For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜಿನಿ

  By ಪ್ರಿಯಾ ದೊರೆ
  |

  ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಾ ಕಷ್ಟದ ಜೀವನ ನಡೆಸಿದವರು ರಜಿನಿ. ಸಾಕಷ್ಟು ಕನಸುಗಳನ್ನು ಹೊತ್ತು ಕಿರುತೆರೆಗೆ ಎಂಟ್ರಿಕೊಟ್ಟರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ ಅಮೃತ ವರ್ಷಿಣಿ ಧಾರಾವಾಹಿ ಮೂಲಕ ಮನೆ ಮಾತಾದರು.

  ಧಾರಾವಾಹಿಗಳಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಮಾಲ್ ಮಾಡಿದ್ದ ರಜಿನಿ, ಇದೀಗ ಸಿನಿಮಾರಂಗದಲ್ಲೂ ಮಿಂಚುತ್ತಿದ್ದಾರೆ. ಸದ್ಯ ಅವರ ಕನಸುಗಳು ನನಸಾಗುತ್ತಿದ್ದು, ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನೂ ರಜಿನಿ ಅವರು ಕರಗತ ಮಾಡಿಕೊಂಡಿದ್ದಾರೆ. ತುಮಕೂರು ಮೂಲದ ರಜಿನಿ ಅವರು ಈಗ ಸಿನಿಮಾ ಕಿರುತೆರೆಯಲ್ಲಿ ಸಕತ್ ಬ್ಯುಸಿಯಾಗಿರುವ ನಟಿ.

  ಆಂಕರಿಂಗ್ ಮಾಡಿರುವ ನಟಿ

  ಆಂಕರಿಂಗ್ ಮಾಡಿರುವ ನಟಿ

  ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟಿ ರಜಿನಿ. ಕೆಲ ಧಾರಾವಾಹಿಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಯಾಕೆಂದರೆ ಅವರ ಪಾತ್ರಗಳು ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿ ಬಿಟ್ಟಿರುತ್ತದೆ. ಹಾಗಾಗಿ ಅವಕಾಶಗಳು ದೊರೆಯುವುದು ಕಷ್ಟ. ಮೂರು ವರ್ಷಕ್ಕೂ ಹೆಚ್ಚು ಕಾಲ ಮೂಡಿ ಬಂದ ಧಾರಾವಾಹಿಯಲ್ಲಿ ರಜಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಆತ್ಮ ಬಂಧನ' ಧಾರಾವಾಹಿಯಲ್ಲಿ ನಟಿಸಿದರು. ಭಿನ್ನ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿದ್ದ ರಜಿನಿ ಅವರಿಗೆ ಅವಕಾಶಗಳು ಕಡಿಮೆಯಾದವು. ನಂತರದ ದಿನಗಳಲ್ಲಿ ಕೆಲ ರಿಯಾಲಿಟಿ ಶೋಗಳಲ್ಲಿ ರಜಿನಿ ಕಾಣಿಸಿಕೊಂಡರು. ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. ಕುಕ್ಕರಿ ಶೋ ಒಂದನ್ನು ರಜಿನಿ ಅವರೇ ಹೋಸ್ಟ್ ಮಾಡಿದ್ದರು ಕೂಡ.

  'ಡವ್ ಮಂಜ' ಚಿತ್ರದಲ್ಲಿ ರಜಿನಿ

  'ಡವ್ ಮಂಜ' ಚಿತ್ರದಲ್ಲಿ ರಜಿನಿ

  ಕಿರುತೆರೆಯಲ್ಲಿ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಜಿನಿ ಅವರ ಚೊಚ್ಚಲ ಸಿನಿಮಾ 'ಅಂಬುಜ' ರಿಲೀಸ್ ಆಗಿದೆ. ಅಂಬುಜ ಚಿತ್ರದಲ್ಲಿ ಖಡಕ್ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಜಿನಿ ಅವರು 'ಅಸುರನ ಕೈಯಲ್ಲಿ ಪಾರಿಜಾತ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ರಜಿನಿ ನಾಯಕಿ ಪಾರಿಜಾತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ 'ಡವ್ ಮಂಜ' ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

  ಹೊಸ ಧಾರಾವಾಹಿಯಲ್ಲೂ ನಟನೆ

  ಹೊಸ ಧಾರಾವಾಹಿಯಲ್ಲೂ ನಟನೆ

  ಸದ್ಯ ರಜಿನಿ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೆಲ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಮುಂದಿನ ದಿನಗಳಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ಇದೀಗ ಸ್ಟಾರ್ ಸುವರ್ಣದ ಹೊಸ ಧಾರಾವಾಹಿಯಲ್ಲೂ ಹಳ್ಳಿ ಮಗಳ ಪಾತ್ರದಲ್ಲಿ ರಜಿನಿ ನಟಿಸುತ್ತಿದ್ದಾರೆ. ಆ ಧಾರಾವಾಹಿಯ ಹೆಸರು ಕೀರ್ತಿ ಕುಮಾರ ಹಾಡುಗಾರ. ಸ್ಟಾರ್ ಸುವರ್ಣದಲ್ಲಿ ಬಹಳ ಹಿಂದೆಯೇ ಇದರ ಪ್ರೋಮೋ ರಿಲೀಸ್ ಆಗಿದ್ದು, ಧಾರಾವಾಹಿಯ ಪ್ರಸಾರ ಯಾವಾಗ ಎಂಬುದು ತಿಳಿದು ಬಂದಿಲ್ಲ.

  ಪ್ರೀತಿ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ

  ಪ್ರೀತಿ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ

  ಇನ್ನು ಸದ್ಯ ರಜಿನಿ ಅವರು ಜೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ಇದರಲ್ಲಿ ತಮ್ಮ ವಯಕ್ತಿಕ ವಿಚಾರಗಳ ಬಗ್ಗ ಹಂಚಿಕೊಂಡಿದ್ದಾರೆ. ಇನ್ನು ವೇದಿಕೆಯೊಂದರಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರಜಿನಿ ಹೌದು ಎಂದು ಹೇಳಿದ್ದಾರೆ. ಆದರೆ, ಯಾರವರು, ಮದುವೆ ಯಾವಾಗ ಎಂಬ ಯಾವ ವಿಚಾರವನ್ನು ಹೇಳಿಲ್ಲ. ಒಟ್ನಲ್ಲಿ ರಜಿನಿ ಅವರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  English summary
  Amruthavarshini Serial Fame Actress Rajini opens up about her love story. Actor Rajini busy in serials and films. Rajini revealed about her boyfriend.
  Sunday, January 15, 2023, 11:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X