»   » ಇಬ್ಬರ ಜೊತೆ ಕಿತ್ತಾಡಿ ಮೂರನೇಯವರಿಗೆ ಹೊಡೆದ 'ಕಿರಿಕ್' ಸಂಯುಕ್ತ.!

ಇಬ್ಬರ ಜೊತೆ ಕಿತ್ತಾಡಿ ಮೂರನೇಯವರಿಗೆ ಹೊಡೆದ 'ಕಿರಿಕ್' ಸಂಯುಕ್ತ.!

Posted By:
Subscribe to Filmibeat Kannada

ಅದ್ಯಾವ ಘಳಿಗೆಯಲ್ಲಿ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಎಂಬ ಸಿನಿಮಾ ಮಾಡಿದ್ರೋ, ಅಂದಿನಿಂದ ಸ್ಯಾಂಡಲ್ ವುಡ್ ನಲ್ಲಿ ಸಂಯುಕ್ತ ಅಂದ್ರೆ 'ಕಿರಿಕ್', 'ಕಿರಿಕ್' ಅಂದ್ರೆ ಸಂಯುಕ್ತ ಎಂಬಂತಾಗಿದೆ.

ತಮಿಳು ಸಿನಿಮಾಗಾಗಿ ಕನ್ನಡ ಸಿನಿಮಾಗೆ ಕೈ ಕೊಟ್ಟು ವಿವಾದದ ಕೇಂದ್ರ ಬಿಂದು ಆಗಿದ್ದ ಸಂಯುಕ್ತ ಹೆಗ್ಡೆ, ಇದೀಗ ಸಮೀರಾಚಾರ್ಯ ಮೇಲೆ ಆಪಾದನೆ ಮಾಡಿ... ಅವರ ಮೇಲೆ ಕೈ ಮಾಡಿ 'ಬಿಗ್ ಬಾಸ್' ಮನೆಯಿಂದ ಕಿಕ್ ಔಟ್ ಆಗಿದ್ದಾರೆ.

ದೈಹಿಕ ಹಲ್ಲೆ ನಡೆಸಿ 'ಬಿಗ್ ಬಾಸ್' ಮನೆಯಿಂದ ಹೊರಬಂದ ಕುಖ್ಯಾತಿಗೆ ಪಾತ್ರವಾಗಿರುವ ಸಂಯುಕ್ತ, ಸಮೀರಾಚಾರ್ಯಗೆ ಹೊಡೆಯುವ ಕೆಲವೇ ಕೆಲವು ನಿಮಿಷಗಳ ಹಿಂದೆ ರಿಯಾಝ್ ಹಾಗೂ ದಿವಾಕರ್ ಜೊತೆಗೂ ಕಿತ್ತಾಡಿಕೊಂಡಿದ್ದರು. ಮುಂದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್ ಏನು.?

'ಮೇಲಾ.. ಫೀಮೇಲಾ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಸದ್ಯ ಚಾಲ್ತಿಯಲ್ಲಿದೆ. ಈ ಟಾಸ್ಕ್ ಅನುಸಾರ ಮನೆಯಲ್ಲಿ ಎರಡು ಶಕ್ತಿ ಕೇಂದ್ರ ನಿರ್ಮಿಸಲಾಗಿತ್ತು. ಒಂದು ಕೇಂದ್ರ ಪುರುಷರದ್ದಾಗಿದ್ದರೆ, ಮತ್ತೊಂದು ಕೇಂದ್ರ ಮಹಿಳೆಯರದ್ದು. ಕಾಲ ಕಾಲಕ್ಕೆ ನೀಡುವ ಸವಾಲುಗಳಲ್ಲಿ ಸೋಲುವ ತಂಡ, ಶಕ್ತಿ ಕೇಂದ್ರಗಳಲ್ಲಿ ಬ್ಯಾಟರಿಯ ಮಟ್ಟವನ್ನು ಕಳೆದುಕೊಳ್ಳಲಿದೆ. ಟಾಸ್ಕ್ ಅಂತ್ಯದಲ್ಲಿ ಯಾರ ಶಕ್ತಿ ಕೇಂದ್ರದಲ್ಲಿ ಅತಿ ಹೆಚ್ಚು ಬ್ಯಾಟರಿ ಮಟ್ಟವನ್ನು ಹೊಂದುತ್ತದೆಯೋ, ಆ ತಂಡ ವಿಜೇತರಾಗುತ್ತಾರೆ.

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ

ಶಕ್ತಿ ಗೋಪುರ ಕಾಪಾಡಿಕೊಳ್ಳಬೇಕು

'ಶಕ್ತಿ ಗೋಪುರ'ವನ್ನ ಹೊಂದಿರುವ ತಂಡ ಅಡೆ ತಡೆ ಇಲ್ಲದೆ ಮನೆಯ ಎಲ್ಲೆಡೆ ಓಡಾಡಬಹುದಿತ್ತು. ಈ ಗೋಪುರವನ್ನು ಎದುರಾಳಿ ತಂಡ ನಾಶ ಮಾಡಿದರೆ (ಎಲ್ಲ ಹಗ್ಗಗಳನ್ನು ಕಟ್ ಮಾಡಿದರೆ) ಮನೆಯಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಕಳೆದುಕೊಳ್ಳುತ್ತದೆ ಎಂಬುದು ಆಟದ ನಿಯಮ.

'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!

ರಿಯಾಝ್ ಕೈಯಲ್ಲಿ ರಕ್ತ ಚಿಮ್ಮಿತು

ಮಹಿಳೆಯರ 'ಶಕ್ತಿ ಗೋಪುರ'ವನ್ನು ನಾಶ ಮಾಡಲು ರಿಯಾಝ್ ಮುಂದಾದಾಗ, ಅವರ ಕೈಗೆ ಕತ್ತರಿ ತಾಗಿ ಬೆರಳು ಸೀಳಿತು. ರಿಯಾಝ್ ಕೈಯಲ್ಲಿ ರಕ್ತ ಚಿಮ್ಮಿತು.

''ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ'' ಎಂದ ನಟ ಜಗ್ಗೇಶ್

ವಾಕ್ಸಮರಕ್ಕೆ ಇಳಿದ ಸಂಯುಕ್ತ

''ಕೈ ಕಟ್ ಮಾಡಿದರು'' ಎಂದ ರಿಯಾಝ್ ಜೊತೆಗೆ ಸಂಯುಕ್ತ ವಾಕ್ಸಮರ ಶುರು ಆಯ್ತು.

'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ 'ಕಿಕ್' ಔಟ್ ಆಗಿದ್ಯಾಕೆ.?

ದಿವಾಕರ್ ನ ನೂಕಿದ ಸಂಯುಕ್ತ

ಮಹಿಳೆಯರ 'ಶಕ್ತಿ ಗೋಪುರ'ವನ್ನು ನಾಶ ಮಾಡಲು ದಿವಾಕರ್ ಮುಂದಾದಾಗ, ಅವರನ್ನ ಸಂಯುಕ್ತ ನೂಕಿದರು. ''ನೀವು ನೂಕಿದರೆ ನಾನು ನೂಕುತ್ತೇನೆ'' ಎಂದು ದಿವಾಕರ್ ಹೇಳಿದಾಗ ಇಬ್ಬರ ನಡುವೆ ವಾಗ್ಯುದ್ಧ ನಡೆಯಿತು.

'ಕಿರಿಕ್' ಸಂಯುಕ್ತಾಗೆ ಕ್ಲಾಸ್ ತಗೊಂಡ ಪ್ರಥಮ್ ಮತ್ತು ಕೀರ್ತಿ!

ಚಂದನ್ ಶೆಟ್ಟಿಗೆ ಕೋಪ

ಮಹಿಳೆಯರ 'ಶಕ್ತಿ ಗೋಪುರ'ವನ್ನು ನಾಶ ಮಾಡಲು ಚಂದನ್ ಶೆಟ್ಟಿ ಮುಂದೆ ಬಂದಾಗ, ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಕುಳಿತುಕೊಂಡರು. ಸಂಯುಕ್ತ ರವರ ಈ ವರ್ತನೆ ಚಂದನ್ ಗೆ ಕಿರಿಕಿರಿ ಆಯ್ತು.

ಸಮೀರಾಚಾರ್ಯ ಗೆ ಹೊಡೆದ ಸಂಯುಕ್ತ

ಚಂದನ್ ಶೆಟ್ಟಿ ರನ್ನ ಬಿಡಿಸಲು ಸಮೀರಾಚಾರ್ಯ ಮುಂದೆ ಬಂದಾಗ, ''ನನ್ನನ್ನ ಮುಟ್ಟಿದರು'' ಎಂದು ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದರು. ದೈಹಿಕ ಹಲ್ಲೆ ಮಾಡಿ ನಿಯಮ ಮೀರಿದ ಕಾರಣ ಸಂಯುಕ್ತ ರನ್ನ 'ಬಿಗ್ ಬಾಸ್' ಹೊರ ಹಾಕಿದರು.

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ: ಹೊರಹಾಕಿದ 'ಬಿಗ್ ಬಾಸ್'.!

ವಾದ ಮಾಡಿದ ಸಂಯುಕ್ತ

''ಮುಟ್ಟಿದರು, ಮುಟ್ಟಿದರು'' ಎಂದು ಸಂಯುಕ್ತ ಕೂಗಾಡುತ್ತಿದ್ದಾಗ, ''ಮುಟ್ಟುವುದು ಅಂದ್ರೆ ಹೇಗೆ, ನೀನು ಹೇಗೆ ಎದ್ದೇಳುತ್ತಿದ್ದೆ.?'' ಎಂದು ಚಂದನ್ ಶೆಟ್ಟಿ ಪ್ರಶ್ನೆ ಮಾಡಿದಾಗ ''ಕೈ ಹಿಡ್ಕೊಂಡು ಎಳೆಯಲಿ'' ಎಂದರು ಸಂಯುಕ್ತ ಹೆಗ್ಡೆ.

ಯಾವುದು ದೊಡ್ಡ ವಿಷಯ.?

''ಒಂದು ಹುಡುಗಿಗೆ ಹುಡುಗ ಮುಟ್ಟಿದರೆ ದೊಡ್ಡ ಸಮಸ್ಯೆ. ಅದೇ ಹುಡುಗನಿಗೆ ಹುಡುಗಿ ಏನೇ ಮಾಡಿದರೂ ಮ್ಯಾಟರ್ ಅಲ್ಲವೇ ಅಲ್ಲ'' ಎಂದು ತಮ್ಮ ಅಸಮಾಧಾನವನ್ನ ಚಂದನ್ ಶೆಟ್ಟಿ ಹೊರ ಹಾಕಿದರು.

English summary
Bigg Boss Kannada 5: Week 10: Samyuktha Hegde fought with Riyaz and Diwakar before hitting Sameer Acharya. Here is the complete report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X