌ಗೆ ಸವಾಲು ಹಾಕುತ್ತಾರೆ. ಆದರೆ ಕಪಿಲ್ ಮೋದಿಯವರ ಹೆಸರು ಹೇಳುವುದಿಲ್ಲ.

  ಟೀಕೆಗೆ ಗುರಿಯಾಗಿದ್ದ ಅಕ್ಷಯ್-ಮೋದಿ ಸಂದರ್ಶನ

  ಟೀಕೆಗೆ ಗುರಿಯಾಗಿದ್ದ ಅಕ್ಷಯ್-ಮೋದಿ ಸಂದರ್ಶನ

  ಅಕ್ಷಯ್ ಕುಮಾರ್ ಮಾಡಿದ್ದ ಮೋದಿಯವರ ಸಂದರ್ಶನ ಟೀಕೆಗೆ ಗುರಿಯಾಗಿತ್ತು. ಮಾವಿನ ಹಣ್ಣು ಹೇಗೆ ತಿನ್ನುತ್ತೀರಿ, ಇನ್ನಿತರೆ ಬಾಲಿಶ ಪ್ರಶ್ನೆಗಳನ್ನು ಅಕ್ಷಯ್ ಕೇಳಿದ್ದಾರೆ. ಮೋದಿಯವರ ಪ್ರಚಾರ ಮಾಡಲಷ್ಟೆ ಈ ಸಂದರ್ಶನ ಮಾಡಲಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಹಾಗಾಗಿಯೇ ಕಪಿಲ್ ಶರ್ಮಾ ಶೋನಲ್ಲಿ ಆ ಸಂದರ್ಶನದ ಬಗ್ಗೆ ಮಾಡಲಾದ ಜೋಕ್ ಅನ್ನು ತೆಗೆಯುವಂತೆ ಅಕ್ಷಯ್ ಹೇಳಿದ್ದರು. ಕಪಿಲ್ ಆ ಜೋಕ್ ಅನ್ನು ತೆಗೆದಿದ್ದರು. ಆದರೆ ಕಪಿಲ್‌ರ ಎಡಿಟಿಂಗ್ ತಂಡದಿಂದ ಆ ದೃಶ್ಯ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದು ಅಕ್ಷಯ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ.

  'ಬಚ್ಚನ್ ಪಾಂಡೆ' ಬಿಡುಗಡೆ ಯಾವಾಗ?

  'ಬಚ್ಚನ್ ಪಾಂಡೆ' ಬಿಡುಗಡೆ ಯಾವಾಗ?

  ಈ ಹಿಂದೆ ಹಲವಾರು ಬಾರಿ ನಟ ಅಕ್ಷಯ್ ಕುಮಾರ್, ಕಪಿಲ್ ಶರ್ಮಾರ ಶೋಗೆ ಆಗಮಿಸಿದ್ದಾರೆ. ಈ ಬಾರಿ 'ಬಚ್ಚನ್ ಪಾಂಡೆ' ಸಿನಿಮಾದ ಪ್ರಚಾರಕ್ಕೆ ಅಕ್ಷಯ್ ಆಗಮಿಸಬೇಕಿತ್ತು. 'ಬಚ್ಚನ್ ಪಾಂಡೆ' ಸಿನಿಮಾವು ಮಾರ್ಚ್ 18 ಕ್ಕೆ ಬಿಡುಗಡೆ ಆಗಬೇಕಿದೆ. ಸಿನಿಮಾದ ಪ್ರಚಾರದ ಯೋಜನೆಗಳು ಈಗಾಗಲೇ ತಯಾರಾಗಿವೆ. ಸಿನಿಮಾದಲ್ಲಿ ಭಿನ್ನ ಅವತಾರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ನಾಯಕಿಯಾಗಿ ಕೃತಿ ಸೆನನ್ ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಸಹ ಇದ್ದಾರೆ. ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ ಸಹ ನಟಿಸಿದ್ದಾರೆ.

  English summary
  Akshay Kumar upset with Kapil Sharma and his team members. He is not going to Kapil Sharma's show for promotions of his new movie 'Bachchan Pandey'.
  Monday, February 7, 2022, 20:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X