Amruthadhaare: ಗೌತಮ್ ಮದುವೆ ಮಾಡಲು ಮನಸ್ಸು ಮಾಡಿದ ಶಕುಂತಲಾ
ಗೌತಮ್ ದಿವಾನ್‌ಗೆ ತನ್ನ ತಂಗಿ ಮಹಿಮಾಳ ಮದುವೆಯದ್ದೇ ಚಿಂತೆಯಾಗಿದೆ. ಇದಕ್ಕಾಗಿ ಭೂಮಿಕಾಳಿಗೆ ಹುಡುಗನನ್ನು ಹುಡುಕುತ್ತಿದ್ದಾನೆ. ಆದರೆ, ಯಾವುದು ಸಿಗುತ್ತಿಲ್ಲ. ತನ್ನ ಆಫೀಸಿನಲ್ಲಿ ಭೂಮಿಕಾ ವಯಸ್ಸಿಗೆ ಮ್ಯಾಚ್ ಆಗುವ, ಇನ್ನೂ ಮದುವೆಯಾಗದ ಹಾಗೂ ಒಳ್ಳೆಯ ಸಂಬಳ ಪಡೆಯುವವರನ್ನು ಶಾರ್ಟ್ ಲಿಸ್ಟ್ ಮಾಡಲು ಹೇಳಿರುತ್ತಾನೆ. ಆದರೆ ಶಾರ್ಟ್ ಲಿಸ್ಟ್ ಮಾಡಿದಾಗ ಸಿಗುವುದು ಗೌತಮ್ ದಿವಾನ್ ಹೆಸರೊಂದೇ.
ಆಫೀಸ್‌ನಲ್ಲಿ ಹುಡುಗನನ್ನು ಹುಡುಕಲು ಹೋದರೆ ಹೀಗಾತ್ತಲ್ಲ ಎಂದು ಗೌತಮ್‌ಗೆ ಬೇಸರವಾಗುತ್ತದೆ. ಆದರೆ, ಗೆಳೆಯ ಆನಂದ್, ಯಾವಾಗ ಏನು ಆಗಬೇಕೋ ಅದೇ ಆಗುತ್ತದೆ ಬಿಟ್ಟು ಬಿಡು ಎಂದು ಬುದ್ಧಿ ಹೇಳುತ್ತಾನೆ. ಶಕುಂತಲಾ ತನ್ನ ಬೀಗರು ಮನೆಗೆ ಬಂದಾಗ ಗೌತಮ್ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಆಗ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ಗೌತಮ್‌ಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿರುತ್ತಾಳೆ. ಈ ವಿಚಾರ ಈಗ ಹೊರಗಡೆಯೂ ಹರಡುತ್ತಿದೆ. ಇದರಿಂದ ಶಕುಂತಲಾ ಗಾಬರಿಯಾಗಿರುತ್ತಾಳೆ.

ಇನ್ನು ಶಕುಂತಲಾ ಅವರ ಅಣ್ಣ ಬರುತ್ತಾರೆ. ಆತನ ಬಳಿ ಶಕುಂತಲಾ, ಗೌತಮ್ ಮದುವೆಯ ಬಗ್ಗೆ ಮಾತನಾಡುತ್ತಾಳೆ. ಅದಕ್ಕೆ ಶಕುಂತಲಾ ಅಣ್ಣ, ಗೌತಮ್‌ಗೆ ಮದುವೆ ಮಾಡೋಣ. ಆಗ ಪ್ರಪೋಸಲ್‌ಗಳು ಬರುವುದು ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಅದೂ ಕೂಡ ನಮ್ಮ ಮಾತು ಕೇಳುವಂತಹ ಹುಡುಗಿಯನ್ನು ತರೋಣ ಎಂದು ಹೇಳುತ್ತಾನೆ.
ಶಕುಂತಲಾ ಸುಳ್ಳಿನಿಂದ ಎಡವಟ್ಟು
ಕ್ಲಬ್‌ನಲ್ಲಿ ಶಕುಂತಲಾಳಿಗೆ ನ್ಯೂಸ್ ಪೇಪರ್ ಬರಹಗಾರ್ತಿ ಸಿಗುತ್ತಾಳೆ. ಆಕೆ ಗೌತಮ್‌ಗೆ ಮದುವೆ ಸೆಟ್ ಆಗಿರುವ ವಿಚಾರವನ್ನು ಹೇಳುತ್ತಾಳೆ. ಶಕುಂತಲಾ ಅದು ರೂಮರ್ಸ್ ಎಂದು ಹೇಳಿದರೂ ಕೇಳುವುದಿಲ್ಲ. ಬೇರೆ ದಾರಿ ಇಲ್ಲದೇ, ಗೌತಮ್ ಮದುವೆಯಾಗುತ್ತಿರುವ ಹುಡುಗಿಯ ಸಂದರ್ಶನ ಎಕ್ಸ್‌ಕ್ಲೂಸಿವ್ ಆಗಿ ನಿನಗೆ ಕೊಡಿಸುತ್ತೇನೆ. ಸದ್ಯಕ್ಕೆ ಈ ವಿಚಾರವನ್ನು ಇಲ್ಲಿಗೆ ಬಿಡು ಎಂದು ಸಮಾಧಾನ ಮಾಡಿ ಕಳಿಸುತ್ತಾಳೆ. ಅಣ್ಣ ಹೇಳಿದಂತೆ ತನ್ನ ಮಾತನ್ನು ಕೇಳುವಂತಹ ಹುಡುಗಿಯನ್ನು ಕರೆತಂದು ಗೌತಮ್ ಮದುವೆಯನ್ನು ಮಾಡಬೇಕು. ಇಲ್ಲದಿದ್ದರೆ, ಸಮಸ್ಯೆ ಆಗುತ್ತದೆ ಎಂದು ಆಲೋಚಿಸುತ್ತಾಳೆ.
ಮಹಿಮಾ ಹುಚ್ಚಾಟಕ್ಕೆ ಕೊನೆಯೇ ಇಲ್ವಾ..?
ಇತ್ತ ಜೀವನ್ ಭೇಟಿ ಮಹಿಮಾ ಆಫಿಸಿಗೆ ಬರುತ್ತಾಳೆ. ಜೀವನ್ ನನಗೆ ಸಮಯವಿಲ್ಲ. ನಿನ್ನ ಜೊತೆಗೆ ಬರುವುದಕ್ಕೆ ಆಗುವುದಿಲ್ಲ. ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಗನ್ ತೋರಿಸಿ ಹೆದರಿಸುತ್ತಾಳೆ. ಜೀವನ್ ಅದಕ್ಕೆಲ್ಲಾ ಹೆದರುವುದಿಲ್ಲ. ಆಗ ಮಹಿಮಾ ಬೇಕಂತಲೇ ಶೂಟ್ ಮಾಡಿ ಪ್ರಜ್ಞೆ ತಪ್ಪಿ ಬಿದ್ದಂತೆ ನಟಿಸುತ್ತಾಳೆ. ಇದರಿಂದ ಜೀವನ್ ಗಾಬರಿಯಾಗಿ ಕೆಲಸ ಬಿಟ್ಟು ಹೋದಾಗ ಮಹಿಮಾ ಕಣ್ಣು ಬಿಡುತ್ತಾಳೆ. ಜೀವನ್‌ಗೆ ಮಹಿಮಾ ಈಗಾಗಲೇ ನುಂಗಲಾರದ ಬಿಸಿ ತುಪ್ಪದಂತಾಗಿದ್ದಾಳೆ. ವಿಧಿ ಇಲ್ಲದೇ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಹಿಮಾ ಜೊತೆಗೆ ಜೀವನ್ ಹೋಗುತ್ತಾನೆ.

ಭೂಮಿಕಾಳಿಗೆ ಹುಡುಗ ಸಿಕ್ಕಾಯ್ತು
ಇನ್ನು ಭೂಮಿಕಾಳಿಗೆ ಒಳ್ಳೆಯ ಪ್ರಪೋಸಲ್ ಒಂದು ಬಂದಿರುತ್ತದೆ. ಮದುವೆಯಾಗದ, ಒಬ್ಬನೇ ಮಗನ ಪ್ರಪೋಸಲ್ ಇದಾಗಿದೆ. ಸದ್ಯ ಹುಡುಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಈಗ ಬೆಂಗಳೂರಿಗೆ ಬರಲು ನಿರ್ಧರಿಸಿದ್ದಾನೆ ಎಂದು ಮಂದಾಕಿನಿ ಮನೆಯಲ್ಲಿ ಎಲ್ಲರಿಗೂ ಹೇಳುತ್ತಾಳೆ. ಇದರಿಂದ ಭೂಮಿಕಾಳಿಗೂ ಖುಷಿಯಾಗುತ್ತದೆ. ಕೊನೆಗೂ ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಂಡರು ಎಂದು ಮಂದಾಕಿನಿ ನಿಟ್ಟುಸಿರು ಬಿಡುತ್ತಾಳೆ. ಆದರೆ, ಗೌತಮ್ ಹಾಗೂ ಭೂಮಿಕಾ ಹೇಗೆ ಒಂದಾಗುತ್ತಾರೆ ಎಂಬ ಕುತೂಹಲ ಮೂಡಿದೆ.
More from Filmibeat