»   » ಧಾರಾವಾಹಿಗಳಿಂದ ಆಗುವ ಅನಾಹುತಕ್ಕೆ ಕಾರಣ ಯಾರು..?

ಧಾರಾವಾಹಿಗಳಿಂದ ಆಗುವ ಅನಾಹುತಕ್ಕೆ ಕಾರಣ ಯಾರು..?

Posted By:
Subscribe to Filmibeat Kannada

ಪ್ರತಿದಿನ ಸಂಜೆಯಾದರೆ ಸಾಕು ಯಾವುದೇ ಚಾನೆಲ್ ನೋಡಿದರೂ ಧಾರಾವಾಹಿಗಳು ರಾರಾಜಿಸುತ್ತಿರುತ್ತವೆ. ಸಂಜೆ ಶುರುವಾಗಿ ರಾತ್ರಿ ಮಲಗುವವರೆಗೂ ಟಿವಿ ಮುಂದೆ ಹೆಣ್ಣು ಮಕ್ಕಳನ್ನು ಕೂರಿಸುವ ಶಕ್ತಿ ಅಂತಹ ಸೀರಿಯಲ್ ಗಳಿಗೆ ಇದೆ.

ಇಂತಹ ಧಾರಾವಾಹಿಗಳಿಂದ ಇದೀಗ ಒಂದು ಅನಾಹುತ ಸಂಭವಿಸಿದೆ. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ನಂದಿನಿ' ಧಾರಾವಾಹಿ ನೋಡಿ ಅದರ ಒಂದು ದೃಶ್ಯವನ್ನು ಅನುಕರಣೆ ಮಾಡಲು ಹೋಗಿ ಪುಟ್ಟ ಬಾಲಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹರಿಹರದ ಸೇಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರಾರ್ಥನಾ ಸಾವಿಗೀಡಾಗಿರುವ ಬಾಲಕಿ.

ಅಂದಹಾಗೆ, ಒಂದು ಧಾರಾವಾಹಿ ಪ್ರಭಾವಶಾಲಿ ಮಾಧ್ಯಮ. ಅದರಿಂದ ಆಗುವ ಈ ರೀತಿ ದುರ್ಘಟನೆಗಳಿಗೆ ಕಾರಣ ಯಾರು.? ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಕುರಿತ ಒಂದು ವಿಶೇಷ ವರದಿ ಮುಂದಿದೆ ಓದಿ..

ಕೆಲ ಧಾರಾವಾಹಿಗಳು

'ನಂದಿನಿ', 'ಯಾರೇ ನಿ ಮೋಹಿನಿ', 'ನಾಗಿಣಿ', 'ನಾಗಕನ್ನಿಕೆ', 'ನಿಗೂಡ ರಾತ್ರಿ', 'ನೀಲಿ' ಈ ರೀತಿ ಸದ್ಯ ಕನ್ನಡದ ಎಲ್ಲ ವಾಹಿನಿಗಳಲ್ಲಿಯೂ ಮಾಟ-ಮಂತ್ರ, ದೆವ್ವ-ಭೂತ, ಹಾವು ಈ ವಿಷಯಗಳ ಮೇಲೆ ಇರುವ ಧಾರಾವಾಹಿಗಳು ಹೆಚ್ಚಾಗುತ್ತದೆ.

ಟ್ರೆಂಡ್ ಶುರುವಾಗಿದೆ

ಸದ್ಯ ಈಗಿನ ಧಾರಾವಾಹಿಗಳಲ್ಲಿ ಇದೇ ಒಂದು ಟ್ರೆಂಡ್ ಆಗಿದೆ. ಪ್ರತಿ ವಾಹಿನಿಯಲ್ಲಿಯೂ ಒಂದಾದರೂ ಈ ರೀತಿಯ ಧಾರಾವಾಹಿ ಇದೆ. ಆಗ ಅತ್ತೆ ಸೊಸೆ ಜಗಳದ ಧಾರಾವಾಹಿಗಳ ಅಬ್ಬರ ಇದ್ದರೇ, ಈಗ ಹಾರರ್ ಥ್ರಿಲ್ಲರ್ ಸೀರಿಯಲ್ ಹವಾ ಜೋರಾಗಿದೆ.

ಟಿ.ಆರ್.ಪಿ ಅನಿವಾರ್ಯತೆ

ಕೆಲವು ಬಾರಿ ಇಂತಹ ಧಾರಾವಾಹಿಗಳು ವಾಹಿನಿಗೆ ಕೂಡ ಅನಿವಾರ್ಯವಾಗುತ್ತದೆ. 'ಟಿ.ಆರ್.ಪಿ ಮತ್ತು ಕಾಂಪಿಟೇಶನ್' ದೃಷ್ಟಿಯಿಂದ ಈ ರೀತಿಯ ಧಾರಾವಾಹಿಗಳನ್ನು ಮಾಡಲೇ ಬೇಕಾದ ಪರಿಸ್ಥಿತಿ ಹುಟ್ಟಿಕೊಳ್ಳುತ್ತದೆ.

ಒಳ್ಳೆಯ ಸಂದೇಶ ಕೋಡಿ

ಸ್ಪರ್ಧೆ, ಟ್ರೆಂಡ್ ಏನೇ ಇರಬಹುದು. ಒಂದು ವಾಹಿನಿ.. ಒಂದು ಸೀರಿಯಲ್... ಎಂದ ಮೇಲೆ ಅದನ್ನು ಲಕ್ಷಾಂತರ ಜನರು ನೋಡುತ್ತಿರುತ್ತಾರೆ. ಹೀಗಿರುವಾಗ, ಮನೆ ಮಂದಿ ನೋಡುವ ಧಾರಾವಾಹಿಗಳಲ್ಲಿ ಒಳ್ಳೆಯ ಸಂದೇಶವನ್ನು ನೀಡಬೇಕು.

ಇದು ಮನರಂಜನೆಗೆ ಮಾತ್ರ

ಧಾರಾವಾಹಿಯ ತಂಡದ ಜವಾಬ್ದಾರಿಗಳು ಒಂದು ಕಡೆ ಆದರೆ, ವೀಕ್ಷಕರು ಕೂಡ ಧಾರಾವಾಹಿಯನ್ನು ಮನರಂಜನೆ ದೃಷ್ಟಿಯಿಂದ ಮಾತ್ರ ತೆಗೆದುಕೊಳ್ಳಬೇಕು. ಧಾರಾವಾಹಿ.. ಸಿನಿಮಾ... ಎನ್ನುವುದು ಕಾಲ್ಪನಿಕ ಪ್ರಪಂಚ. ಅಲ್ಲಿ ಮಾಡುವ ಸಾಹಸವನ್ನು ನೋಡಿ ಖುಷಿ ಪಡಬೇಕೆ ವಿನಃ ಅದನ್ನು ತಾವು ಪ್ರಯತ್ನಿಸುವುದಕ್ಕೆ ಹೋಗಬಾರದು.

ಒಳ್ಳೆದನ್ನು ಮಾತ್ರ ಆಯ್ಕೆ ಮಾಡಿ

ಬರೀ ಧಾರಾವಾಹಿ ಮಾತ್ರವಲ್ಲ ಸಮಾಜದಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇರುತ್ತದೆ. ನಮ್ಮ ಮುಂದೆ ಇರುವ ಎರಡು ಆಯ್ಕೆಯಲ್ಲಿ ಒಳ್ಳೆಯನ್ನು ಆರಿಸಿಕೊಳ್ಳಬೇಕು, ಕೆಟ್ಟದನ್ನು ಬಿಡಬೇಕು.

'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

ಯಾರು ಜವಾಬ್ದಾರಿ..?

ಧಾರಾವಾಹಿ ನೋಡಿ ಪುಟ್ಟ ಮಗು ನನ್ನ ಪ್ರಾಣ ಕಳೆದುಕೊಂಡಿದೆ. ಇನ್ನು ಈ ರೀತಿ ಘಟನೆ ಆದಾಗ ಅದಕ್ಕೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆ ಬರುತ್ತದೆ. ಒಂದು ಕಡೆ ಅದು ಧಾರಾವಾಹಿಗಳದೆ ತಪ್ಪು ಆಗಿರಬಹುದು. ಆದರೆ ಮಕ್ಕಳ ಮೇಲೆ ಪರಿಣಾಮ ಬೀರುವ ಇಂತಹ ಧಾರಾವಾಹಿಗಳಿಂದ ಮಕ್ಕಳನ್ನು ಅವರ ಪೋಷಕರು ದೂರ ಇಡಬೇಕು. ಹಾರರ್ ಥ್ರಿಲ್ಲರ್ ರೀತಿಯ ಸೀರಿಯಲ್ ಗಳನ್ನು ಮಕ್ಕಳಿಗೆ ತೋರಿಸಬಾರದು.

English summary
Little girl committed suicide after imitating Udaya TV Nandhini serial scene, Are Kannada serials going in a right way..?. ಕನ್ನಡದ ಧಾರಾವಾಹಿಗಳು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದೆಯೇ..? ಅವುಗಳಿಂದ ಆಗುವ ಅನಾಹುತಕ್ಕೆ ಕಾರಣ ಯಾರು..?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada