ತೇಜಸ್ವಿನಿ ತಂದೆ ಆರೋಗ್ಯ ಹೇಗಿದೆ.?
''ಅಪ್ಪ ಇನ್ನೂ ಹುಷಾರಾಗಿಲ್ಲ. ಎರಡು ಕಿಡ್ನಿಗೂ ಸೋಂಕು ತಗುಲಿದೆ. ಡೈಯಾಲಿಸಿಸ್ ನಡೆಯುತ್ತಿದೆ. ಹೃದಯ ಸಂಬಂಧಿ ಖಾಯಿಲೆ ಕೂಡ ಇದೆ. ಚಿಕಿತ್ಸೆ ನಡೆಯುತ್ತಿದೆ'' ಅಂತ ತೇಜಸ್ವಿನಿ ತಿಳಿಸಿದ್ದಾರೆ.
ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?
ಅಪ್ಪ ಕಾರಣ
''ನನಗೆ ನನ್ನ ಅಪ್ಪನೇ ಶಕ್ತಿ. ನಾನು ಇಲ್ಲಿಂದ ಹೊರಗೆ ಹೋಗಲು ನನ್ನ ತಂದೆ ಕಾರಣ. ಪುನಃ ವಾಪಸ್ ಬರಲು ನನ್ನ ತಂದೆ ಕಾರಣ. ನೀನು ಒಳಗಡೆ ಇರಬೇಕು. ನನ್ನಿಂದ ನೀನು ಹೊರಗೆ ಬರಬಾರದು ಅಂತ ಹೇಳುತ್ತಿದ್ದರು'' ಎಂದರು ತೇಜಸ್ವಿನಿ
ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!
ಮನಸೆಲ್ಲ ಇಲ್ಲೇ ಇತ್ತು
''ನನ್ನ ಮನಸೆಲ್ಲ ಇಲ್ಲೇ ಇತ್ತು. ಎಷ್ಟು ಖುಷಿ ಆಗುತ್ತಿದೆ ಎಲ್ಲರನ್ನ ನೋಡಿ ಅಂದ್ರೆ... ಥ್ಯಾಂಕ್ಯು 'ಬಿಗ್ ಬಾಸ್'. ನಾನು ಇವತ್ತು ಇಲ್ಲಿ ಇರಲು ನನ್ನ ತಂದೆಯೇ ಕಾರಣ. ನಾನು ಇವತ್ತಿಂದ ನನ್ನ ತಂದೆಗಾಗಿ ಆಡುತ್ತೇನೆ. ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಂಡಿದ್ದೆ'' - ತೇಜಸ್ವಿನಿ
ಕುಟುಂಬ ಬಯಸಿದ ಕಾರಣ...
ತೇಜಸ್ವಿನಿ ತಂದೆಗೆ ಕಿಡ್ನಿ ಫೇಲ್ಯೂರ್ ಆಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನ ಆಕೆಯ ಕುಟುಂಬ ಬಯಸಿದ ಕಾರಣ, 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರ ನಡೆದರು. ಇದೀಗ ಎರಡೇ ದಿನದಲ್ಲಿ ತೇಜಸ್ವಿನಿ 'ದೊಡ್ಮನೆ'ಗೆ ವಾಪಸ್ ಆಗಿದ್ದಾರೆ.
ಆಟಕ್ಕೆ ಮರಳಿದ ತೇಜಸ್ವಿನಿ
''ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇಲ್ಲ. ಇಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದೆ. ನಿಜವಾಗಲೂ ಇಲ್ಲಿಗೆ ವಾಪಸ್ ಬರಬೇಕು ಅಂತ ನನಗೆ ಇಷ್ಟ ಇದೆ. 'ಬಿಗ್ ಬಾಸ್' ಮನಸ್ಸು ಮಾಡಿದರೆ ವಾಪಸ್ ಬರುತ್ತೇನೆ'' ಅಂತ ಹೇಳಿ ಹೋಗಿದ್ದ ತೇಜಸ್ವಿನಿ ಈಗ ಆಟಕ್ಕೆ ಮರಳಿದ್ದಾರೆ.
ಇಂದು ಔಟ್ ಆಗೋದು ಯಾರು.?
ಅಂದ್ಹಾಗೆ, ಈ ವಾರ ನಟಿ ತೇಜಸ್ವಿನಿ ಕೂಡ ನಾಮಿನೇಟ್ ಆಗಿದ್ದಾರೆ. ಇಂದು 'ಬಿಗ್ ಬಾಸ್' ಮನೆಯಿಂದ ಯಾರು ಹೊರ ಹೋಗುತ್ತಾರೋ, ಕಾದು ನೋಡಬೇಕು.